
ಚಿಕ್ಕನಾಯಕನಹಳ್ಳಿ:
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಗ್ರಾಮದ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಕ್ರಿಯಾ ವೇದಿಕೆ ವತಿಯಿಂದ, ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ನಾಲ್ಕನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾದ ಸಿಂಗದಹಳ್ಳಿ ರಾಜಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು.ಸಮಾರಂಭದಲ್ಲಿ ರಾಜಕುಮಾರ್ ಅವರಿಗೆ ಹಾರ ಹಾಕಿ, ಪುಷ್ಪಗುಚ್ಛ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,“ರಾಜಕುಮಾರ್ ಅವರ ಆಯ್ಕೆ ಕೇವಲ ವೈಯಕ್ತಿಕ ಸಾಧನೆ ಮಾತ್ರವಲ್ಲ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ರೈತರ ಹೋರಾಟದ ಪ್ರತಿಫಲವಾಗಿದೆ”. ಅವರು ಸದಾ ಸಹಕಾರ ಬ್ಯಾಂಕಿನ ಮೂಲಕ ರೈತರ ಹಿತಾಸಕ್ತಿಯನ್ನು ಕಾಪಾಡಿ, ಹಿಂದುಳಿದ ಸಮುದಾಯಗಳಿಗೆ ನೆರವಾದಿದ್ದಾರೆ. ಮುಂದೆಯೂ ಇದೇ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಲಿದ್ದಾರೆ” ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಇದೇ ವೇಳೆ ಸಿಂಗದ ಹಳ್ಳಿ ರಾಜ ಕುಮಾರ ಮತನಾಡಿ, ನಾನು ರೈತರ ಹಿತಾ ಸಕ್ತಿ ಕಾಪಾಡಲು ಬಂದಿದ್ದೇನೆ. ನಾನು ಯಾವುದೇ ರಾಜಕೀಯ ಮಾಡಲು ಬಂದಿಲ್ಲ. ಸಹಕಾರ ಬ್ಯಾಂಕ್ಗಳ ಮೂಲಕ ರೈತರಿಗೆ ಹಲವು ರೀತಿ ಯಲ್ಲಿ ಸಹಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ರೈತ ನಾಯಕರು, ಹಿಂದುಳಿದ ಸಮುದಾಯದ ಹಿರಿಯರು ಹಾಗೂ ಯುವಕರು ಭಾರಿ ಸಂಖ್ಯೆಯಲ್ಲಿ ಹಾಜರಿದ್ರು.




