ಇಂದು ವಿಶಿಷ್ಟ ಪೋಸ್ಟ್ ಒಂದನ್ನು D.K Shivakumar ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದು, ಎಲ್ಲರ ಕುತೂಹಲ ಕೆರಳಿಸಿದೆ.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ನಿನ್ನೆ ಕಾಂಗ್ರೆಸ್ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಶಿಷ್ಟ ಪೋಸ್ಟ್ ಭಾರಿ ಕುತೂಹಲ ಕೆರಳಿಸಿದೆ.
ಪೋಸ್ಟ್ನಲ್ಲಿ ಏನಿದೆ..?
ರಾಹುಲ್ ಗಾಂಧಿ ಭೇಟಿಯ ಬಳಿಕ ಇಂದು ಬೆಳಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ “ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ”ಎಂದು ಪೋಸ್ಟ್ ಮಾಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಕುತೂಹಲ ಕೆರಳಿಸಿದ ರಾಹುಲ್ – ಡಿಕೆಶಿ ಭೇಟಿ
ನಿನ್ನೆ ರಾಹುಲ್ ಗಾಂಧಿ ಮೈಸೂರಿನ ಮೂಲಕ ಕೇರಳಕ್ಕೆ ತೆರಳಿದ್ದು, ಕೇರಳದಿಂದ ವಾಪಸ್ ಆಗುವ ವೇಳೆ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ DCM D.K Shivakumar ಅವರನ್ನು ಕೆಲವೇ ನಿಮಿಷಗಳ ಕಾಲ ಭೇಟಿಯಾಗಿದ್ದರು.
ಇದನ್ನು ಓದಿ : ಪೊಲೀಸ್ ಠಾಣೆ ಸಮೀಪವೇ ರೌಡಿಶೀಟರ್ನ ಬರ್ಬರ Murder
ನಾಯಕತ್ವ ಪ್ರಶ್ನೆ ಕಿಡಿಗೆದರಿದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರನ್ನು ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಇದುವರೆಗೂ ವಿದೇಶ ಪ್ರವಾಸದಲ್ಲಿದ್ದ ರಾಹುಲ್ ಅವರು, ಇಬ್ಬರಿಗೂ ಭೇಟಿಗೆ ಸಿಕ್ಕಿರಲಿಲ್ಲ. ಇಬ್ಬರೂ ಬಹಳಷ್ಟು ಸಲ ದಿಲ್ಲಿಗೆ ಹೋಗಿ ಬಂದಿದ್ದರೂ ರಾಹುಲ್ ಮಾತ್ರ ಸಿಕ್ಕಿರಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಿಕ್ಕಟ್ಟನ್ನು ರಾಹುಲ್ ಅವರ ಟೇಬಲ್ಗೆ ರವಾನಿಸಿ ತಾವು ಪಾರಾಗಿದ್ದಾರೆ.
ನಥಿಂಗ್ ಟು ವರಿ
ಮೈಸೂರಿನ ಭೇಟಿಯ ವೇಳೆ ರಾಹುಲ್ ಗಾಂಧಿ ಇಬ್ಬರೊಂದಿಗೆ ಕೆಲ ನಿಮಿಷಗಳ ಕಾಲ ಮಾತ್ರ ಮಾತುಕತೆ ನಡೆಸಿದ್ದು, ನಾಯಕತ್ವ ಬದಲಾವಣೆ ಕುರಿತು ಯಾವುದೇ ಸ್ಪಷ್ಟ ಸಂದೇಶ ನೀಡಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಅವರಿಗೆ “ನಥಿಂಗ್ ಟು ವರಿ, ವೀ ವಿಲ್ ಕಾಲ್ ಟು ಡೆಲ್ಲಿ ಸೂನ್” ಎಂಬ ಸಂದೇಶ ನೀಡಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಮತ್ತೊಮ್ಮೆ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೈಕಮಾಂಡ್ ತಮ್ಮ ಪರವಾಗಿದೆ
ಈ ಹಿನ್ನೆಲೆಯಲ್ಲಿ ಇದೀಗ ಡಿಕೆ ಶಿವಕುಮಾರ್ ಅವರು ಹಾಕಿರುವ ಪೋಸ್ಟ್ ಯಾವ ಅರ್ಥವನ್ನು ಬಿಂಬಿಸುತ್ತಿದೆ ಎಂಬ ಬಗ್ಗೆ ಹಲವರು ಹಲವು ಬಗೆಯ ಅರ್ಥಗಳನ್ನು ಹಚ್ಚುತ್ತಿದ್ದಾರೆ. ಹೈಕಮಾಂಡ್ ತಮ್ಮ ಪರವಾಗಿದೆ ಎಂದು ಬಿಂಬಿಸಲು ಡಿಕೆಶಿ ಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




