ದೊಡ್ಮನೆಯಿಂದ Spandana Somanna ಔಟ್ ಆಗಿದ್ದಾರೆ.

ದೊಡ್ಮನೆಯಿಂದ ಈ ಬಾರಿ ಯಾರು ಔಟ್ ಆಗ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಬಿಗ್ ಬಾಸ್ ಕನ್ನಡ ಮನೆಯಿಂದ ನಟಿ ಸ್ಪಂದನಾ ಸೋಮಣ್ಣ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಅವರ Bigg Boss ಪಯಣ ಅಂತ್ಯವಾಗಿದೆ.

ಡಬಲ್ ಎಲಿಮಿನೇಷನ್
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಅಚ್ಚರಿಯಾಗಿ ಮಾಳು ಮತ್ತು ಸೂರಜ್ ಮನೆಯಿಂದ ಹೊರ ಬಂದಿದ್ದರು. ಈ ವಾರ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ Spandana Somanna ಅವರು ಮನೆಯಿಂದ ಹೊರಬಂದಿದ್ದಾರೆ.

ಇದನ್ನು ಓದಿ : ತಿಥಿ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ
ಇನ್ನೆರಡು ವಾರಗಳಲ್ಲಿ ಶೋಗೆ ತೆರೆ
ಬಿಗ್ ಬಾಸ್ ಕನ್ನಡ ಸೀಸನ್ ಇದೀಗ 100 ದಿನಗಳ ಸನಿಹದಲ್ಲಿ ಸಾಗುತ್ತಿದ್ದು, ಇನ್ನೆರಡು ವಾರಗಳಲ್ಲಿ ಶೋಗೆ ತೆರೆ ಬೀಳಲಿದೆ. ಹೀಗಾಗಿ ಶೋ ನಿರ್ಣಾಯಕ ಹಂತ ತಲುಪಿದ್ದು, ಪ್ರತಿ ವಾರವೂ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.

Week ಸ್ಪರ್ಧಿ
ಈ ವಾರ ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಹಾಗೂ ಧನುಶ್ ನಾಮಿನೇಟ್ ಆಗಿದ್ದರು. ಈ ಪೈಕಿ ಸ್ಪಂದನಾ ಅವರೇ ವೀಕ್ ಸ್ಪರ್ಧಿ ಎಂಬ ಅಭಿಪ್ರಾಯ ಹಲವು ಸ್ಪರ್ಧಿಗಳಲ್ಲಿತ್ತು. ಮನೆಯಲ್ಲಿ ಅಡುಗೆ ಕೆಲಸ, ಟಾಸ್ಕ್ಗಳಲ್ಲಿ ಹೆಚ್ಚು ಸಕ್ರಿಯವಾಗದಿರುವುದು, ಸ್ಪಷ್ಟ ಸ್ಟ್ಯಾಂಡ್ ತಗೊಳ್ಳದಿರುವುದೇ ಅವರ ವಿರುದ್ಧದ ಟೀಕೆಯಾಗಿತ್ತು.

ದಿಲ್ ಖುಷ್’ ಮತ್ತು ‘ಮರೀಚಿ’ ಸಿನಿಮಾಗಳಲ್ಲಿ ಅಭಿನಯ
ನಟಿ ಸ್ಪಂದನಾ ಸೋಮಣ್ಣ ಅವರು ಮೂಲತಃ ಮೈಸೂರಿನವರಾಗಿದ್ದು, ಕನ್ನಡದ ‘ದಿಲ್ ಖುಷ್’ ಮತ್ತು ‘ಮರೀಚಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ‘ಕರಿಮಣಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದರು.

ಇದನ್ನು ನೋಡಿ : ಇಂದಿನಿಂದ ಶುರು SSLC ಪೂರ್ವ ಸಿದ್ಧತಾ ಪರೀಕ್ಷೆ, ಮೂರು ಹಂತದಲ್ಲಿ ಎಕ್ಸಾಮ್




