
Caribbean Premier League 2025 : 2025ರ ಕೆರಿಬಿಯನ್ ಪ್ರೀಮಿಯರ್ ಲೀಗ್ನ (CPL) 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡವು ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.
ಗಯಾನಾ ಅಮೆಝಾನ್ ವಾರಿಯರ್ಸ್ವಿರುದ್ಧ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ, ಟಾಸ್ ಗೆದ್ದ ಗಯಾನಾ ತಂಡದ ನಾಯಕ ಇಮ್ರಾನ್ ತಾಹಿರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅವರ ನಿರ್ಧಾರವು ಅಪ್ಯಾಯಾಸಕರವಾಯಿತು, ಏಕೆಂದರೆ ತಂಡವು ನಿಗದಿತ 20 ಓವರ್ಗಳಲ್ಲಿ ಕೇವಲ 130 ರನ್ಗಳಿಸಲು ಸಾಧ್ಯವಾಯಿತು. 8 ವಿಕೆಟ್ಗಳನ್ನು ಕಳೆದುಕೊಂಡ ಗಯಾನಾ, ನಿರೀಕ್ಷಿತ ಮೊತ್ತ ಒದಗಿಸಲು ವಿಫಲವಾಯಿತು.
ಹೀಗಾಗಿ 131 ರನ್ಗಳ ಸರಳ ಗುರಿಯನ್ನು ಬೆನ್ನತ್ತಿದ ಟ್ರಿನ್ಬಾಗೊ ನೈಟ್ ರೈಡರ್ಸ್, ಆರಂಭದಲ್ಲಿ ಉತ್ತಮ ವಾಗಿ ಆಡಿದರೂ ಮಧ್ಯದಲ್ಲಿ 116 ರನ್ಗಳಿಗೆ 7 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಅಂತಿಮ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅಕೆಲ್ ಹೊಸೈನ್, ಕೇವಲ 7 ಎಸೆತಗಳಲ್ಲಿ 16 ರನ್ಬಾರಿಸಿ, 18ನೇ ಓವರ್ ಅಂತ್ಯಕ್ಕೆ ತಂಡವನ್ನು ಗೆಲುವಿನ ದಡ ತಲುಪಿಸಿದರು.
ಈ ಜಯದೊಂದಿಗೆ ಟ್ರಿನ್ಬಾಗೊ ತಂಡವು 3 ವಿಕೆಟ್ಗಳ ಜಯಸಾಧಿಸಿ, 2025ರ CPL ಚಾಂಪಿಯನ್ ಗೌರವವನ್ನು ತನ್ನದಾಗಿಸಿಕೊಂಡಿದೆ.




