Hassan ನಲ್ಲಿ ಚಲಿಸುತ್ತಿದ್ದ ರೈಲಿನಿದ್ದ ಬಿದ್ದು ವ್ಯಕ್ತಿ ಸಾವು.

Hassan : ಆಲೂರು – ಪಾಳ್ಯ ಮಾರ್ಗದ ಹಳೆ ಆಲೂರು ಬ್ರಿಡ್ಜ್ ಬಳಿ ಸುಮಾರು 40 ರಿಂದ 45 ವರ್ಷದ ವ್ಯಕ್ತಿ ರೈಲಿಗೆ ಸಿಲುಕಿ ಮೃತ ಪಟ್ಟಿರುವ ಘಟನೆ ಸಂಬಂವಿಸಿದ್ದು, ಮೃತ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ಆಲೂರು ರೈಲ್ವೆ ಸ್ಟೇಷನ್ ಮಾಸ್ಟರ್ ಬೆಳಿಗ್ಗೆ ಸುಮಾರು 8:00 ರಿಂದ 8:30 ರ ಸಮಯದಲ್ಲಿ ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ಕೊಟ್ಟ ಮೇರೆಗೆ, ಇಂದು ಬೆಳಗ್ಗೆ ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶವ ಪರಿಶೀಲನೆ ನಡೆಸಿದರು.
ಆಯತಪ್ಪಿ ಬಿದ್ದು ಸಾವು
ಮೃತ ವ್ಯಕ್ತಿಯ ದೇಹದ ಮೇಲಿನ ಗಾಯಗಳ ಚಹರೆಯ ಅಂದಾಜಿನ ಪ್ರಕಾರ ವ್ಯಕ್ತಿಯು ಶನಿವಾರ ಸಂಜೆ 3:30 – 4:00 ಗಂಟೆ ಸಮಯದಲ್ಲಿ ಸಕಲೇಶಪುರದಿಂದ ಹಾಸನ ಮಾರ್ಗವಾಗಿ ಚಲಿಸುತ್ತಿದ್ದ, ರೈಲಿನ ಡೋರಿನಲ್ಲಿ ನಿಂತು, ಆಯತಪ್ಪಿ ಬಿದ್ದು ಮೃತಪಟ್ಟಿರಬಹುದು ಎಂದು ರೈಲ್ವೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : ನ್ಯೂಜಿಲೆಂಡ್ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸಿದ India

ವ್ಯಕ್ತಿ ಯಾರಿರಬಹುದು..?
ಇನ್ನು ವ್ಯಕ್ತಿಯೂ ಮೃತಪಟ್ಟ ಸ್ಥಳ ಪರಿಶೀಲನೆ ವೇಳೆ ವ್ಯಕ್ತಿಗೆ ಸಂಬಂಧಪಟ್ಟ ಯಾವುದೇ ಗುರುತಿನ ಚೀಟಿಗಳಾಗಲಿ, ಪತ್ರಗಳಾಗಲಿ ದೊರೆತಿಲ್ಲ.
ಹಾಗಾಗಿ ವ್ಯಕ್ತಿ ಯಾರಿರಬಹುದು..? ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದರು ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ASI ಕುಮಾರ್, ASI ಶಿವರಾಜು, ಷರೀಪ್ ಹಾಜರಿದ್ದರು.

ಇದನ್ನು ನೋಡಿ : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್, ಟಿಕೆಟ್ ದರ ಏರಿಕೆ




