
DEVANAHALLI NEWS : ದೇವನಹಳ್ಳಿ ತಾಲೂಕಿನ ಮಂಡಿಬೆಲೆ ಗ್ರಾಮ ಪಂಚಾಯ್ತಿ ಪಿಡಿಒಗಳು ಕಳ್ಳಾಟ ಆಡ್ತಾ ಇದ್ದು, ಪಿಡಿಒ ಅವರಿಂದ ಜನರಿಗೆ ಯಾವುದೇ ಕೆಲಸ ಆಗ್ತಾ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಮಂಡಿಬೆಲೆ ಗ್ರಾಮ ಪಂಚಾ ಯ್ತಿಯ ಪಿಡಿಒ ಅವರು ಬೇರೆಡೆಗೆ ವರ್ಗಾವಣೆ ಆಗಿದ್ದು, ಮುನಿರಾಜು ಎಂಬುವವರನ್ನು ತಾತ್ಕಾಲಿ ಕವಾಗಿ ಪಿಡಿಒ ಆಗಿ ನೇಮಕ ಮಾಡಲಾಗಿದೆ. ಆದ್ರೆ ಈ ಪಿಡಿಒ ಸರಿಯಾದ ಸಮಯಕ್ಕೆ ಗ್ರಾಮ ಪಂಚಾಯ್ತಿಗೆ ಬರದೇ ಇರೋದ್ರಿಂ ದ ಗ್ರಾಮದಲ್ಲಿ ಯಾವುದೇ ಕೆಲಸಗಳು ಆಗ್ತಾ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾ ಕಿದ್ರು,
ಇನ್ನು ಮಂಡಿಬೆಲೆ ಗ್ರಾಮ ಪಂಚಾಯ್ತಿಯ ಟೆಂಪ್ರವರಿ ಪಿಡಿಒ ಮುನಿರಾಜು ಅವರು ವಾರಕ್ಕೆ ಎರಡು ದಿನ ಮಾತ್ರ ಬರ್ತಾರೆ, ಅದ್ರಲ್ಲೂ ಬೆಳಗ್ಗೆ 10:30ವರೆಗೆ ಬರ್ತಾರೆ, ಮೀಟಿಂಗ್ ಇದೆ ಅದು ಇದೆ, ಇದು ಇದೆ ಅಂತಾ ಸಾಬೂಬು ಹೇಳಿಕೊಂಡು ಮಧ್ಯಾಹ್ನವೇ ಹೋಗ್ತಾರೆ. ಗ್ರಾಮದ ಸಮಸ್ಯೆಗಳ ಬಗ್ಗೆ ಅವರಿಗೆ ಕಿಂಚಿತ್ತು ಕಾಳ ಜಿ ಇಲ್ಲ,,, ಈ ಗ್ರಾಮಕ್ಕೆ ರಸ್ತೆ ಇಲ್ಲದೇ ಇಲ್ಲಿನ ಜನರು ಕಳೆದ 5 ವರ್ಷದಿಂದ ಪರದಾಡ್ತಾ ಇದ್ರು ಪಿಡಿಒ ಮಾತ್ರ ಕ್ಯಾರೆ ಅಂತಾ ಇಲ್ಲ ಎಂದು ಗ್ರಾಮಸ್ಥರು ಕುಡಿಕಾರಿದ್ರು.
ಇನ್ನು ಮಂಡಿಬೆಲೆ ಗ್ರಾಮ ಪಂಚಾಯ್ತಿಯಲ್ಲಿ ನಾನಾ ಸಮಸ್ಯೆಗಳು ಇದ್ದು, ಸಮಸ್ಯೆಗಳನ್ನು ಆಲಿಸ್ತಾ ಇಲ್ಲ ಎಂದು ಸಾರ್ವಜನಿಕರು ದೂರು ನೀಡಿದ ಬೆನ್ನಲ್ಲೇ ಸ್ಥಳಕ್ಕೆ ಪಂಚಾಯ್ತಿ ಇಒ ಶ್ರೀನಾಥ್ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿದ್ರು. ಆದ್ರೆ ಗ್ರಾಮಸ್ಥರ ಮನವಿ ಸ್ವೀಕರಿಸಿ ಪರಿಹಾರ ಬಗೆಹರಿ ಸದೆ ಇಒ ಸ್ಥಳದಿಂದ ಕಾಲ್ಕಿತ್ತರು. ಈ ವೇಳೆ ಮಾತನಾಡಿದ ಅವರು ಮಂಡಿಬೆಲೆ ಗ್ರಾಮ ಪಂಚಾಯ್ತಿಗೆ ತಾತ್ಕಲಿಕವಾಗಿ ಪಿಡಿಒ ಒಬ್ಬರನ್ನು ನೇಮಕ ಮಾಡಲಾಗಿದೆ, ಅವರು ಎರಡು ಗ್ರಾಮ ಪಂಚಾಯ್ತಿ ನೋಡಿ ಕೊಳ್ಳುತ್ತಿರೋದ್ರಿಂದ ಸಮಸ್ಯೆ ಆಗಿದೆ ಅಷ್ಟೇ, ಇನ್ನು ಎರಡು ಮೂರು ದಿನದಲ್ಲಿ ಹೊಸ ಪಿಡಿಒ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಇಒ ಶ್ರೀನಾಥ್ ತಿಳಿಸಿದ್ರು.
ಒಟ್ನಲ್ಲಿ ಮಂಡಿಬೆಲೆ ಗ್ರಾಮ ಪಂಚಾಯ್ತಿಗೆ ಶಾಶ್ವತ ಪಿಡಿಒ ನೇಮಕ ಆಗೊವರೆಗೂ ಗ್ರಾಮದ ಸಮಸ್ಯೆಗಳು ಬಗೆಹರಿಯೋದಿಲ್ಲ, ಆದಷ್ಟು ಬೇಗ ಈ ಗ್ರಾಮ ಪಂಚಾಯ್ತುಗೆ ಪರ್ಮನೆಂಟ್ ಪಿಡಿಒ ನೇಮಕ ಆಗಲಿ ಎಂದು ಸ್ಥಳೀಯರ ಒತ್ತಾಸೆಯಾಗಿದೆ, ಗ್ರಾಮ ಪಂಚಾಯ್ತಿ ಇಒ ಕೊಟ್ಟ ಮಾತಿನಂತೆ ಶಾಶ್ವತ ಪಿಡಿಒ ಅವರನ್ನು ನೇಮಕ ಮಾಡ್ತಾರಾ ಎಂದು ಕಾದುನೋಡಬೇಕಿದೆ.




