ಬೆಂಗಳೂರಿನ PG, ಅಪಾರ್ಟ್ಮೆಂಟ್ಗಳಿಗೆ ಹೊಸ ರೂಲ್ಸ್.

ಸಿಲಿಂಡರ್ ಸ್ಫೋಟದ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಲರ್ಟ್ ಆಗಿದೆ. ಇನ್ನು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಾಲಿಕೆ ಮಾರ್ಗಸೂಚಿ ಹೊರಡಿಸಿದೆ.
ಪಿಜಿಗೆ ಸೀಲ್ ಹಾಕುವುದು ಗ್ಯಾರಂಟಿ
ಪಾಲಿಕೆ ಅಧಿಕಾರಿಗಳು PG, ಹಾಸ್ಟೆಲ್ ಹಾಗೂ ಸರ್ವೀಸ್ ಅಪಾರ್ಟ್ಮೆಂಟ್ಗಳಲ್ಲಿ ಮೆಗಾ ಡ್ರೈವ್ ನಡೆಸುತ್ತಿದ್ದು, ಒಂದು ವಾರದೊಳಗೆ ಎಲ್ಲಾ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಡೆಡ್ಲೈನ್ ನೀಡಿದ್ದಾರೆ. ಇನ್ನು ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಪರವಾನಗಿ ರದ್ದುಪಡಿಸಿ ಪಿಜಿಗೆ ಸೀಲ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನು ಓದಿ : ಹೊಸ ವರ್ಷದ ದಿನವೇ ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು

ಕಠಿಣ ಕ್ರಮ
ಇತ್ತೀಚಿನ ದಿನಗಳಲ್ಲಿ ಅಕ್ರಮ ಅನಿಲ ಸಂಪರ್ಕ, ಅಸುರಕ್ಷಿತ ಸಿಲಿಂಡರ್ ಬಳಕೆ, ವಿದ್ಯುತ್ ಓವರ್ಲೋಡ್ ಮುಂತಾದ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನು ತಡೆಯುವ ಉದ್ದೇಶದಿಂದ ಪಾಲಿಕೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಪಾಲಿಕೆ ನೀಡಿರುವ ಪ್ರಮುಖ ಸುರಕ್ಷತಾ ಮಾರ್ಗಸೂಚಿಗಳು ಹೀಗಿವೆ.
- ಅಧಿಕೃತ ಮತ್ತು ಸುರಕ್ಷಿತ ಎಲ್ಪಿಜಿ/ಅನಿಲ ಸಂಪರ್ಕಗಳ ಬಳಕೆ
- ಅಕ್ರಮ ಹಾಗೂ ಅಸುರಕ್ಷಿತ ಸಿಲಿಂಡರ್ಗಳಿಗೆ ಸಂಪೂರ್ಣ ನಿಷೇಧ
- ಅಗ್ನಿಶಾಮಕ ಉಪಕರಣಗಳು ಹಾಗೂ ಸರಿಯಾದ ಗಾಳಿಚಲನೆಯ ವ್ಯವಸ್ಥೆ ಕಡ್ಡಾಯ
- ವಿದ್ಯುತ್ ಓವರ್ಲೋಡ್ ತಪ್ಪಿಸಿ ಸುರಕ್ಷಿತ ಸಂಪರ್ಕ ವ್ಯವಸ್ಥೆ

ಪಾಲಿಕೆ ತಾಕೀತು
ಸುರಕ್ಷತಾ ದೃಷ್ಟಿಯಿಂದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಿಜಿ ಮಾಲೀಕರು ಹಾಗೂ ನಿರ್ವಾಹಕರಿಗೆ ಪಾಲಿಕೆ ತಾಕೀತು ಮಾಡಿದೆ. ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ನೋಡಿ : ಫ್ಲಾಫ್ಗಳ ಸರದಾರ ವಿಜಯ್ ದೇವರಕೊಂಡ, ಸಿನಿಮಾಕ್ಕೆ ಬ್ರೇಕ್ ಹಾಕಿದ ನಿರ್ಮಾಪಕ




