
ಕಲ್ಪತರು ನಾಡು, ಶೈಕ್ಷಣಿಕ ನಗರಿ ತುಮಕೂರಿನಲ್ಲಿ ಕಳೆದ ವರ್ಷದಿಂದ ತುಮಕೂರು ಜಿಲ್ಲಾಡಳಿತದ ವತಿಯಿಂದ ಮೈಸೂರಿನಂತೆ ತುಮಕೂರಿನಲ್ಲೂ ಅದ್ಧೂರಿಯಾಗಿ ದಸರಾ ಉತ್ಸವವನ್ನು ಆಚರಣೆ ಮಾಡಲಾಗ್ತಿದೆ, ಇಂದಿನಿಂದ ಅಕ್ಟೋಬರ್ 2 ರವರೆಗೆ ಸುಮಾರು 11 ದಿನಗಳ ಕಾಲ ಅದ್ಧೂರಿ ದಸರಾ ಮಹೋತ್ಸವ ನಡೆಸಲಾಗುತ್ತಿದ್ದು, ದಸರಾ ಮಹೋತ್ಸವಕ್ಕೆ ಗೃಹ ಸಚಿವ ಪರಮೇಶ್ವರ್ ಉದ್ಘಾಟನೆ ಮಾಡಿದ್ರು.

ತುಮಕೂರು ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವಕ್ಕೆ ಪರಮೇಶ್ವರ್ ಅವರು ನಂದಿ ಧ್ವಜ ಪೂಜೆ ನೆರವೇರಿಸುವ ಮೂಲಕ ತುಮಕೂರು ದಸರಾವನ್ನು ಉದ್ಘಾಟನೆ ಮಾಡಿದ್ರು. ನಂದಿ ಧ್ವಜಾರೋಹಣ ಮಾಡಿದ ಪರಂ ಬಳಿಕ ಧಾರ್ಮಿಕ ಮಂಟಪವನ್ನು ಉದ್ಘಾಟನೆ ಮಾಡಿದ್ರು. ದಸರಾ ಚಾಲನೆ ವೇಳೆ ವಿವಿಧ ಕಲಾತಂಡಗಳು ದಸರಾ ಮೊದಲ ದಿನಕ್ಕೆ ಮೆರಗು ತಂದರು. ಇನ್ನು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪರಮೇಶ್ವರ್ ಪತ್ನಿ ಕನ್ನಿಕಾ ಪರಮೇಶ್ವರ್, ಕೇಂದ್ರ ಸಚಿವ ವಿ,ಸೋಮಣ್ಣ, ಮಾಜಿ ಸಚಿವ ರಾಜಣ್ಣ, ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ, ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಸೇರಿ ವಿವಿಧ ಮಠಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು

ತುಮಕೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಧಾರ್ಮಿಕ ಮಂಟಪ ನಿರ್ಮಾಣ ಮಾಡಲಾಗಿದ್ದು, ಮೈಸೂರಿನ ಅರಮನೆಯಂತೆಯೇ ವೇದಿಕೆಯನ್ನು ನಿರ್ಮಾಣ ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುವಂತೆ ಇತ್ತು. ಅಲ್ದೇ ದಸರಾ ಅಂಗವಾಗಿ ಇಂದಿನಿಂದ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಪರಮೇಶ್ವರ್ ಅವರು ಧಾರ್ಮಿಕ ವಿಧಿವಿಧಾನದಲ್ಲಿ ಭಾಗಿಯಾಗಿದ್ರು. ಮೊದಲ ದಿನ ದಸರಾ ಉದ್ಘಾಟನಾ ಸಮಾರಂಭಕ್ಕೆ ಗಣ್ಯರ ಜೊತೆ ಜಿಲ್ಲೆಯ ಮೂಲೆ ಮೂಲೆಯಿಂದ ಜನರು ಆಗಮಿಸಿದ್ರು. ಇತ್ತ ತುಮಕೂರು ದಸರಾ ಮಹೋತ್ಸವ ನೋಡಲು ಎಲ್ಲಾ ತಾಲೂಕುಗಳಿಂದ ನಿತ್ಯ 250 ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.
ಇನ್ನು ದಸರಾ ಮಹೋತ್ಸವದ ಅಂಗವಾಗಿ ಇಂದು ಹೆಲಿಕಾಫ್ಟರ್ ರೈಡ್ಗೆ ಪರಮೇಶ್ವರ್ ಗ್ರೀನ್ ಸಿಗ್ನಲ್ ಕೊಟ್ರು. ಬಳಿಕ ಸಾರ್ವಜನಿಕರ ಜೊತೆ ಪರಂ ಹೆಲೆಕಾಫ್ಟರ್ ರೈಡ್ ಮಾಡಿದ್ದು ವಿಶೇಷವಾಗಿತ್ತು. ಜೊತೆಗೆ ಹೆಲಿಕಾಫ್ಟರ್ ರೈಡ್ ಮಾಡಿದ ಸಾರ್ವಜನಿಕರಿಂದ ಸ್ವತಂ ಪರಮೇಶ್ವರ್ ಸಾಹೆಬ್ರು ಅಭಿಪ್ರಾಯ ಕೇಳಿದ್ರು.

ತುಮಕೂರು ದಸರಾ ಮಹೋತ್ಸವ ಕಳೆದ ಬಾರಿಗಿಂತ ಈ ಬಾರಿ ಮತ್ತಷ್ಟು ವಿಶೇಷವಾಗಿದ್ದು, ತುಮಕೂರಿಗರಿಗಾಗಿ ಹೆಲಿಕಾಫ್ಟರ್ ರೈಡ್, ಹಾರ್ಟ್ ಏರ್ ಬಲೂನ್ , ಅಂಬಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ದಸರಾ ಉದ್ಘಾಟನಾ ಕಾರ್ಯಕ್ರಮ ನೆರವೇರಿದ್ದು, ಮುಂದಿನ ದಿನಗಳಲ್ಲಿ ದಸರಾ ಉತ್ಸವ ಹೇಗೆ ನಡೆಯುತ್ತೆ, ಜನರಿಂದ ಹೇಗೆ ರೆಸ್ಪಾನ್ಸ್ ಸಿಗುತ್ತೆ ಅಂತಾ ಕಾದುನೋಡಬೇಕಿದೆ,




