Temple Theft : ಪ್ರಸಿದ್ಧ ಹೆಬ್ಬೂರು ಹೋಬಳಿಯ ಶ್ರೀ ತೋಪಿನ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಪ್ರಸಿದ್ಧ ಹೆಬ್ಬೂರು ಹೋಬಳಿಯ ಶ್ರೀ ತೋಪಿನ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ದೇವಸ್ಥಾನಕ್ಕೆ ನುಗ್ಗಿದ ಖದೀಮರು ಹುಂಡಿಯನ್ನು ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ.
ಕಾಸಿಗಾಗಿ ಕಳ್ಳರ ಕೈಚಳಕ
ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ತೋಪಿನ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಅಪಾರ ಭಕ್ತರು ಹರಿದು ಬಂದಿದ್ದರು. ಹಳೆಯ ದೇವಸ್ಥಾನವನ್ನು ಬದಲಿಸಿ, ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನೂತನ ದೇವಸ್ಥಾನವನ್ನು ಮಾಡಲಾಗಿತ್ತು. ಈ ದೇವಸ್ಥಾನದ ಹುಂಡಿಯ ಕಾಸಿಗಾಗಿ ಕಳ್ಳರು ಕೈಚಳಕ ತೋರಿದ್ದಾರೆ.
ದೇವಸ್ಥಾನದ ಬೀಗವನ್ನು ಮುರಿದು ಕಳ್ಳತನ
ಈ ದೇವಸ್ಥಾನದ ಹುಂಡಿ ಒಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಮೂರು ಬಾರಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ನಿನ್ನೆಯು ಸಹ ದೇವಸ್ಥಾನದ ಬೀಗವನ್ನು ಮುರಿದ ಕಳ್ಳರು, ಹುಂಡಿಯನ್ನು ಎಗರಿಸಿ, ದೇವಸ್ಥಾನದ ಹಿಂಭಾಗದಲ್ಲಿರುವ ರಾಗಿ ಹೊಲಕ್ಕೆ ತೆಗೆದುಕೊಂಡು ಹೋಗಿ ಹುಂಡಿಯನ್ನು ಒಡೆದಿದ್ದಾರೆ.
ಹುಂಡಿಯಲ್ಲಿದ್ದ ಸಾವಿರಾರು ರೂಪಾಯಿ ಹಣ ಕಳ್ಳರ ಪಾಲು
ಇನ್ನು ಕಾರ್ತಿಕ ಮಾಸ ಪ್ರಯುಕ್ತ ಅಪಾರ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ, ತಮ್ಮ ಇಷ್ಟಾರ್ಥ ಪೂರೈಸಲು ಕಾಣಿಕೆಯನ್ನು ಹಾಕಿದ್ದರು. ಸುಮಾರು ಮೂರು ತಿಂಗಳಿನಿಂದ ಹುಂಡಿಯನ್ನು ಒಡೆಯದೆ ಟ್ರಸ್ಟ್ ಹಾಗೇಯೇ ಬಿಟ್ಟಿತ್ತು.
ಬುಧವಾರ ಹುಂಡಿ ಒಡೆಯಲು ಸಕಲ ಸಿದ್ಧತೆಗಳನ್ನು ಟ್ರಸ್ಟ್ ಮಾಡಿತ್ತು. ಆದರೆ ಅಷ್ಟರಲ್ಲಿ ಕಳ್ಳರು ಕೈಚಳಕ ತೋರಿ ಹುಂಡಿ ಹೊಡೆದಿದ್ದಾರೆ. ಹುಂಡಿಯಲ್ಲಿದ್ದ ಸಾವಿರಾರು ರೂಪಾಯಿ ಹಣ ಕಳ್ಳರ ಪಾಲಾಗಿದೆ.
ಇದನ್ನು ಓದಿ : Gold Price Today : ಚಿನ್ನದ ದರದಲ್ಲಿ ಇಂದು ಮತ್ತೆ ಇಳಿಕೆ

ಕಳ್ಳರಿಗಾಗಿ ಬಲೆ ಬೀಸಿದ ಪೋಲೀಸರು
ಇನ್ನು ಈ ಹುಂಡಿಯನ್ನು ಒಡೆಯಲು ಕಳ್ಳರು ಕೊಡಲಿ, ಸುತ್ತಿಗೆ, ಕಬ್ಬಿಣದ ರಾಡನ್ನು ಬಳಸಿದ್ದಾರೆ. ಹುಂಡಿಯನ್ನು ಒಡೆದ ನಂತರ ಕಳ್ಳರು ಕಳ್ಳತನಕ್ಕೆ ಬಳಸಿದ್ದ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಇನ್ನು ವಿಷಯ ತಿಳಿದ ಹೆಬ್ಬೂರು ಪೊಲೀಸ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಮತ್ತು ತಂಡ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
ಹಣ ದೋಚಿ ಖದೀಮರು ಪರಾರಿ
ಒಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ತೋಪಿನ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಇಟ್ಟಿದ್ದ ಹುಂಡಿಯನ್ನು ಹೊಡೆದು ಹಣ ದೋಚಿ ಖದೀಮರು ಪರಾರಿಯಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಪೊಲೀಸ್ ಇಲಾಖೆ ತನಿಖೆ ನಡೆಸಿ, ಕಳ್ಳರ ಯಡೆಮುರಿ ಕಟ್ಟಬೇಕಿದೆ.

ಇದನ್ನು ನೋಡಿ : ಇಂದು ಬೆಳಗ್ಗೆ ಅಮಲಾಪುರದ ಭೈರವ ಕ್ರಷರ್ ಗೆ ಉಪ ಲೋಕಾಯುಕ್ತರ ಭೇಟಿ




