BBK S12 : ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ನಡುವಿನ ಗೆಳೆತನ ವೀಕ್ಷಕರ ಗಮನ ಸೆಳೆದಿದೆ.

BBK S12 : ಈ ಸ್ನೇಹದಲ್ಲಿ ಪರಿಶುದ್ಧತೆ ಕಾಣಿಸುತ್ತಿದ್ದು, ಕಾವ್ಯಾಗೆ ಯಾವ ಸಂದರ್ಭ ಬಂದರೂ ಗಿಲ್ಲಿ ಅವರ ಬೆಂಬಲಕ್ಕೆ ನಿಂತಿರುವುದು ಹಲವು ಬಾರಿ ಕಂಡುಬಂದಿದೆ.
ಸೀಸನ್ ಕೊನೆಯ ವಾರದ ಪ್ರಯುಕ್ತ ಬಿಗ್ ಬಾಸ್ ನೀಡಿದ ವಿಶೇಷ ಚಟುವಟಿಕೆಯಲ್ಲಿ, ಸ್ಪರ್ಧಿಗಳು ತಾವು ಯಾರಿಗಾದರೂ ನೋವು ನೀಡಿದ್ದರೆ ಕ್ಷಮೆ ಕೇಳಬೇಕಿತ್ತು. ಈ ವೇಳೆ ಕಾವ್ಯಾ, ಗಿಲ್ಲಿಗೆ ತಾವು ಅನೈಚ್ಛಿಕವಾಗಿ ನೋವು ಮಾಡಿದ್ದೇನೆ ಎಂದು ಒಪ್ಪಿಕೊಂಡು ಕ್ಷಮೆ ಯಾಚಿಸಿದರು.
ಇದನ್ನು ಓದಿ : ಸಂಕ್ರಾಂತಿಗೆ ಇಳಿಕೆ ಕಂಡ Gold – ಬಂಗಾರದ ಬೆಲೆಯಷ್ಟು ಗೊತ್ತಾ?

“ಹೊರಗೆ ಹೋದ್ಮೇಲೆ ಬ್ಲಾಕ್ ಮಾಡ್ತೀನಿ” ಹೇಳಿಕೆ
ಕ್ಷಮೆಯ ಮಾತಿನ ನಡುವೆಯೇ ಕಾವ್ಯಾ, ಹೊರಗೆ ಹೋಗ್ತಿದ್ದಂತೆ ನಿನ್ನನ್ನು ಬ್ಲಾಕ್ ಮಾಡ್ತೀನಿ” ಎಂದು ಹೇಳಿದ್ದು ಅಚ್ಚರಿ ಮೂಡಿಸಿತು. ಇದನ್ನು ಹಲವರು ಬ್ಲ್ಯಾಕ್ಮೇಲ್ ಪ್ರಯತ್ನ ಎಂದು ಪರಿಗಣಿಸಿದ್ದಾರೆ.

ಕಾವ್ಯಾ ಮಾತನಾಡುತ್ತಾ, “ನೀನು ಯಾವಾಗಲೂ ಬೇಜಾರು ಮಾಡಿದ್ದೀಯಾ ಅಂತ ಹೇಳಿಕೊಂಡಿಲ್ಲ. ಅದು ನಿನ್ನ ದೊಡ್ಡತನ ಇರಬಹುದು. ಇದು ಶೋ ಅನ್ನೋದನ್ನ ಮರೆತು ನಿನ್ನ ಅಹಂಗೆ ಪೆಟ್ಟು ಕೊಟ್ಟಿದ್ದೇನೆ. ಕೆಲವೊಮ್ಮೆ ನಿನ್ನನ್ನು ಬೇರೆಯವರ ಮುಂದೆ ಬಿಟ್ಟುಕೊಟ್ಟಿದ್ದೇನೆ. ಗೆಳೆತಿಯಾಗಿ ಯೋಚಿಸಿದಾಗ ನಿನಗೆ ನೋವು ಮಾಡಿದ್ದೇನೆ. ಕ್ಷಮೆ ಇರಲಿ”
ಎಂದು ಭಾವುಕರಾಗಿ ಹೇಳಿದರು.

ಗಿಲ್ಲಿಯ ಕಟುವಾದ ಪ್ರತಿಕ್ರಿಯೆ
ಕಾವ್ಯಾ ಬ್ಲಾಕ್ ಮಾಡುವ ಮಾತು ಹೇಳುತ್ತಿದ್ದಂತೆ ಗಿಲ್ಲಿ ಕೂಡ ತಿರುಗೇಟು ನೀಡಿದರು. “ನಾನು ಕಾಯ್ತಾ ಇದೀನಿ. ಧೈರ್ಯ ಇದ್ದರೆ ಮಾಡು” ಎಂದು ಗಿಲ್ಲಿ ಸವಾಲು ಹಾಕಿದರು. ಈ ಸಂಭಾಷಣೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಗಿಲ್ಲಿ–ಕಾವ್ಯಾ ನಡುವಿನ ಈ ಸಂವಾದ, ಗೆಳೆತನದಲ್ಲಿನ ಬಿರುಕುಗಳೇ ಅಥವಾ ಆಟದ ತಂತ್ರವೇ ಎಂಬ ಪ್ರಶ್ನೆಯನ್ನು ವೀಕ್ಷಕರ ಮುಂದಿಟ್ಟಿದೆ. ‘Bigg Boss Kannada Season 12’ ಕೊನೆಯ ಹಂತಕ್ಕೆ ಬಂದಿರುವುದರಿಂದ ಇಂತಹ ಕ್ಷಣಗಳು ಇನ್ನಷ್ಟು ಕುತೂಹಲ ಹುಟ್ಟಿಸುತ್ತಿವೆ.
ಇದನ್ನು ನೋಡಿ : ಕೆಂಕೆರೆ ಮಂಜುನಾಥ್ MUR*ER CASE – ಸ್ಫೋಟಕ ಮಾಹಿತಿ ಬಿಚ್ಚಿಟ್ಟ ತುಮಕೂರು SP




