Kitchen Tips : ಈ ಬಾರಿ ಹಬ್ಬಕ್ಕೆ ನಿಮ್ಮ ಮನೆಯಲ್ಲೇ ಏನಾದರೂ ಸ್ಪೆಷಲ್ ಮಾಡ್ಬೇಕು ಅಂತ ಯೋಚಿಸುತ್ತಿದ್ದರೆ, ಸುಲಭವಾಗಿ ತಯಾರಿಸಬಹುದಾದ ಚಾಕೋಲೆಟ್ ವಾಲ್ನಟ್ ಬ್ರೌನಿ ಪರಫೆಕ್ಟ್ ಆಯ್ಕೆ. ಕಡಿಮೆ ಸಾಮಗ್ರಿಯಲ್ಲಿ, ಕಡಿಮೆ ಸಮಯದಲ್ಲಿ ತಯಾರಾಗುವ ಈ ಬ್ರೌನಿ ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ.

Kitchen Tips : ಹಾಗಾದ್ರೆ ನಾವು ಇಂದು ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಚಾಕೋಲೆಟ್ ವಾಲ್ನಟ್ ಬ್ರೌನಿಯನ್ನು ಯಾವ ರೀತಿ ತಯಾರಿಸುವುದು ಎಂದು ತಿಳಿಸಿಕೊಡುತ್ತಿದ್ದೇವೆ. ನೀವೂ ನಿಮ್ಮ ಮನೆಯಲ್ಲಿ ಈ ರೆಸಿಪಿಯನ್ನ ಟ್ರೈ ಮಾಡಿ. ಖಂಡಿತವಾಗಿ ಈ ಬ್ರೌನಿ ಎಲ್ಲರಿಗೂ ಇಷ್ಟವಾಗುತ್ತೆ.
ಬೇಕಾಗುವ ಸಾಮಗ್ರಿಗಳು
- ಬೆಣ್ಣೆ – 2 ಚಮಚ
- ಡಾರ್ಕ್ ಚಾಕೋಲೆಟ್ – 30 ಗ್ರಾಂ
- ಸಕ್ಕರೆ ಪುಡಿ – ರುಚಿಗೆ ತಕ್ಕಷ್ಟು
- ವೆನಿಲ್ಲಾ ಎಸೆನ್ಸ್ – ಕೆಲವು ಹನಿಗಳು
- ಮೈದಾ ಹಿಟ್ಟು – 35 ಗ್ರಾಂ
- ಹಾಲು – 2 ಚಮಚ
- ವಾಲ್ನಟ್ ತುಂಡುಗಳು – 5 ರಿಂದ 9
- ಬಟರ್ ಪೇಪರ್
- ಮೈಕ್ರೋವೇವ್ ಓವನ್
ಇದನ್ನೂ ಓದಿ: ದೇವಸ್ಥಾನದ ಹುಂಡಿ ಒಡೆದು ಕಳ್ಳತನ ಮಾಡಿ ಕಳ್ಳರು ಎಸ್ಕೇಪ್
ಚಾಕೋಲೆಟ್ ವಾಲ್ನಟ್ ಬ್ರೌನಿ ಮಾಡುವ ವಿಧಾನ
1 : ಮೊದಲು ಡಾರ್ಕ್ ಚಾಕೋಲೆಟ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಅದಕ್ಕೆ ಬೆಣ್ಣೆ ಸೇರಿಸಿ. ಬೆಣ್ಣೆ ಮತ್ತು ಚಾಕೋಲೆಟ್ ಸಂಪೂರ್ಣವಾಗಿ ಕರಗುವವರೆಗೆ ಮೈಕ್ರೋವೇವ್ನಲ್ಲಿ ಇಡಿ.
2 : ಈ ಕರಗಿದ ಚಾಕೋಲೆಟ್ ಮಿಶ್ರಣಕ್ಕೆ ಸಕ್ಕರೆ ಪುಡಿ, ಹಾಲು, ವೆನಿಲ್ಲಾ ಎಸೆನ್ಸ್, ಮೈದಾ ಹಿಟ್ಟು ಹಾಗೂ ವಾಲ್ನಟ್ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮೃದುವಾಗಿ ಕಲಸಿ.
3 : ಪಾತ್ರೆಯ ಗಾತ್ರಕ್ಕೆ ಅನುಗುಣವಾಗಿ ಬಟರ್ ಪೇಪರ್ ಕತ್ತರಿಸಿ. ಪಾತ್ರೆಯ ತಳಭಾಗ ಹಾಗೂ ಬದಿಗಳಿಗೆ ಬಟರ್ ಪೇಪರ್ ಅಂಟಿಸಿ.
4 : ಈಗ ತಯಾರಿಸಿದ ಬ್ರೌನಿ ಮಿಶ್ರಣವನ್ನು ಪಾತ್ರೆಯೊಳಗೆ ಸುರಿದು ಸಮವಾಗಿ ಹರಡಿಸಿ. ಮೇಲ್ಭಾಗದಲ್ಲಿ ಸ್ವಲ್ಪ ಹುರಿದ ವಾಲ್ನಟ್ ಹಾಗೂ ಚಾಕೋಲೆಟ್ ತುಂಡುಗಳಿಂದ ಅಲಂಕರಿಸಿ.
5 : ಮೈಕ್ರೋವೇವ್ನಲ್ಲಿ ಸುಮಾರು 15 ನಿಮಿಶ ಕಾಲ ಬೇಯಿಸಿ. ಬಳಿಕ ಚಾಕು ಅಥವಾ ಟೂತ್ಪಿಕ್ ಹಾಕಿ ಪರಿಶೀಲಿಸಿ. ಬೆಂದಿಲ್ಲದಿದ್ದರೆ ಇನ್ನೂ ಸ್ವಲ್ಪ ಸಮಯ ಬೇಯಿಸಿಕೊಳ್ಳಿ.
6 : ಬ್ರೌನಿ ಬೆಂದ ಬಳಿಕ ಪಾತ್ರೆಯಿಂದ ತೆಗೆದು ಪ್ಲೇಟ್ನಲ್ಲಿ ಇಟ್ಟು ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ.
ಸವಿಯಲು ಸಿದ್ಧ
ಈಗ ನಿಮ್ಮ ಸ್ಪೆಷಲ್ ಚಾಕೋಲೆಟ್ ವಾಲ್ನಟ್ ಬ್ರೌನಿ ಸವಿಯಲು ಸಿದ್ಧ. ಕುಟುಂಬದವರು ಹಾಗೂ ಮಕ್ಕಳಿಗೆ ಈ ರುಚಿಯಾದ ಡೆಸೆರ್ಟ್ ಖಂಡಿತ ಖುಷಿ ನೀಡುತ್ತದೆ.
ಟಿಪ್: ವನಿಲ್ಲಾ ಐಸ್ಕ್ರೀಮ್ ಜೊತೆಗೆ ಬ್ರೌನಿ ಸರ್ವ್ ಮಾಡಿದರೆ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.
MUST WATCH : ಖತರ್ನಾಕ್ ಕಳ್ಳರು SBI ಬ್ಯಾಂಕ್ ಗೆ ಕನ್ನ ಹಾಕಿದ್ರು-ಅದ್ಯಾಕೋ ಏನೂ ದೋಚದೆ ವಾಪಾಸ್ ಹೋದ್ರು..?




