
SIRA-
ಶಿರಾ ನಗರದಲ್ಲಿ ಪ್ರತಿ ನಿತ್ಯ ಒಂದಿಲ್ಲೊಂದು ಸಮಸ್ಯೆಯನ್ನು ಅಲ್ಲಿನ ಜನರು ಎದುರಿಸುತ್ತಿದ್ದಾರೆ. ಇಂತಹ ದುರಂತ ಸಮಸ್ಯೆಗಳ ಕುರಿತು ನಿಮ್ಮ ಪ್ರಜಾ ಶಕ್ತಿ ಟಿವಿ ವರದಿಬಿತ್ತರಿಸಿ, ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದೆ. ಇತ್ತ ಆಸ್ಪತ್ರೆಗಳನ್ನು ಹೈಟೆಕ್ ಮಾಡಿ ಜನರಿಗೆ ಸೇವೆ ಕೊಡಲು ತಾಲೂಕು ಆಡಳಿತ ನಿರ್ದರಿಸಿತ್ತು. ಅದರಂತೆ 100 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಒತ್ತು ನೀಡಿತ್ತು. ಆದ್ರೆ ಇಂದಿಗೂ ಕೂಡ ಪ್ರತಿ ನಿತ್ಯ ಮಹಿಳೆಯರು, ಮಕ್ಕಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಓಪಿಡಿ ಯಲ್ಲಿ ಚೀಟಿ ಸಿಗದೆ ಮಹಿಳೆಯರು ಗಂಟೆ ಗಟ್ಟಲೇ ಕಾದು ಕಾದು ಸುತ್ತಾದ ಘಟನೆ ನಡೆಯಿತು.
ಬೆಳಗ್ಗೆಯಿಂದ ಮಹಿಳೆಯರು ತಾವು ಮತ್ತು ತಮ್ಮ ಮಕ್ಕಳ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಂದರು. ಆದ್ರೆ ಬಂದು ಚೀಟಿಗಾಗಿ ಕಾದು ಕಾದು ಸುಸ್ತಾದರು. ಸಿಬ್ಬಂದಿಗಳನ್ನು ಮಹಿಳೆಯರು ಯಾಕೆ ಇಷ್ಟು ತಡ ಎಂದು ಕೇಳಿದ್ರೆ. ಸರ್ವರ್ ಪ್ರಾಬ್ಲಮ್ ಎನ್ನುತ್ತಿದ್ದರು. ವಿಷಯ ತಿಳಿದ ನಿಮ್ಮ ಪ್ರಜಾ ಶಕ್ತಿಟಿವಿ ಅಲ್ಲಿಗೆ ದಾವಿಸಿತು.
ಈ ವೇಳೆ ಸಿಬ್ಬಂದಿಗಳನ್ನು ಜನರು ಗಂಟೆ ಗಟ್ಟಲೇ ಕಾಯುತ್ತಿದ್ದಾರೆ ಎನಾಯ್ತು, ಒಪಿಡಿ ಚೀಟಿ ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ರೆ, ಅಲ್ಲಿ ಸಿಬ್ಬಂದಿಗಳು ದರ್ಪದ ಮಾತುಗಳನ್ನು ಆಡಿದರು. ತದ ನಂತರ ಸರ್ ನೀವೆ ನೋಡ್ತಿದ್ದೀರಲ್ಲ ಸರ್ವರ್ ಪ್ರಾಬ್ಲಮ್ ಇದೇ ಎಂದು ಹೇಳ್ತಾ ಇದಿವಿ ನೀವೇ ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಸಮಾಧಾನ ಪಡಿಸಲು ಮುಂದಾದ್ರು.
ಇನ್ನು ಈ ಒಪಿಡಿ ಚೀಟಿ ವಿಚಾರವಾಗಿ ಅಲ್ಲಿ ಆಡಳಿತಾಧಿಕಾರಿ ಡಾ.ಡಿ.ಎಂ.ಗೌಡ ರನ್ನು ಕೇಳಿದ್ರೆ ಅವರು ಹೇಳಿತದು ಹೀಗೆ. ಸರ್ ನಮ್ಮಲ್ಲಿ ಸರ್ವರ್ ಪ್ರಾಬ್ಲಮ್ ಆಗಿದೆ. ಶಿರಾ ತಾಲೂಕಿನಲ್ಲಿ ಮಾರಕ ರೋಗಗಳ ಹಾವಳಿ ಹೆಚ್ಚಾಗುತ್ತಿದೆ. ಅದೇ ಕಾರಣಕ್ಕೆ ನಮ್ಮ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಕ್ಕಳು ಮತ್ತು ಮಹಿಳೆಯರು ಹೆಚ್ಚಿಗೆ ಬರುತ್ತಿದ್ದಾರೆ. ಆದ್ರೆ ಇಂದು ಅಸ್ಪತ್ರೆಯಲ್ಲಿ ಚೀಟಿ ಕೊಡುವ ವೇಳೆ ಸರ್ವರ್ ಪ್ರಾಬ್ಲಮ್ ಆಗಿದೆ ಅಷ್ಟೇ ಎಂದರು
ಒಟ್ಟಿನಲ್ಲಿ ಮಾರಕ ರೋಗಗಳು ಹೆಚ್ಚಾಗುತ್ತಿವೆ ಎಂದು ತಿಳಿದಿದರು. ಜನರ ಸಮಸ್ಯೆ ಬಗೆ ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಆದ್ರೆ ಈಗೆ ತಾಯಂದಿರು ಹಾಗೂ ಮಕ್ಕಳನ್ನು ಗಂಟೆ ಗಟ್ಟಲೇ ಕಾಯಿಸುವುದು ಎಷ್ಟು ಸರಿ.ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸ ಬೇಕಾಗಿದೆ




