ರಾಜ್ಯ ರಾಜಕೀಯಕ್ಕೆ ನಾನು ಬರುತ್ತೇನೆ: ಸಂಕ್ರಾಂತಿ ಹಬ್ಬದ ದಿನವೇ HDK ಘೋಷಣೆ.

ರಾಜ್ಯ ರಾಜಕೀಯಕ್ಕೆ ನಾನು ಬರುತ್ತೇನೆ ಎಂದು ಸಂಕ್ರಾಂತಿ ಹಬ್ಬದ ದಿನವೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಘೋಷಿಸಿದ್ದಾರೆ.
ರಾಜ್ಯ ರಾಜಕೀಯದಿಂದ ನಾನು ದೂರ ಸರಿಯೋದಿಲ್ಲ
ಬೆಂಗಳೂರಿನಲ್ಲಿ ಮಾತನಾಡಿದ HDK “ರಾಜ್ಯ ರಾಜಕೀಯದಿಂದ ನಾನು ದೂರ ಸರಿಯೋದಿಲ್ಲ. ನಾನು ರಾಜಕಾರಣದಲ್ಲಿ ಇದ್ದೇನೆ. ನಾನು ಯಾವ ಸ್ಥಾನದಲ್ಲಿ ಇರಬೇಕು ಅಂತ ತೀರ್ಮಾನ ಮಾಡುವವರು ರಾಜ್ಯದ ಜನತೆ. ನಮ್ಮ ಮೈತ್ರಿ ಒಪ್ಪಂದದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು. ನಮ್ಮ ಉದ್ದೇಶ ರಾಜ್ಯದಲ್ಲಿ ಒಳ್ಳೆ ಸರ್ಕಾರ ತರಬೇಕು ಅನ್ನೋದು. ವೈಯಕ್ತಿಕವಾಗಿ ನನ್ನ ಉದ್ದೇಶ ಇದೆ ಎಂದು ತಿಳಿಸಿದರು.
ಇದನ್ನು ಓದಿ : ಹೈದರಾಬಾದ್ ತಂಡದ ನಾಯಕನಾಗಿ Mohammed Siraj ನೇಮಕ

ಜನತೆ ನೆಮ್ಮದಿಯಿಂದ ಇರಬೇಕು
ರಾಜ್ಯದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ ಅಂತ ಗಮನಿಸುತ್ತಿದ್ದೇನೆ. ಒಳ್ಳೆ ಸರ್ಕಾರ ತಂದು ಜನತೆ ನೆಮ್ಮದಿಯಿಂದ ಇರಬೇಕು. ಆ ನಿಟ್ಟಿನಲ್ಲಿ ನಾಡಿನ ಜನತೆ ನಾನು ಯಾವ ಸ್ಥಾನದಲ್ಲಿ ಇರಬೇಕು ಅಂತ ತೀರ್ಮಾನ ಮಾಡೋದು ಅವರು. ನನ್ನ ಕೈಯಲ್ಲಿ ಇಲ್ಲ. ನಾನು ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಅಂತ ಯಾರಾದ್ರು ತಿಳಿದುಕೊಂಡಿದ್ರೆ, ನಾನು ದೂರ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಫೌಂಡೇಶನ್ ಹಾಕಿದ್ದೇನೆ
ರಾಜ್ಯದ ರಾಜಕಾರಣದಲ್ಲಿ ಇರ್ತೀನಿ. ಕೇಂದ್ರದಲ್ಲಿ ಪ್ರಧಾನಿಗಳ ಹುದ್ದೆ ಕೊಟ್ಟಿದ್ದಾರೆ. ಜೊತೆಗೆ, ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಪ್ರಾಮಾಣಿಕ ಕೆಲಸ ಮಾಡಲು ಅವರು ಈಗಾಗಲೇ ಫೌಂಡೇಶನ್ ಸ್ಥಾಪಿಸಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ರಾಜಕೀಯಕ್ಕೆ ಯಾವ ಸಮಯದಲ್ಲಿ ಬರಬೇಕು ಅಂತ ತೀರ್ಮಾನ ಮಾಡ್ತೀನಿ. ರಾಜ್ಯ ರಾಜಕೀಯಕ್ಕೆ ಬರಲೇಬೇಕಾಗುತ್ತದೆ. ಯಾವಾಗ ಅಂತ ತೀರ್ಮಾನ ಮಾಡ್ತೀನಿ ಎಂದು ತಿಳಿಸಿದರು.

ಇದನ್ನು ನೋಡಿ : ನ್ಯೂಜೆರ್ಸಿಯಲ್ಲಿ 5, 7 ವರ್ಷದ ಮಕ್ಕಳನ್ನು ಕೊಂದ ಭಾರತೀಯ ಮೂಲದ ಮಹಿಳೆ ಬಂಧನ
ಹೈದರಾಬಾದ್ ತಂಡದ ನಾಯಕನಾಗಿ Mohammed Siraj ನೇಮಕ




