Accident : ಬೊಲೆರೋ ವಾಹನವೊಂದು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಇಬ್ಬರ ಯುವಕರು ಸಾವು.

ಬೆಂಗಳೂರು ಉತ್ತರದ ಮಾಚೋಹಳ್ಳಿ ಬಳಿ ನೆನ್ನೆ ಸಂಜೆ ಸಂಭವಿಸಿದ ಭೀಕರ Road Accident ನಲ್ಲಿ ಬೊಲೆರೋ ವಾಹನ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮೃತರನ್ನು ಗಗನ್ (27) ಮತ್ತು ದರ್ಶನ್ (26) ಎಂದು ಗುರುತಿಸಲಾಗಿದೆ.
ಇದನ್ನು ಓದಿ : ಹೀಲಿಯಂ Gas Cylinder Explosion – ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ
ಸ್ನೇಹಿತನ ರೂಂಗೆ ತೆರಳುತ್ತಿದ್ದ ವೇಳೆ ಅಪಘಾತ
ಚನ್ನರಾಯಪಟ್ಟಣದ ಮೂಲದ ಗಗನ್ ಮಾದನಾಯಕನಹಳ್ಳಿ ಖಾಸಗಿ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ದರ್ಶನ್ ಕೋಳಿ ಸಪ್ಲೈ ಮಾಡುವ ವಾಹನ ಡ್ರೈವರ್ ಆಗಿದ್ದ.
ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಸ್ನೇಹಿತನ ರೂಂಗೆ ತೆರಳುತ್ತಿದ್ದ ವೇಳೆ, ಮಾಗಡಿ ರಸ್ತೆಯ ಮಾಚೋಹಳ್ಳಿ ಬೊಲೆರೋ ವಾಹನ ಬಂದು ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತದೇಹ ಶವಾಗಾರಕ್ಕೆ ರವಾನೆ
ಇನ್ನು ಮೃತ ದೇಹಗಳನ್ನು ನೆಲಮಂಗಲ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನು ನೋಡಿ : DEVARAYANA DURGAದಲ್ಲಿ ಕೋತಿಗಳ ಮಾರಣಹೋಮ..?




