
CYBER CRIME : ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಅವರ ಪತ್ನಿ ಡಾ. ಪ್ರೀತಿ ಸುಧಾಕರ್ ಈ ವಂಚನೆಯ ಬಲೆಗೆ ಬಿದ್ದಿದ್ದಾರೆ.
ಅವರಿಂದ ಸೈಬರ್ ವಂಚಕರು ಸುಮಾರು ₹14 ಲಕ್ಷ ರೂಪಾಯಿ ವಂಚಿಸಿದ್ದಾರೆಎಂಬ ಮಾಹಿತಿ ಹೊರ ಬಿದ್ದಿದೆ. ಆಗಸ್ಟ್ 26ರಂದು ಬೆಳಿಗ್ಗೆ 9:30ರ ಸುಮಾರಿಗೆ ಡಾ. ಪ್ರೀತಿ ಅವರಿಗೆ ಕರೆಮಾಡಿದ ವಂಚಕರು, ತಾವು ಮುಂಬೈ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ.
“ಸದ್ಭತ್ ಖಾನ್”ಎಂಬ ಅಪರಿಚಿತ ವ್ಯಕ್ತಿ ಅವರ ದಾಖಲೆಗಳನ್ನು ಬಳಸಿಕೊಂಡು ಕ್ರೆಡಿಟ್ ಕಾರ್ಡ್ ತೆಗೆದುಕೊಂಡು, ಅನಧಿಕೃತ ಹಣ ವರ್ಗಾವಣೆ ಮಾಡಿ, ಆಧಾರದ ಮೇಲೆ ವಿದೇಶಕ್ಕೆ ಕಾನೂನು ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಭಯಹುಟ್ಟಿಸಿ, ತನಿಖೆಗೆ ಸಹಕರಿಸುವಂತೆ ಹೇಳಿದ್ದರಂತೆ.
ಈ ವಿಚಾರವಾಗಿ ಸದ್ಬತ್ ಖಾನ್ ಬಂಧನವಾಗಿದ್ದು, ಆತನ ಹೇಳಿಕೆಯಲ್ಲಿ ನಿಮ್ಮ ಹೆಸರಿನ ದಾಖಲೆಯಿದ್ದು ಇದ್ರ ವಿಚಾರಣೆ ನಡೆಸೋ ಸಲುವಾಗಿ ವಿಡಿಯೋ ಕಾಲ್ ಮಾಡಿದ್ರಂತೆ. ನಂತರ ನಿಮ್ಮ ದಾಖಲೆ ಹಾಗೂ ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡೋದಾಗಿ ಬೆದರಿಸಿದ್ರಂತೆ. ನಿಮ್ಮ ಅಕೌಂಟ್ ಇಲ್ಲಿಗಲ್ ಆಗಿದ್ದು ಅದನ್ನ ಪರೀಕ್ಷೆ ಮಾಡಲು ಹಣ ಹಾಕಿ ಎಂದು ಬೆದರಿಸಿ ಪ್ರೀತಿ ಅವರಿಂದ 14 ಲಕ್ಷ ಹಣ ಹಾಕಿಸಿಕೊಂ ಡಿದ್ರಂತೆ.
ಹಣ ಹಾಕಿದ ಆರ್ ಬಿ ಐ ರೂಲ್ಸ್ ಪರಿಶೀಲನೆ ಮಾಡಿ 45 ನಿಮಿಷದಲ್ಲಿ ವಾಪಸ್ ಹಾಕೋದಾಗಿ ಹೇಳಿದ್ದಕ್ಕೆ ಪ್ರೀತಿ ಸುಧಾಕರ್ 14 ಲಕ್ಷಹಣವನ್ನ ವಂಚಕರು ಹೇಳಿದ ಖಾತೆಗೆ ಆರ್ ಟಿಜಿಎಸ್ ಮಾಡಿದ್ರಂತೆ. ಹಣ ಹಾಕಿದ ನಂತರ ವಂಚಯಾಗಿರೋದು ಗೊತ್ತಾಗಿ ಪೊಲೀಸ್ ಠಾಣೆಗೆ ಓಡೋಡಿ ದೂರು ನೀಡಿದ್ದಾರೆ.
ಸದ್ಯ, ಡಾ. ಪ್ರೀತಿ ಸುಧಾಕರ್ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದ್ದು, ಪೊಲೀಸರು ವಂಚಕರ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ.




