
TUMAKURU : ಮುಂದಿನ ದಿನಗಳಲ್ಲಿ ತುಮಕೂರು ನಗರದ ಹೊವಲಯದ ಮರಳೂರು ಕೆರೆಯನ್ನ ಕುಡಿಯುವ ನೀರಿನ ಸಂಗ್ರಹಕ್ಕೆ ಇಡಲಾಗುವುದು ಅಂತಾ ಸ್ವಾತಂತ್ರ್ಯ ದಿನಾಚರಣೆಯಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ರು. ಆದ್ರೆ ಈ ಮರಳೂರು ಕೆರೆ ದಿನದಿಂದ ದಿನಕ್ಕೆ ಮಲಿನ ಆಗ್ತಾ ಇದ್ದು, ಅಪ್ಪಿ ತಪ್ಪಿ ಈ ಕೆರೆಯ ನೀರನ್ನು ಜನ- ಜಾನುವಾರುಗಳು ಏನಾದ್ರು ಕುಡಿದ್ರೆ ಯಮಲೋಕಕ್ಕೆ ಟಿಕೆಟ್ ತಗೊಳೋದಂತೂ ಫಿಕ್ಸ್ ಆಗಿದೆ,,, ಹೌದು ಮರಳೂರು ಕೆರೆಗೆ ಸುತ್ತಮುತ್ತಲ ಲೇಔಟ್ ಮಾಲೀಕರು, ಹಾಸ್ಟೆಲ್ಗಳು ಹಾಗೂ ಹೊಟೇಲ್ಗಳಿಂದ ತ್ಯಾಜ್ಯ ನೀರು ಸೇರ್ತಾ ಇದ್ದು, ಕೆರೆಗೆ ವಿಷಯುಕ್ತ ಆಗ್ತಾ ಇದೆ ಎಂದು ಗಂಭೀರ ಆರೋಪ ಕೇಳಿಬಂದಿದೆ.
ನಗರದ ಹೊರವಲಯದ ಔಟರ್ ರಿಂಗ್ ರೋಡ್ನ ಕುಣಿಗಲ್ ಸರ್ಕಲ್ನಲ್ಲಿ ಲೇಔಟ್ಗಳು, ಹೋಟೆಲ್ಗಳು ಹಾಗೂ ಹಾಸ್ಟೆಲ್ಗಳು ನಿರ್ಮಾಣ ಆಗಿವೆ… ಇನ್ನು ಲೇಔಟ್, ಹೋಟೆಲ್ಗಳಿಗೆ ಪಾಲಿಕೆ ಯುಜಿಡಿ ಕಲೆಕ್ಷನ್ ಕೊಟ್ಟಿಲ್ಲ.. ಹೀಗಾಗಿ ಚರಂಡಿ ಮೂಲಕ ಡ್ರೈನೇಜ್ ನೀರನ್ನು ಕೆರೆಗೆ ಬಿಡಲಾಗ್ತಿದೆ. ಅಷ್ಟೇ ಯಾಕೆ ಕಸವನ್ನು ಕೂಡ ಕೆರೆಗೆ ತಂದು ಜನರು ತಂದು ಸುರಿಯುತ್ತಿದ್ದು, ಕೆರೆ ಮಲಿನವಾಗ್ತಿದೆ ಎಂದು ಗಂಭೀರ ಮಾಡಲಾಗಿದೆ.
ಇನ್ನು ಕುಣಿಗಲ್ ಸರ್ಕಲ್ ಬಳಿ ಅಕ್ರಮವಾಗಿ ಕೆರೆಯ ಏರಿಯನ್ನು ಪಾರ್ಟಿಹಾಲ್ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಲ್ಲದೇ, ಹೋಟೆಲ್ನಿಂದ ತ್ಯಾಜ್ಯ ನೀರನ್ನು ಮರಳೂರು ಕೆರೆಗೆಬಿಡಲಾಗ್ತಿದ್ದು, ಕೆರೆಯ ನೀರು ಕಲುಷಿತವಾಗ್ತಿದೆ. ಇನ್ನು ಮರಳೂರು ಕೆರೆ ಮಲಿನವಾಗ್ತಾ ಇರೋದ್ರ ಬಗ್ಗೆ ನಿಮ್ಮ ಪ್ರಜಾಶಕ್ತಿ ಎಚ್ಚರಿಸುವ ಕೆಲಸ ಮಾಡಿತ್ತು. ಅದ್ಯಾವಾಗ ಪ್ರಜಾಶಕ್ತಿ ಟಿವಿಯಲ್ಲಿ ಮರಳೂರು ಕೆರೆ ಕಲುಷಿತವಾಗಿದ್ದರ ಬಗ್ಗೆ ಸುದ್ದಿ ಬಿತ್ತರ ಮಾಡಿದ್ದರ ಜೊತೆಗೆ ಸಾರ್ವಜನಿಕರು ಆರೋಪ ಮಾಡಿದ ಬೆನ್ನಲ್ಲೇ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ತಿಪ್ಪೇಸ್ವಾಮಿ, ಮರಳೂರು ಕೆರೆಯನ್ನು ವೀಕ್ಷಣೆ ಮಾಡಿ ಬೇಸರ ವ್ಯಕ್ತಪಡಿಸಿದ್ರು.
ಇನ್ನು ಮರಳೂರು ಕೆರೆಗೆ ತ್ಯಾಜ್ಯಾ ನೀರನ್ನು ಬಿಡ್ತಾ ಇರೋದ್ರ ಬಗ್ಗೆ ಕಣ್ಣಾರೆ ಕಂಡ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಬೇಸರ ವ್ಯಕ್ತಪಡಿಸಿದ್ರು. ಅಲ್ದೇ ಮರಳೂರು ಕೆರೆ ಕಲುಷಿತವಾಗ್ತಿರೋದ್ರ ಬಗ್ಗೆ ಪಾಲಿಕೆಗೆ ತಿಳಿಸಿದ್ರು ಕೂಡ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ತುಮಕೂರು ಪಾಲಿಕೆ ವಿರುದ್ಧ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ತಿಪ್ಪೇಸ್ವಾಮಿ ಆಕ್ರೋಶ ಹೊರಹಾಕಿದ್ರು. ಜೊತೆಗೆ ಮರಳೂರು ಕೆರೆಗೆ ಚರಂಡಿ ನೀರು ಹಾಗೂ ಯುಜಿಡಿ ನೀರು ಹರಿಯುತ್ತಿರುವುದನ್ನು ಕಂಡು ಇಂಜಿನಿಯರ್ ತಿಪ್ಪೇಸ್ವಾಮಿ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಇನ್ನು ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಮರಳೂರು ಕೆರೆ ಮಲಿನವಾಗ್ತಾ ಇದ್ದು, ಕೆರೆಯ ನೀರು ಸಂಪೂರ್ಣ ವಿಷಕಾರಿ ಆಗ್ತಾ ಇದೆ. ಈ ನೀರನ್ನು ಕುಡಿದ್ರೆ ಸಾಯೋದಂತೂ ಪಕ್ಕಾ,,, ಈ ಕೆರೆಯ ನೀರಿನ್ನು ಬಳಸಿಕೊಂಡು ಕೆಲ ರೈತರು ಸೊಪ್ಪು,ತರಕಾರಿ ಬೆಳೆಯುತ್ತಿದ್ರು ಈಗ ಚರಂಡಿ ನೀರಲ್ಲಿ ಸೊಪ್ಪು ಬೆಳೆಯುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ರು.
ಒಟ್ನಲ್ಲಿ, ಪಾಲಿಕೆಯ ನಿರ್ಲಕ್ಷ್ಯವೋ ಏನೋ.. ಮರಳೂರು ಕೆರೆಗೆ ಕಲುಷಿತ ನೀರು ಸೇರ್ತಾ ಇದ್ದು, ಕೆರೆಯ ನೀರು ಕಲುಷಿತವಾಗ್ತಾ ಇದೆ. ಇನ್ನಾದ್ರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಮನವಿ ಮೇರೆಗೆ ಆದ್ರು ಪಾಲಿಕೆ ಎಚ್ಚೆತ್ತು ಅನಧಿಕೃತವಾಗಿ ತ್ಯಾಜ್ಯ ನೀರು ಬಿಡುವ ಹೋಟೆಲ್ ಹಾಗೂ ಲೇಔಟ್ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ.




