
ಶಿಯೋಮಿ ಕಂಪನಿಯು ತನ್ನ ಬಹುನಿರೀಕ್ಷಿತ Xiaomi 17 ಸರಣಿಯ ಸ್ಮಾರ್ಟ್ಫೋನ್ಗಳನ್ನು ಸೆಪ್ಟೆಂಬರ್ 30ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ‘ಚೀನಾದ ಆಪಲ್’ ಎಂದು ಕರೆಯಲ್ಪಡುವ ಶಿಯೋಮಿಯ ಈ ಸರಣಿಯಲ್ಲಿ Xiaomi 17, Xiaomi 17 Pro ಮತ್ತು Xiaomi 17 Pro Max ಮಾದರಿಗಳನ್ನು ಒಳಗೊಂಡಿದೆ. ಇದೀಗ ಚೀನಾದಲ್ಲಿ ಪೂರ್ವ-ಬುಕಿಂಗ್ ಪ್ರಾರಂಭವಾಗಿದ್ದು, ಈ ಫೋನ್ಗಳು ಶಕ್ತಿಶಾಲಿ ಫೀಚರ್ಗಳೊಂದಿಗೆ ಮಾರುಕಟ್ಟೆಗೆ ಬರಲಿವೆ.
ಈ ಹೊಸ ಸರಣಿಯು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಎಲೈಟ್ ಜೆನ್ 5 ಪ್ರೊಸೆಸರ್ ನಿಂದ ಚಾಲಿತವಾಗಿದ್ದು, ಲೈಕಾ-ಬ್ರಾಂಡೆಡ್ ಕ್ಯಾಮೆರಾ ಹಾಗೂ ಆಂಡ್ರಾಯ್ಡ್ 16 ಆಧಾರಿತ HyperOS 3 ಕಾರ್ಯವಿಧಾನವನ್ನು ಹೊಂದಿದೆ. ವಿಶೇಷ ಆಕರ್ಷಣೆಯಾಗಿರುವ ಮ್ಯಾಜಿಕ್ ಬ್ಯಾಕ್ ಸ್ಕ್ರೀನ್ ವೈಶಿಷ್ಟ್ಯವು ಹಿಂಭಾಗದಲ್ಲಿಯೇ ದ್ವಿತೀಯ ಡಿಸ್ಪ್ಲೇ ಆಗಿ ಕಾರ್ಯನಿರ್ವಹಿಸಿ ಕರೆ ನೋಟಿಫಿಕೇಶನ್ಗಳು, ಮ್ಯೂಸಿಕ್ ನಿಯಂತ್ರಣ ಹಾಗೂ ವಿವಿಧ ಉಪಯುಕ್ತ ವಿಜೆಟ್ಗಳನ್ನು ತೋರಿಸುತ್ತದೆ.

ಫೀಚರ್ಗಳ ವಿಚಾರದಲ್ಲಿ, Xiaomi 17 Pro 6.3 ಇಂಚಿನ LTPO AMOLED ಡಿಸ್ಪ್ಲೇ, 6,300mAh ಬ್ಯಾಟರಿ, 100W ವೇಗದ ಚಾರ್ಜಿಂಗ್ ಮತ್ತು 50W ವೈರ್ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಹಿಂಭಾಗದಲ್ಲಿ ಟ್ರಿಪಲ್ 50MP ಕ್ಯಾಮೆರಾ ಸೆಟಪ್ (ಪ್ರಾಥಮಿಕ, ಟೆಲಿಫೋಟೋ ಮತ್ತು ಅಲ್ಟ್ರಾ-ವೈಡ್) ಹೊಂದಿದೆ. ಅದೇ ರೀತಿ Xiaomi 17 ಮಾದರಿಯು 6.3 ಇಂಚಿನ 1.5K LTPO OLED ಡಿಸ್ಪ್ಲೇ, 7000mAh ದೊಡ್ಡ ಬ್ಯಾಟರಿ ಹಾಗೂ 100W/50W ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆ ಸೇರುವ ನಿರೀಕ್ಷೆಯಿದೆ.
ಈ ಸರಣಿಯು ಕಳೆದ ವರ್ಷ ಬಿಡುಗಡೆಯಾದ Xiaomi 15 ಸರಣಿಯ ಅಪ್ಗ್ರೇಡ್ ಆಗಿದ್ದು, ಶಕ್ತಿಯುತ ಬ್ಯಾಟರಿ, ತಂತ್ರಜ್ಞಾನಾಧಾರಿತ ಫೀಚರ್ಗಳು ಹಾಗೂ ಆಕರ್ಷಕ ವಿನ್ಯಾಸದಿಂದ ಆಪಲ್ ಐಫೋನ್ 17 ಸರಣಿಗೆ ಗಟ್ಟಿ ಪೈಪೋಟಿ ನೀಡಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.




