ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಮ್ಯಾಚ್ ನಡೆಯಲಿವೆ ಎಂದು KSCA ಅಧಿಕೃತವಾಗಿ ಘೋಷಿಸಿದೆ.

ಬೆಂಗಳೂರು ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (KSCA) ಅಧಿಕೃತವಾಗಿ ಘೋಷಿಸಿದೆ.
KSCA ಹೆಚ್ಚಿನ ಆದ್ಯತೆ
ಈ ವಿಷಯವನ್ನು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಐಪಿಎಲ್ ಪಂದ್ಯಗಳ ಯಶಸ್ವಿ ಆಯೋಜನೆಗಾಗಿ ಜಿಬಿಎ, ಬೆಸ್ಕಾಂ ಹಾಗೂ ಜಲಮಂಡಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ಪಂದ್ಯಾವಳಿಗಳ ಸಂದರ್ಭದಲ್ಲಿ ಸುರಕ್ಷತೆಗೆ ಕೆಎಸ್ಸಿಎ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಹೇಳಿದರು.
ಇದನ್ನು ಓದಿ : ಸಂಸದ B.Y Raghavendra ಪ್ರಯಾಣಿಸುತ್ತಿದ್ದ ಕಾರು ಅಪಘಾತ

ರಾಜ್ಯ ಸರ್ಕಾರ ಅನುಮತಿ – IPL
ಇತ್ತೀಚೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಸರ್ಕಾರದ ಅನುಮತಿಯ ಹಿನ್ನೆಲೆಯಲ್ಲಿ ಇದೀಗ ಕೆಎಸ್ಸಿಎ ಅಧಿಕೃತ ಘೋಷಣೆ ಮಾಡಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿದೆ.
ಮುಂದಿನ ದಿನಗಳಲ್ಲಿ ಪಂದ್ಯಗಳ ದಿನಾಂಕ ಹಾಗೂ ವೇಳಾಪಟ್ಟಿ ಕುರಿತು ಹೆಚ್ಚಿನ ಮಾಹಿತಿಯನ್ನು ಪ್ರಕಟಿಸಲಾಗುವುದು ಎಂದು ಕೆಎಸ್ಸಿಎ ತಿಳಿಸಿದೆ.

ಇದನ್ನು ನೋಡಿ : ಧಾರವಾಡ: ಲ್ಯಾಬ್ಗೆ ಹೋಗುವುದಾಗಿ ಹೇಳಿಹೋದ ಯುವತಿ ಶವವಾಗಿ ಪತ್ತೆ!




