Kitchen Recipe : ಸಾಮಾನ್ಯವಾಗಿ ಚಿಕನ್ ಕಬಾಬ್ ಅಂದ್ರೆ ಎಲ್ಲರಿಗೂ ತುಂಬಾ ಇಷ್ಟ. ಕ್ರಿಸ್ಪಿಯಾಗಿ, ಖಾರವಾಗಿ ಸಖತ್ ಟೇಸ್ಟ್ ಇರುತ್ತದೆ. ಆದರೆ ವೆಜ್ ಕಬಾಬ್ ಮಾಡಿದ್ರೆ ಆ ಫೀಲ್ ಬರಲ್ಲ ಅನ್ನೋದು ಹಲವರ ಅಭಿಪ್ರಾಯ.

Kitchen Recipe :ಆದ್ರೆ ಈಗ ಈ ಕ್ಯಾಬೇಜ್ ಕಬಾಬ್ ರೆಸಿಪಿ ಟ್ರೈ ಮಾಡಿದ್ರೆ, ಚಿಕನ್ ಕಬಾಬ್ಗೆ ಸಮಾನವಾದ ಟೇಸ್ಟ್ ಸಿಗುತ್ತದೆ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಟೀ ಟೈಂಗೆ ಪರ್ಫೆಕ್ಟ್.
Cabbage Kabab ಬೇಕಾಗುವ ಸಾಮಗ್ರಿಗಳು
- ಕ್ಯಾಬೇಜ್ (ಸಣ್ಣಗೆ ಕತ್ತರಿಸಿದ್ದು)
- ಈರುಳ್ಳಿ (ಸಣ್ಣ ತುಂಡುಗಳು)
- ಕೊತ್ತಂಬರಿ ಸೊಪ್ಪು
- ಚಾಟ್ ಮಸಾಲ
- ಕಾರದ ಪುಡಿ
- ಧನಿಯಾ ಪುಡಿ
- ಉಪ್ಪು
- ಅಕ್ಕಿ ಹಿಟ್ಟು
- ಕಡಲೆ ಹಿಟ್ಟು
- ಎಣ್ಣೆ (ಬಾಡಿಸಲು)
ಇದನ್ನು ಓದಿ : Hassan|ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವು
ಕ್ಯಾಬೇಜ್ ಕಬಾಬ್ ಮಾಡುವ ವಿಧಾನ
ಮೊದಲು ಒಂದು ಬೌಲ್ಗೆ ಸಣ್ಣಗೆ ಕತ್ತರಿಸಿದ ಕ್ಯಾಬೇಜ್, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಅದಕ್ಕೆ ಉಪ್ಪು, ಕಾರದ ಪುಡಿ, ಧನಿಯಾ ಪುಡಿ, ಚಾಟ್ ಮಸಾಲ, ಅಕ್ಕಿ ಹಿಟ್ಟು ಮತ್ತು ಕಡಲೆ ಹಿಟ್ಟು ಸೇರಿಸಿ. ಅಗತ್ಯವಿದ್ದಷ್ಟು ನೀರು ಹಾಕಿ ಮಿಶ್ರಣವನ್ನು ಗಟ್ಟಿಯಾಗಿ ಕಲಸಿಕೊಳ್ಳಿ.
ಈಗ ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಕಾಯಲು ಬಿಡಿ.
ಕಲಸಿದ ಮಿಶ್ರಣವನ್ನು ಕಬಾಬ್ ಆಕಾರಕ್ಕೆ ಅಥವಾ ವೃತ್ತಾಕಾರದಲ್ಲಿ ಮಾಡಿ ಬಿಸಿ ಎಣ್ಣೆಗೆ ಬಿಡಿ.
ಎರಡು ಬದಿಗಳೂ ಚೆನ್ನಾಗಿ ಕ್ರಿಸ್ಪಿಯಾಗಿ ಕೆಂಪು ಬಣ್ಣಕ್ಕೆ ತಿರುಗುವವರೆಗೂ ಬಾಡಿಸಿ.
ರುಚಿಯಾದ ವೆಜ್ ಕಬಾಬ್ ಸವಿಯಲು ಸಿದ್ಧ
ಹೀಗೆ ಮಾಡಿದ್ರೆ ಕ್ರಿಸ್ಪಿ, ಖಾರವಾದ ಷಲ್ ಕ್ಯಾಬೇಜ್ ಕಬಾಬ್ ಸವಿಯಲು ಸಿದ್ಧ.ಟೊಮ್ಯಾಟೋ ಸಾಸ್ ಅಥವಾ ಗ್ರೀನ್ ಚಟ್ನಿ ಜೊತೆ ತಿನ್ನಿದ್ರೆ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.
ವೆಜ್ ಸ್ನ್ಯಾಕ್ಸ್, ಈವ್ನಿಂಗ್ ಟೀ ರೆಸಿಪಿ, ಮಕ್ಕಳಿಗೂ ಇಷ್ಟವಾಗುವ ಕಬಾಬ್ ಹುಡುಕುತ್ತಿರುವವರಿಗೆ ಇದು ಸೂಪರ್ ಆಯ್ಕೆ.
ಇದನ್ನು ನೋಡಿ : ನಿಧಿ ಸಿಕ್ಕಿರೋ ಲಕ್ಕುಂಡಿ ಗ್ರಾಮದ ಇತಿಹಾಸ ಏನು? ಮೂವರು ಅರಸರು ಆಳಿದ್ದ ಊರಿದು..!




