Vijayanagara ದಲ್ಲಿ ಪತ್ನಿಯನ್ನು ಪತಿಯೇ ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದೆ.

ಸಂಸಾರಿಕ ಕಲಹದಿಂದಾಗಿ ಪತಿ, ಪತ್ನಿಯನ್ನು ಮಾರಕಾಸ್ತ್ರದಿಂದ ಹತ್ಯೆ ಮಾಡಿರುವ ಘಟನೆ Vijayanagara ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಕ್ಯಾಂಪ್ ಬಳಿ ನಡೆದಿದೆ.
ಕೌಟುಂಬಿಕ ಕಲಹ
ಕೊಲೆಯಾದ ಮಹಿಳೆಯನ್ನು ಜಾನ್ಸಿ (36) ಎಂದು ಗುರುತಿಸಲಾಗಿದ್ದು, ಈ ಕೃತ್ಯದ ಆರೋಪಿಯಾಗಿರುವ ಪತಿ ಸೆಲ್ವಕುಮಾರ್ ಘಟನೆ ಬಳಿಕ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದಂಪತಿಯ ನಡುವೆ ಆಗಾಗ್ಗೆ ಸಂಸಾರಿಕ ಕಲಹ ನಡೆಯುತ್ತಿದ್ದು, ಅದೇ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇದನ್ನು ಓದಿ : ಭರ್ಜರಿ ಸೆಂಚುರಿ ಸಿಡಿಸಿದ ದೇವದತ್ ಪಡಿಕ್ಕಲ್
ಪೊಲೀಸರು ಭೇಟಿ, ಪರಿಶೀಲನೆ
ಇನ್ನು ಘಟನೆಯ ಮಾಹಿತಿ ತಿಳಿದ ಕೂಡಲೇ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್. ಹಾಗೂ ಡಿವೈಎಸ್ಪಿ ಡಾ. ಮಂಜುನಾಥ್ ತಳವಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಪ್ರಕರಣ ದಾಖಲು
ಘಟನೆ ಸಂಬಂಧ ಕಮಲಾಪುರ ಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನು ನೋಡಿ : APMC ಬಳಿ ಅನಾಮಿಕ ಶ* ಪತ್ತೆ – ಶ* ಕಂಡು ಬೆಚ್ಚಿ ಬಿದ್ದ ಸ್ಥಳೀಯರು




