ಬೆಂಗಳೂರಲ್ಲಿ ರೌಡಿ ಶೀಟರ್ Mohammed Shabeer ಕೊಲೆ ಕೇಸಲ್ಲಿ 8 ಆರೋಪಿಗಳು ಅರೆಸ್ಟ್.

ಬೆಂಗಳೂರು ನಗರದಲ್ಲಿ ನಡೆದ ರೌಡಿಶೀಟರ್ ಮೊಹಮ್ಮದ್ ಶಬ್ಬೀರ್ ಕೊಲೆ ಪ್ರಕರಣದಲ್ಲಿ ಬಂಡೆಪಾಳ್ಯ ಠಾಣೆಯ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
8 ಆರೋಪಿಗಳು ಅರೆಸ್ಟ್
ನೂರುಲ್ಲಾ, ನದೀಮ್, ಸಲ್ಮಾನ್ ಖಾನ್, ಮೊಹಮ್ಮದ್ ಆಲಿ, ಸೈಯದ್ ಇಸ್ಮಾಯಿಲ್, ಮೊಹಮ್ಮದ್ ಸಿದ್ದಿಕ್, ಕಲೀಂ ಮತ್ತು ಉಮ್ರೇಜ್ ಬಂಧಿತ ಆರೋಪಿಗಳಾಗಿದ್ದಾರೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಜನವರಿ.12ರಂದು ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ರೌಡಿ ಶೀಟರ್ ಮೊಹಮ್ಮದ್ ಶಬ್ಬೀರ್ ಕೊಲೆ ಮಾಡಲಾಗಿತ್ತು. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕೋರಮಂಗಲ ಠಾಣೆ ರೌಡಿ ಶೀಟರ್ ಶಬ್ಬ್ರೀರ್ ಹತ್ಯೆ ಮಾಡಲಾಗಿತ್ತು.
ಬಂಡೆಪಾಳ್ಯ ಠಾಣೆಯ ಪೊಲೀಸರಿಂದ ಬಂಧನ
Mohammed Shabeer ಹತ್ಯೆಯ ಬಳಿಕ ಆರೋಪಿಗಳು ಹೈದರಾಬಾದ್ ಮತ್ತು ಮುಂಬೈಗೆ ಓಡಿಹೋಗಿದ್ದರು. ಬಂಧನಕ್ಕೆ ಬಲೆ ಬೀಸಿದ್ದಂತ ಪೊಲೀಸರು ಕುಟುಂಬಸ್ಥರನ್ನು ಭೇಟಿಯಾಗಲು ರೈಲ್ವೆ ನಿಲ್ದಾಣಕ್ಕೆ ಆರೋಪಿಗಳು ಬಂದಿದ್ದಂತ ವೇಳೆಯಲ್ಲಿ ಬಂಡೆಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಇದನ್ನು ನೋಡಿ : 1 ತಿಂಗಳಿಂದ ಗ್ರಾಮಸ್ಥರಿಗೆ ಕಾಟ ಕೊಡ್ತಿದ್ದ ಭಕ್ಷಕ ಚಿರತೆಗಳು ಸೆರೆ




