Madhugiri ಯಲ್ಲಿ ಭೀಕರ ಅಪಾಘತ ಸಂಭವಿಸಿದೆ.

ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಸಮೀಪ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ್ದು, ಪರಿಣಾಮವಾಗಿ ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟಿದ್ದಾರೆ. ಇನ್ನು ಈ ಅಪಘಾತ ಹಿಂದುಪುರ‑ಕೋಡಿಗೇನಹಳ್ಳಿ ರಸ್ತೆಯ ಪೋಲೇನಹಳ್ಳಿ ಗ್ರಾಮದ ಬಳಿ ನಡೆದಿದೆ.
ಇದನ್ನು ಓದಿ : PG, Apartment ಗಳಲ್ಲಿ ಈ ಸೌಲಭ್ಯಗಳು ಇಲ್ಲ ಅಂದ್ರೆ ವಾರದಲ್ಲಿ ಬೀಗ ಫಿಕ್ಸ್

ಮೃತರನ್ನು ಪೋಲೇನಹಳ್ಳಿಯ ನಿವಾಸಿ ಲಕ್ಷ್ಮೀ ನಾರಾಯಣಪ್ಪ (53) ಎಂದು ಗುರುತಿಸಲಾಗಿದೆ. ಲಕ್ಷ್ಮೀ ನಾರಾಯಣಪ್ಪ ಸೌದೆ ವ್ಯಾಪಾರ ಮಾಡುತ್ತಿದ್ದರು. ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಕಾಣಿಕೆ ನೀಡಿ ಹಿಂತಿರುಗುತ್ತಿದ್ದಾಗ ಈ Accident ಸಂಭವಿಸಿದೆ.

ಇನ್ನು ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ನೋಡಿ : ‘ಧುರಂಧರ್’ ಧಮಾಕ; ಕರ್ನಾಟಕದಲ್ಲಿ ಈ ಸಿನಿಮಾ ಗಳಿಸಿದ ಹಣವೆಷ್ಟು ಗೊತ್ತಾ?




