Kitchen Recipe : ಸಾಮಾನ್ಯವಾಗಿ ಚಿಕನ್ ಅಥವಾ ಮಟನ್ ಬಳಸಿ ಕಬಾಬ್ ತಯಾರಿಸುವುದು ಸಾಮಾನ್ಯ. ಆದರೆ ಈ ಬಾರಿ ಬೋನ್ಲೆಸ್ ಫಿಶ್ ಬಳಸಿ ಕ್ರಿಸ್ಪಿ ಮತ್ತು ರುಚಿಯಾದ ಫಿಶ್ ಕಬಾಬ್ ಅನ್ನು ಕಡಿಮೆ ಸಮಯದಲ್ಲಿ, ಸುಲಭವಾಗಿ ಮನೆಯಲ್ಲೇ ಮಾಡಬಹುದು.

Kitchen Recipe : ಸಂಜೆ ಟೀ ಟೈಮ್ ಸ್ನ್ಯಾಕ್ ಅಥವಾ ಪಾರ್ಟಿ ಸ್ಟಾರ್ಟರ್ಗೆ ಇದು ಸೂಪರ್ ಆಯ್ಕೆ.
🐟 ಬೇಕಾಗುವ ಸಾಮಗ್ರಿಗಳು (Ingredients)
- ಬೋನ್ಲೆಸ್ ಫಿಶ್ – ಅಗತ್ಯ ಪ್ರಮಾಣ
- ಶುಂಠಿ–ಬೆಳ್ಳುಳ್ಳಿ ಪೇಸ್ಟ್
- ಕಾರ್ನ್ ಫ್ಲೋರ್
- ಕೆಂಪು ಖಾರದ ಪುಡಿ
- ಅರಿಶಿನ ಪುಡಿ
- ಉಪ್ಪು – ರುಚಿಗೆ ತಕ್ಕಂತೆ
- ನಿಂಬೆ ರಸ
- ಕರಿಮೆಣಸಿನ ಪುಡಿ
- ಗರಂ ಮಸಾಲ
- ಎಣ್ಣೆ – ಕರಿಯಲು
ಇದನ್ನು ಓದಿ : Sira|ಅಮಾವಾಸ್ಯೆ ಹಿನ್ನೆಲೆ ಮನೆ ಮುಂದೆ ವಾಮಾಚಾರ
🍽️ ಫಿಶ್ ಕಬಾಬ್ ಮಾಡುವ ವಿಧಾನ (Method)
ಮೊದಲು ಬೋನ್ಲೆಸ್ ಫಿಶ್ ಅನ್ನು ಚೆನ್ನಾಗಿ ತೊಳೆದು ನೀರು ಆರಿಸಿಕೊಳ್ಳಿ.
ಅದಕ್ಕೆ ಅರಿಶಿನ ಪುಡಿ, ಕೆಂಪು ಖಾರದ ಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ, ಗರಂ ಮಸಾಲ, ಕರಿಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಕಾರ್ನ್ ಫ್ಲೋರ್ ಸೇರಿಸಿ ಮತ್ತೆ ಒಮ್ಮೆ ಚೆನ್ನಾಗಿ ಕಲಸಿ, 10–15 ನಿಮಿಷ ಬದಿಗಿಟ್ಟು ಮೆರಿನೇಟ್ ಆಗಲು ಬಿಡಿ.
ಇದಾದ ನಂತರ ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಕಾದಾಗ, ಮೆರಿನೇಟ್ ಮಾಡಿದ ಫಿಶ್ ತುಂಡುಗಳನ್ನು ಎಣ್ಣೆಗೆ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ.
ಅಷ್ಟೇ… ಥಟ್ ಅಂತಾ ಕ್ರಿಸ್ಪಿ ಫಿಶ್ ಕಬಾಬ್ ರೆಡಿ! 😋
ಸರ್ವಿಂಗ್ ಟಿಪ್
ಈ ಫಿಶ್ ಕಬಾಬ್ ಅನ್ನು ನಿಂಬೆ ತುಂಡು, ಉಳ್ಳಿ ಸ್ಲೈಸ್ ಹಾಗೂ ಗ್ರೀನ್ ಚಟ್ನಿ ಜೊತೆ ಸರ್ವ್ ಮಾಡಿದರೆ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.
ಇದನ್ನು ನೋಡಿ : ಮದುವೆ ಮಾಡಿಸಿದ ಪೂಜಾರಿಗೆ ಲಾಂಗು ಮಚ್ಚು ತೋರ್ಸಿದ್ರಂತೆ ರಾಜೀವ್ ಗೌಡ




