Dina Bhavishya : 2026 ಜನವರಿ 16ರ ಶುಕ್ರವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

Dina Bhavishya : ಗುರುವು ಚಂದ್ರನನ್ನು ಸಂಪೂರ್ಣವಾಗಿ ನೋಡುತ್ತಾನೆ, ಇದು ಶುಭ ಗಜಕೇಸರಿ ಯೋಗವನ್ನು ಸೃಷ್ಟಿಸುತ್ತದೆ. ಒಟ್ಟಾರೆ ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ಮೇಷ ರಾಶಿ
ಇಂದು ಉತ್ತಮ ದಿನವಾಗಿದ್ದು ಹಣಕಾಸಿನಲ್ಲಿ ಸುಧಾರಣೆ ಹಾಗೂ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಅವಸರದ ನಿರ್ಧಾರಗಳನ್ನು ತಪ್ಪಿಸಿ, ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ ಹಾಗೂ ಬಡವರಿಗೆ ಆಹಾರ ನೀಡಿ;
ಜೊತೆಗೆ ಆಹಾರ ಪದ್ಧತಿಯಲ್ಲಿ ಜಾಗರೂಕರಾಗಿರಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ವೃತ್ತಿಪರವಾಗಿ ಶುಭದಿನವಾಗಿದ್ದು ಬಡ್ತಿ ಹಾಗೂ ಶೈಕ್ಷಣಿಕ ರಂಗದಲ್ಲಿ ಮೆಚ್ಚುಗೆ ಪಡೆಯುವ ಸಾಧ್ಯತೆಗಳಿವೆ. ಖರ್ಚಿನ ವಿಷಯದಲ್ಲಿ ಅತಿಯಾದ ಕಠಿಣತೆ ತೋರದೆ, ಸಂದರ್ಭಾನುಸಾರ ಧಾರಾಳತನ ತೋರಿಸುವುದು ಉತ್ತಮ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಸಂಗಾತಿಯ ವಿಚಾರದಲ್ಲಿ ಸ್ವಲ್ಪ ಪೊಸೆಸಿವ್ ಭಾವನೆ ಮೂಡಬಹುದು, ಆದ್ದರಿಂದ ಮಾತಿನಲ್ಲಿ ಸಂಯಮ ಅಗತ್ಯ.
ಹಣಕಾಸಿನಲ್ಲಿ ಸುಧಾರಣೆ ಕಂಡುಬಂದು ಉತ್ತಮ ಆದಾಯದ ಸಾಧ್ಯತೆಗಳಿದ್ದು, ಹೊಸ ಪಾಲುದಾರರ ಸಹಕಾರದಿಂದ ಹಳೆಯ ಯೋಜನೆಗಳು ಮುನ್ನಡೆಯಲಿವೆ.
ಕಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಇಂದು ಉತ್ತಮ ಉದ್ಯೋಗಾವಕಾಶಗಳು ದೊರೆತು ಪ್ರಗತಿಯ ದಾರಿಗಳು ತೆರೆದುಕೊಳ್ಳಲಿವೆ. ಹಿಂದಿನ ಹೂಡಿಕೆಗಳಿಂದ ಲಾಭ ಪಡೆಯಲು ಮತ್ತು ಮರುಹೂಡಿಕೆ ಮಾಡಲು ಸಮಯ ಅನುಕೂಲಕರವಾದರೂ, ವ್ಯಾಪಾರ–ವಹಿವಾಟಿನಲ್ಲಿ ಎಚ್ಚರಿಕೆ ಅಗತ್ಯ.
ಆಪ್ತರಿಂದ ಅಡ್ಡಿಪಡಿಕೆ ಸಾಧ್ಯವಾದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಕೆಲಸಗಳಲ್ಲಿ ಕೆಲವೊಮ್ಮೆ ಅಡಚಣೆಗಳು ಎದುರಾಗಬಹುದು, ಆದ್ದರಿಂದ ಮಹಾಗಣಪತಿಯನ್ನು ಆರಾಧಿಸುವುದು ಒಳಿತು. ಸ್ವಲ್ಪ ಹೊಗಳಿಕೆ ಮಾತುಗಳು ದಿನವನ್ನು ಉತ್ತಮಗೊಳಿಸಬಹುದಾಗಿದ್ದು,
ವೃತ್ತಿಪರವಾಗಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಪ್ರಮುಖ ವ್ಯಕ್ತಿಗಳನ್ನು ಮೆಚ್ಚಿಸುವ ಅವಕಾಶ ದೊರೆಯಲಿದೆ.
ಕನ್ಯಾ ರಾಶಿ
ಆರೋಗ್ಯಕರ ಜೀವನಶೈಲಿಯಿಂದ ನೀವು ಫಿಟ್ ಆಗಿರುತ್ತೀರಿ ಮತ್ತು ಸ್ನೇಹಿತರು ಅಥವಾ ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಸಂತೋಷದ ಸಮಯ ಕಳೆಯುವಿರಿ.
ತೀರ್ಥಯಾತ್ರೆಯ ಸಾಧ್ಯತೆ ಇದ್ದರೂ, ರಾಜಕೀಯ–ಸಾಮಾಜಿಕ ಕ್ಷೇತ್ರದವರಿಗೆ ಕೆಲವೊಂದು ಬೇಸರದ ಸಂದರ್ಭಗಳು ಎದುರಾಗಬಹುದು; ಆದಷ್ಟು ದೇವರ ಧ್ಯಾನ ಮಾಡಿ, ಒಟ್ಟಿನಲ್ಲಿ ಇಂದು ಒಳ್ಳೆಯ ದಿನ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಶುಭದಿನವಾಗಿದ್ದು, ಎದುರಿಸುತ್ತಿರುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ಸಿಗಲಿದೆ. ಕಚೇರಿಯಲ್ಲಿ ನಿಮ್ಮ ಪ್ರಾಮಾಣಿಕತೆಗೆ ಪ್ರಶಂಸೆ ದೊರೆಯುವ ಜೊತೆಗೆ ವಿದೇಶಿ ಪ್ರಯಾಣ ಮತ್ತು ಹೊಸ ಆಸ್ತಿ ಪಡೆಯುವ ಸಾಧ್ಯತೆಗಳಿವೆ; ಹಣಕಾಸಿನ ಪರಿಸ್ಥಿತಿಯೂ ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಹಣ ಕೈಯಲ್ಲಿ ನಿಲ್ಲದಂತೆ ಅನಿಸಿದರೂ ಚಿಂತೆ ಅಗತ್ಯವಿಲ್ಲ; ಆದಾಯದ ಇತರ ಮೂಲಗಳತ್ತ ಗಮನ ಹರಿಸುವುದು ಉತ್ತಮ. ವೃತ್ತಿಪರವಾಗಿ ಉತ್ತಮ ಅವಕಾಶಗಳು ದೊರೆತು ಯಶಸ್ಸು ಹಾಗೂ ಖ್ಯಾತಿ ಹೆಚ್ಚಾಗಲಿದೆ, ಆರೋಗ್ಯವೂ ಉತ್ತಮವಾಗಿರುತ್ತದೆ. ಖರ್ಚುಗಳನ್ನು ನಿಯಂತ್ರಿಸಿದರೆ ಹಣಕಾಸಿನಲ್ಲಿ ಸ್ಥಿರತೆ ಕಂಡುಬಂದು ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ.
ಧನು ರಾಶಿ
ಅತಿಯಾದ ಆತ್ಮವಿಶ್ವಾಸ ತೋರದೆ ತಾಳ್ಮೆ ವಹಿಸುವುದು ಇಂದು ಒಳಿತು. ಹೊಸ ವಾಹನ ಅಥವಾ ಮನೆ ಖರೀದಿಯ ಯೋಗವಿದ್ದು, ವಿರೋಧಿಯಾಗಿದ್ದ ವ್ಯಕ್ತಿಯ ವರ್ತನೆ ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಸ್ನೇಹಿತರೊಂದಿಗೆ ಸಂತೋಷದ ಸಮಯ ಕಳೆಯುವಿರಿ, ಆದರೆ ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಒಳ್ಳೆಯ ಸಮಯವಾಗಿದ್ದು, ಸಂಕಷ್ಟದಲ್ಲಿ ನಿಲ್ಲುವ ಆತ್ಮೀಯ ಸ್ನೇಹಿತನಿಂದ ಸಹಾಯ ಹಾಗೂ ಒಳಿತಾಗಲಿದೆ. ನಿಮ್ಮ ಉತ್ತಮ ಸ್ವಭಾವ ಮತ್ತು ನಾಯಕತ್ವ ಗುಣಗಳಿಂದ ಜನರು ಆಕರ್ಷಿತರಾಗಿ ಸ್ನೇಹಿತರ ವಲಯ ವಿಸ್ತರಿಸಬಹುದು. ಕುಟುಂಬದಲ್ಲಿ ಸುಖಶಾಂತಿ ಇರುವುದು, ಆದರೆ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಒಳಿತು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಒಟ್ಟಾರೆ ಶುಭದಿನವಾದರೂ, ಅತಿಯಾದ ಹೊಗಳಿಕೆ ನೀಡಿ ಮೋಸಗೊಳಿಸುವವರಿಂದ ದೂರವಿರುವುದು ಉತ್ತಮ. ಕುಟುಂಬಕ್ಕಾಗಿ ಮಾಡಿದ ಶ್ರಮ ನಿಮಗೆ ಹೆಮ್ಮೆ ತರುತ್ತದೆ, ಜ್ಞಾನವೃದ್ಧಿಗೆ ಪ್ರಯತ್ನಿಸುತ್ತೀರಿ; ಖರ್ಚು ಹಾಗೂ ಹೊರಗಿನ ಆಹಾರದಲ್ಲಿ ಜಾಗ್ರತೆ ವಹಿಸಿ.
ಮೀನ ರಾಶಿ
ಇಂದು ನ್ಯಾಯಯುತ ನಿರ್ಧಾರಕ್ಕೆ ಮನಸ್ಸಿಗಿಂತ ಬುದ್ಧಿಯ ಮಾತು ಕೇಳುವುದು ಒಳಿತು. ಹಿಂದಿನ ಹೂಡಿಕೆಗಳಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದ್ದು, ಅನಾವಶ್ಯಕ ಖರ್ಚುಗಳನ್ನು ನಿಯಂತ್ರಿಸಿದರೆ ಸಹನೆ ಮತ್ತು ಕ್ರಿಯಾಶೀಲತೆಯಿಂದ ಆದಾಯ ಹೆಚ್ಚುವ ಅವಕಾಶವಿದೆ; ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಸಂತೋಷ ನೀಡುತ್ತದೆ.




