Health Tips : ಈ ಕಾಯಿಲೆ ಇರುವವರು ಮಟನ್, ಚಿಕನ್ ಲಿವರ್ ತಿನ್ನಲೇಬಾರದು.. ಇದರಲ್ಲಿ ಯಾವುದು ಒಳ್ಳೆಯದು?

ಮಾಂಸಾಹಾರ ಸೇವಿಸುವವರಲ್ಲಿ ಚಿಕನ್, ಮಟನ್ ಹಾಗೂ ಮೀನು ಸಾಮಾನ್ಯ ತಿನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಚಿಕನ್ ಲಿವರ್ ಹಾಗೂ ಮಟನ್ ಲಿವರ್ ಸೇವಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಈ ಎರಡರಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ
ಚಿಕನ್ ಲಿವರ್ ಕಬ್ಬಿಣ, ಸೆಲೆನಿಯಂ, ವಿಟಮಿನ್ ಎ, ವಿಟಮಿನ್ ಬಿ12, ಫೋಲೇಟ್ ಮತ್ತು ಪ್ರೋಟೀನ್ಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಇರುವ ಸೆಲೆನಿಯಂ ಅಂಶ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ ಎನ್ನಲಾಗಿದೆ. ಜೊತೆಗೆ ವಿಟಮಿನ್ ಎ ಮತ್ತು ಬಿ12 ಕಣ್ಣು ಹಾಗೂ ಮೆದುಳಿನ ಆರೋಗ್ಯವನ್ನು ಉತ್ತಮಪಡಿಸುತ್ತವೆ. ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಾಯ ಮಾಡಬಹುದು ಎಂಬ ಅಭಿಪ್ರಾಯವೂ ಇದೆ. ಲುವರ್ ಅನ್ನು ಸರಿಯಾದ ವಿಧಾನದಲ್ಲಿ ಬೇಯಿಸಿ ಮಿತವಾಗಿ ಸೇವಿಸಿದರೆ ದೇಹದಲ್ಲಿನ ಕೊಬ್ಬು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದನ್ನು ಓದಿ : ಭೀಕರ ಅಗ್ನಿ ದುರಂತ – ಬೆಳೆ ಸುಟ್ಟು ಕರಕಲು, ರೈತ ಕಂಗಾಲು
ದೇಹದಲ್ಲಿ ಆಮ್ಲಜನಕ ಪೂರೈಕೆ ಸುಧಾರಿಸುತ್ತದೆ
ಇನ್ನೊಂದೆಡೆ, ಮಟನ್ ಲಿವರ್ ಹೆಚ್ಚು ಕೊಬ್ಬು ಹೊಂದಿದ್ದರೂ ಪೋಷಕಾಂಶಗಳಲ್ಲಿ ಶ್ರೀಮಂತವಾಗಿದೆ. ಇದರಲ್ಲಿ ವಿಟಮಿನ್ ಎ, ಡಿ, ಬಿ12, ಸತು, ಪೊಟ್ಯಾಸಿಯಂ ಮತ್ತು ತಾಮ್ರದಂತಹ ಅಂಶಗಳು ದೊರೆಯುತ್ತವೆ. ಮಟನ್ ಲಿವರ್ ಸೇವನೆಯಿಂದ ದೇಹದಲ್ಲಿ ಆಮ್ಲಜನಕ ಪೂರೈಕೆ ಸುಧಾರಿಸಬಹುದು. ವಿಶೇಷವಾಗಿ ರಕ್ತಹೀನತೆ ಸಮಸ್ಯೆಯಿಂದ ಬಳಲುವವರಿಗೆ ಇದು ಉಪಯುಕ್ತ ಆಹಾರವಾಗಬಹುದು. ವಿಟಮಿನ್ ಬಿ12 ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕುಗಳಿಂದ ರಕ್ಷಣೆ ನೀಡುತ್ತದೆ ಎನ್ನಲಾಗುತ್ತಿದೆ.
ಈ ಕಾಯಿಲೆ ಇರುವವರು ತಿನ್ನಲೇ ಬಾರದು
ಆದರೆ, ಚಿಕನ್ ಹಾಗೂ ಮಟನ್ ಲಿವರ್ ಎಲ್ಲರಿಗೂ ಸೂಕ್ತವಲ್ಲ. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು, ಹೆಚ್ಚಿದ ಕೊಲೆಸ್ಟ್ರಾಲ್ ಹೊಂದಿರುವವರು, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವವರು ಹಾಗೂ ಗರ್ಭಿಣಿಯರು ಲಿವರ್ ಸೇವನೆಗೆ ಮಿತಿಯಿಟ್ಟುಕೊಳ್ಳುವುದು ಅಥವಾ ತಪ್ಪಿಸುವುದು ಉತ್ತಮ ಎಂದು ಸಲಹೆಯಾಗಿದೆ.
ಒಟ್ಟಿನಲ್ಲಿ, ಲಿವರ್ಗಳು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದರೂ, ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಮಿತವಾಗಿ ಸೇವಿಸುವುದೇ ಉತ್ತಮ.
ಇದನ್ನು ನೋಡಿ : ಅಮಾನವೀಯ ಕೃತ್ಯ: ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿ; 10 ದಿನದಿಂದ ನರಳಾಟ




