ಪ್ರೀತಿ ಹಾಗೂ ಹಣಕಾಸಿನ ವ್ಯವಹಾರದ ನಡುವೆ ಉಂಟಾದ ವಿರಸವು ಕೊಲೆಯಲ್ಲಿ ಅಂತ್ಯವಾಗಿರುವ ಘೋರ ಘಟನೆ Kolar ನಗರದಲ್ಲಿ ನಡೆದಿದೆ.

ಪ್ರೀತಿಸುತ್ತಿದ್ದ ಯುವತಿಯನ್ನ ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ Kolar ನಗರದ ಹೊರವಲಯದ ಬಂಗಾರಪೇಟೆ ಬ್ರಿಡ್ಜ್ ಬಳಿ ನಡೆದಿದೆ. ಚಿರಂಜೀವಿ ಎಂಬಾತ ಈ ಕೃತ್ಯ ಎಸಗಿದ್ದು, ಸುಜಾತಾ ಕೊಲೆಯಾದ ದುರ್ದೈವಿ.

ಪರಾರಿಯಾಗಲು ಯತ್ನ
ಇನ್ನು ಸುಜಾತಾ ನರಸಾಪುರ ಕೈಗಾರಿಕಾ ಪ್ರದೇಶ ಬೆಲ್ರೈಸ್ ಕಂಪನಿಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಆರೋಪಿ ಚಿರಂಜೀವಿ ಸ್ತ್ರೀಶಕ್ತಿ ಸಂಘದಲ್ಲಿ ಕೆಲಸ ಮಾಡ್ತಿದ್ದ, ಈ ವೇಳೆ ಇಬ್ಬರಿಗೂ ಪರಿಚಯವಾಗಿ ಪ್ರೀತಿ ಮೂಡಿದೆ. ಇತ್ತೀಚೆಗೆ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿದ್ದು, ಇದೇ ವಿಚಾರಕ್ಕೆ ಸುಜಾತಾ ಕೆಲಸಕ್ಕೆ ಹೋಗ್ತಿದ್ದಾಗ ಆರೋಪಿಯು ತಡೆದು ಮಾಡುಕತೆ ನಡೆಸಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ತನ್ನ ಬಳಿಯಿದ್ದ ಚಾಕುವಿನಿಂದ ಆಕೆಗೆ ಮನಬಂದಂತೆ ಇರಿದು, ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಇದನ್ನು ಓದಿ : ಸಂಕ್ರಾಂತಿಗೆ ಇಳಿಕೆ ಕಂಡ Gold – ಬಂಗಾರದ ಬೆಲೆಯಷ್ಟು ಗೊತ್ತಾ?

ಪ್ರಕರಣ ದಾಖಲು
ಇನ್ನು ಕೂಡಲೇ ಸಾರ್ವಜನಿಕರು ಆರೋಪಿಯನ್ನ ಹಿಡಿದು, ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಈ ಸಂಬಂಧ ಕೋಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ನೋಡಿ : ಕೆಂಕೆರೆ ಮಂಜುನಾಥ್ MUR*ER CASE – ಸ್ಫೋಟಕ ಮಾಹಿತಿ ಬಿಚ್ಚಿಟ್ಟ ತುಮಕೂರು SP




