Tumakuru ನಗರದಲ್ಲಿ ಕಂಗೊಳಿಸಿದ VOTE FOR GILlI ಬ್ಯಾನರ್ – ಟಗರು ಟಗರು ತಮಟೆ ಏಟು – ಗಿಲ್ಲಿ ನಟ Ultimatuu” ಎಂದು ಬ್ಯಾನರ್.

ಬಿಗ್ಬಾಸ್ ಸೀಸನ್ 12 ಇದೀಗ ಫೈನಲ್ ಹಂತಕ್ಕೆ ತಲುಪಿದ್ದು, ಫಿನಾಲೆ ಈ ವಾರಾಂತ್ಯದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಿಗಳ ಗೆಲುವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಈ ಸೀಸನ್ನ ವಿನ್ನರ್ ಗಿಲ್ಲಿ ಆಗಬಹುದು ಎಂಬ ಮಾತುಗಳು ಜೋರಾಗಿವೆ. ನೆಟ್ಟಿಗರು ಗಿಲ್ಲಿ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದರ ಜೊತೆಗೆ, ಅವರ ಬೆಂಬಲದಲ್ಲಿ ಪೋಸ್ಟ್ಗಳು ಹಾಗೂ ವೀಡಿಯೋಗಳು ವೈರಲ್ ಆಗುತ್ತಿವೆ.
ಇದನ್ನು ಓದಿ : 2 ಮಕ್ಕಳ ತಂದೆಯನ್ನು ಲವ್ ಮಾಡಿ ರಸ್ತೆ ಮಧ್ಯದಲ್ಲೇ ಹೆಣವಾದ ಮಹಿಳೆ!

Tumakuru – “VOTE FOR GILLI” ಎಂಬ ದೊಡ್ಡ ಬ್ಯಾನರ್
ಇದರ ಬೆನ್ನಲ್ಲೇ Tumkur ನಲ್ಲೂ ಗಿಲ್ಲಿ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿದೆ. ನಗರದ ಕೋಟೆ ಆಂಜನೇಯ ಸರ್ಕಲ್ನಲ್ಲಿ “VOTE FOR GILLI” ಎಂಬ ದೊಡ್ಡ ಬ್ಯಾನರ್ಗಳನ್ನು ಹಾಕಲಾಗಿದ್ದು, ಜನರ ಗಮನ ಸೆಳೆಯುತ್ತಿದೆ. “ಟಗರು ಟಗರು ತಮಟೆ ಏಟು – ಗಿಲ್ಲಿ ನಟ Ultimatuu” ಎಂಬ ಆಕರ್ಷಕ ಬರಹಗಳೊಂದಿಗೆ ಬ್ಯಾನರ್ಗಳು ಹಾಕಿ , ಗಿಲ್ಲಿ ಪರ ಅಭಿಮಾನಿಗಳ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

TRP ಕಿಂಗ್
TRP ಕಿಂಗ್ ಹಾಗೂ ಕಾಮಿಡಿ ಸ್ಟಾರ್ ಆಗಿ ಜನಮನ ಗೆದ್ದಿರುವ ಗಿಲ್ಲಿ ನಟ ಗೆದ್ದು ಬರಲಿ ಎಂಬ ಆಶಯವನ್ನು ತುಮಕೂರಿನ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ‘ವೋಟ್ ಫಾರ್ ಗಿಲ್ಲಿ’ ಅಭಿಯಾನವೂ ಜೋರಾಗಿ ನಡೆಯುತ್ತಿದ್ದು, ಫಿನಾಲೆ ಸಮೀಪಿಸುತ್ತಿರುವಂತೆ ಗಿಲ್ಲಿ ಗೆಲುವಿನ ನಿರೀಕ್ಷೆ ಮತ್ತಷ್ಟು ಗಟ್ಟಿಯಾಗುತ್ತಿದೆ. ಇದೀಗ ಫೈನಲ್ ದಿನದಲ್ಲಿ ಪ್ರೇಕ್ಷಕರ ಮತವೇ ಗಿಲ್ಲಿ ಭವಿಷ್ಯವನ್ನು ನಿರ್ಧರಿಸಲಿದೆ ಎಂಬ ಕುತೂಹಲ ಎಲ್ಲೆಡೆ ಮೂಡಿದೆ.
ಇದನ್ನು ನೋಡಿ : ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ ಗಂಡ




