
CHIKKANAYKANAHALLI : ಹುಳಿಯಾರು ಮತ್ತು ಬುಕ್ಕಾಪಟ್ಟಣ ಮಧ್ಯದ ರಸ್ತೆಯಲ್ಲಿ ವಾಹನಕ್ಕೆ ತಗುಲಿ ಬಿದ್ದ ಅಪರೂಪದ ಗದ್ದುಗುಬ್ಬಿ (ಬಾರ್ನ್ ಆಲ್) ಪಕ್ಷಿಯನ್ನು ಯುವಕರ ತಂಡವೊಂದು ತಕ್ಷಣವೇ ರಕ್ಷಿಸಿ ಪ್ರಾಣ ಉಳಿಸಿದ್ದಾರೆ. ಗಾಯಗೊಂಡ ಗಬ್ಬಿಗೆ ತಕ್ಷಣವೇ ಹುಳಿಯಾರಿನ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಇನ್ನು ಪಕ್ಷಿ ರಕ್ಷಣೆ ಕಾರ್ಯದಲ್ಲಿ ಫಯಾಜ್, ಇಮ್ರಾಜ್, ನವಾಜ್, ಸಾದಾತ್, ಅಕ್ಬರ್ ಮತ್ತು ಮುಬಾರಕ್ ಸೇರಿ ಹಲವಾರು ಯುವಕರು ಪಾಲ್ಗೊಂಡಿದ್ದರು. ಗಾಯಗೊಂಡಿದ್ದ ಅಪರೂಪದ ಪಕ್ಷಿಯನ್ನು ಬದುಕಿಸಲು ಯುವಕರು ತೋರಿದ ಮಾನವೀಯತೆ ಹಾಗೂ ಹೃದಯವಂತಿಕೆಗೆ ಸ್ಥಳೀಯರು ಶ್ಲಾಘಿಸಿದ್ದಾರೆ.
ಇನ್ನು ಬಾರ್ನ್ ಆಲ್ಸ್ಗಳು ರಾತ್ರಿ ಬೇಟೆಯಾಡುವಂತ ಹಕ್ಕಿಗಳಾಗಿದ್ದು, ಅವುಗಳ ವಿಶಿಷ್ಟ ಹೃದಯಾಕಾರದ ಮುಖಚಕ್ರ ಹಾಗೂ ನಿಶ್ಶಬ್ದ ಹಾರಾಟವು ಅವುಗಳ ವಿಶೇಷತೆ. ಇವುಗಳು ತೆರೆದ ಪ್ರದೇಶಗಳು, ಹುಲ್ಲುಗಾವಲುಗಳು, ಅರಣ್ಯ ಪ್ರದೇಶಗಳು ಹಾಗೂ ನಗರ ಪ್ರದೇಶಗಳಲ್ಲಿಯೂ ಕೆಲವೊಮ್ಮೆ ಕಾಣಿಸುತ್ತವೆ. ಅಲ್ದೇ ಇವು ಚಿಕ್ಕ ಇಲಿ ಮತ್ತು ಪ್ರಜಾತಿಗಳನ್ನು ಆಹಾರವಾಗಿ ಸೇವಿಸುತ್ತವೆ.
ಇನ್ನು ಇಂತಹ ಅಪರೂಪದ ಪಕ್ಷಿಗಳನ್ನು ರಕ್ಷಿಸಿ ಸಂರಕ್ಷಿಸುವುದು ಪ್ರತಿಯೊಬ್ಬನ ಜವಾಬ್ದಾರಿ ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.




