Kitchen Recipe : ಮಕ್ಕಳ ಟಿಫನ್ ಬಾಕ್ಸ್ಗೆ ಚಪಾತಿ ಅಥವಾ ರೋಟಿಗೆ ಪರ್ಫೆಕ್ಟ್ ಕಾಂಬಿನೇಷನ್ ಬೇಕಾ? ಅಂದ್ರೆ ಆಲೂ ಜೀರಾ ಫ್ರೈ ಅತ್ಯುತ್ತಮ ಆಯ್ಕೆ. ಈ ರೆಸಿಪಿ ತುಂಬಾ ಸುಲಭ, ಕಡಿಮೆ ಸಮಯದಲ್ಲಿ ರೆಡಿ ಆಗುತ್ತದೆ.

Kitchen Recipe : ಮಕ್ಕಳು ಕೂಡ ಬಾಯಿಚಪ್ಪರಿಸಿಕೊಂಡು ತಿನ್ನುತ್ತಾರೆ. ಹಾಗಿದ್ರೆ ಮನೆಯಲ್ಲೇ ರುಚಿಕರವಾದ ಆಲೂ ಜೀರಾ ಫ್ರೈ ಮಾಡುವ ವಿಧಾನ ಇಲ್ಲಿದೆ.
🥔 ಬೇಕಾಗುವ ಸಾಮಗ್ರಿಗಳು
- ಎಣ್ಣೆ – 2 ಚಮಚ
- ಜೀರಿಗೆ – 1 ಚಮಚ
- ಶುಂಠಿ – 1 ಇಂಚು (ಸಣ್ಣಗೆ ಹೆಚ್ಚಿದದ್ದು)
- ಹಸಿಮೆಣಸಿನಕಾಯಿ – 2 (ಸಣ್ಣಗೆ ಕತ್ತರಿಸಿದವು)
- ಅರಿಶಿಣ ಪುಡಿ – ಸ್ವಲ್ಪ
- ದನಿಯಾ ಪುಡಿ – 1 ಚಮಚ
- ಆಮ್ಚೂರ್ ಪೌಡರ್ – ¼ ಚಮಚ
- ಇಂಗು – ಚಿಟಿಕೆ
- ಉಪ್ಪು – ರುಚಿಗೆ ತಕ್ಕಷ್ಟು
- ಬೇಯಿಸಿದ ಆಲೂಗಡ್ಡೆ – 2
- ಕೊತ್ತಂಬರಿ ಸೊಪ್ಪು – ಸ್ವಲ್ಪ
ಇದನ್ನು ಓದಿ : ಭೀಕರ ಅಗ್ನಿ ದುರಂತ – ಬೆಳೆ ಸುಟ್ಟು ಕರಕಲು, ರೈತ ಕಂಗಾಲು
👩🍳 ಮಾಡುವ ವಿಧಾನ
1: ಮೊದಲು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಜೀರಿಗೆ ಹಾಕಿ ಸಿಡಿಯಲು ಬಿಡಿ.
2: ಜೀರಿಗೆ ಸಿಡಿದ ಬಳಿಕ ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಹುರಿಯಿರಿ.
3: ಉರಿ ಸಣ್ಣಗೆ ಮಾಡಿ ಅರಿಶಿಣ ಪುಡಿ, ದನಿಯಾ ಪುಡಿ, ಆಮ್ಚೂರ್ ಪೌಡರ್, ಇಂಗು ಮತ್ತು ಉಪ್ಪು ಸೇರಿಸಿ. ಮಸಾಲೆ ತಳಹಿಡಿಯದಂತೆ ಚೆನ್ನಾಗಿ ಕಲಸಿ.
4: ಈಗ ಬೇಯಿಸಿ ಸಿಪ್ಪೆ ತೆಗೆದು ಕತ್ತರಿಸಿದ ಆಲೂಗಡ್ಡೆ ಹಾಕಿ. ಆಲೂಗಡ್ಡೆ ಚೂರಾಗದಂತೆ ನಿಧಾನವಾಗಿ ಮಿಶ್ರಣ ಮಾಡಿ.
5: 2 ಚಮಚ ನೀರು ಸೇರಿಸಿ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿರಿ.
6: ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಕಲಿಸಿದರೆ ರುಚಿಕರವಾದ ಆಲೂ ಜೀರಾ ಫ್ರೈ ಸಿದ್ಧ.
🍽️ ಸರ್ವಿಂಗ್ ಸಲಹೆ
ಚಪಾತಿ, ರೋಟಿ ಅಥವಾ ಫುಲ್ಕಾಗೆ ಇದು ಪರ್ಫೆಕ್ಟ್ ಸೈಡ್ ಡಿಶ್. ಮಕ್ಕಳ ಟಿಫನ್ ಬಾಕ್ಸ್ಗೆ ಸಹ ತುಂಬಾ ಸೂಕ್ತ.
ಇದನ್ನು ನೋಡಿ : ಅಮಾನವೀಯ ಕೃತ್ಯ: ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿ; 10 ದಿನದಿಂದ ನರಳಾಟ




