BBK 12 : ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಮೊದಲ ಫಿನಾಲೆ ನಡೆಯಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Biggboss Seson 12) ಈ ವಾರ ಮೊದಲ ಫಿನಾಲೆ ನಡೆಯಲಿದ್ದು, ಈ ಹಿನ್ನೆಲೆ ಸ್ಪರ್ಧಿಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಂಪೂರ್ಣ ಶಕ್ತಿ ತೋರುತ್ತಿದ್ದಾರೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ ಮತ್ತು ಮಾಲು ಫಿನಾಲೆ ಕಂಟೆಂಡರ್ ಆಗಿದ್ದಾರೆ. ಇನ್ನೂ ಒಬ್ಬ ಸ್ಪರ್ಧಿ ಫಿನಾಲೆಗೆ ಏರಬೇಕಿದೆ.
ಈ ನಡುವೆ, ಈ ವಾರದ ಮಹತ್ವದ ಟಾಸ್ಕ್ಗಳಲ್ಲಿ ಸ್ಪಂದನಾ ತೆಗೆದುಕೊಂಡ ಶಾಕಿಂಗ್ ನಿರ್ಧಾರದಿಂದ ಧ್ರುವಂತ್ ಸಂಪೂರ್ಣವಾಗಿ ಎಲ್ಲಾ ಟಾಸ್ಕ್ಗಳಿಂದ ಬ್ಲಾಕ್ ಆಗಿದ್ದಾರೆ. ಸ್ಪಂದನಾಗೆ ನೀಡಲಾದ ವಿಶೇಷ ಅಧಿಕಾರ ಬಳಸಿಕೊಂಡು, “ಧ್ರುವಂತ್ ಅವರಿಗೆ ಸ್ಪೋರ್ಟ್ಸ್ಮ್ಯಾನ್ಶಿಪ್ ಇಲ್ಲ. ಅವರು ಆಡಬೇಕು ಎಂಬ ಇಚ್ಛೆ ಕಾಣಿಸುತ್ತಿಲ್ಲ” ಎಂದು ಹೇಳಿ ಬ್ಲಾಕ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಇದನ್ನು ನೋಡಿ : ನಗರದ ಹೆಬ್ಬಾಗಿಲಲ್ಲೇ ಬಿದ್ದಿವೆ ಗುಂಡಿಗಳು

ಮೊದಲ ಫಿನಾಲೆಯ ಈ ವಾರ ತಾವು ಫೈನಲಿಸ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಯಾಣ ಮುಂದುವರೆಸಲು ಇದು ಕಟ್ಟ ಕಡೆಯ ಅವಕಾಶ ಎಂದು ಹೇಳಿ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಫಿನಾಲೆ ಕಂಟೆಂಡರ್ ಅಲ್ಲದ ಸ್ಪರ್ಧಿಗಳು ಒಂದು ದೊಡ್ಡ ಬಲೂನ್ ಅನ್ನು ಒಂದು ತುದಿಯಿಂದ ಮತ್ತೊಂದು ತುದಿಯಲ್ಲಿರುವ ಮೇಜಿನ ಮೇಲೆ ಇಡಬೇಕು. ಹೀಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ಸಾಗುವಾಗ ಮಧ್ಯದಲ್ಲಿ ಬಳ್ಳಿಯಿಂದ ಪರದೆಯ ರೀತಿ ಹಾಕಲಾಗಿದೆ. ಅದನ್ನು ತಪ್ಪಿಸಿಕೊಂಡು ಗುರಿ ಮುಟ್ಟಬೇಕು.
ಇನ್ನು ಈ ಟಾಸ್ಕ್ನಲ್ಲಿ ಧ್ರುವಂತ್ ಉತ್ತಮ ಪ್ರದರ್ಶನ ನೀಡಿರುವಂತೆ ಕಂಡುಬರುತ್ತಿದೆ. ಆದರೆ, ಉತ್ತಮ ಪ್ರದರ್ಶನ ನೀಡಿದರೂ, ಸ್ಪಂದನಾರ ನಿರ್ಧಾರದಿಂದ ಅವರು ಫಿನಾಲೆ ತಲುಪುವ ಅವಕಾಶ ಕಳೆದುಕೊಂಡಂತಾಗಿದೆ. ಬಿಗ್ ಬಾಸ್ ಅಧಿಕೃತವಾಗಿ ಧ್ರುವಂತ್ ಎಲ್ಲಾ ಟಾಸ್ಕ್ಗಳಿಂದ ಬ್ಲಾಕ್ ಆಗಿದ್ದಾರೆ ಎಂದು ಘೋಷಿಸಿದ್ದಾರೆ. ಫಿನಾಲೆ ಕಂಟೆಂಡರ್ ಸ್ಥಾನಕ್ಕಾಗಿ ಈ ನಿರ್ಧಾರ ದೊಡ್ಡ ತಿರುವು ತಂದಿದ್ದು, ಮನೆಯ ಒಳಗಿನ ಆಟದ ತೀವ್ರತೆ ಮತ್ತಷ್ಟು ಹೆಚ್ಚಿದೆ.
ಇದನ್ನು ಓದಿ : ಸ್ಪಂದನಾರಿಂದ ಮಾಸ್ಟರ್ ಸ್ಟ್ರೋಕ್: ಎಲ್ಲ ಟಾಸ್ಕ್ನಿಂದ ಧ್ರುವಂತ್ ಬ್ಲಾಕ್





