ರಣವೀರ್ ಸಿಂಗ್ ನಟನೆಯ Dhurandhar ಸಿನಿಮಾಗೆ ಪ್ರತಿ ದಿನವೂ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ.

ಹೆಚ್ಚೇನೂ ಹೈಪ್ ಇಲ್ಲದೇ ಬಿಡುಗಡೆ ಆದ ‘ಧುರಂಧರ್’ ಸಿನಿಮಾ ಈ ಪರಿ ಕಲೆಕ್ಷನ್ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ನೋಡನೋಡುತ್ತಿದ್ದಂತೆಯೇ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 2025ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.
ನಟ ರಣವೀರ್ ಸಿಂಗ್ ಅವರಿಗೆ ಈ ಸಿನಿಮಾ ಬಹುದೊಡ್ಡ ಗೆಲುವನ್ನು ತಂದುಕೊಟ್ಟಿದ್ದು, ನಿರ್ದೇಶಕ ಆದಿತ್ಯ ಧಾರ್ ಅವರ ಬೇಡಿಕೆಯೂ ಹೆಚ್ಚಾಗಿದೆ. ಬಿಡುಗಡೆಯಾಗಿ 27 ದಿನಗಳು ಕಳೆದಿದ್ದರೂ Dhurandhar ಸಿನಿಮಾದ ಕಲೆಕ್ಷನ್ ಇನ್ನೂ ನಿಲ್ಲದೇ ಮುಂದುವರಿದಿದೆ.
ದೇಶಭಕ್ತಿ ಕಥೆಗೆ ಭರ್ಜರಿ ಬೆಂಬಲ
ದೇಶಭಕ್ತಿ ಹಿನ್ನೆಲೆಯ ಕಥಾಹಂದರ ಹೊಂದಿರುವ ‘ಧುರಂಧರ್’ ಸಿನಿಮಾ, ಪಾಕಿಸ್ತಾನದಲ್ಲಿ ನಡೆಯುವ ಭಯೋತ್ಪಾದಕ ಘಟನೆಗಳನ್ನು ಆಧರಿಸಿ ನಿರ್ಮಾಣಗೊಂಡಿದೆ.
ಈ ಕಥಾವಸ್ತುವಿಗೆ ಪ್ರೇಕ್ಷಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ರಜೆ ದಿನಗಳಲ್ಲಷ್ಟೇ ಅಲ್ಲದೇ ವಾರದ ದಿನಗಳಲ್ಲೂ ಚಿತ್ರಮಂದಿರಗಳಲ್ಲಿ House Full ಪ್ರದರ್ಶನ ಕಾಣುತ್ತಿದೆ.
ಇದನ್ನು ಓದಿ : ಹೊಸ ವರ್ಷಾಚರಣೆ ಬಿಗಿ – ರಾಜಧಾನಿಯ ಈ ರಸ್ತೆಗಳಲ್ಲಿ ಸಂಚಾರ ಬಂದ್

712 ಕೋಟಿ ಭಾರತದಲ್ಲಿ, 1000 ಕೋಟಿ ಜಾಗತಿಕ ಕಲೆಕ್ಷನ್
ಭಾರತೀಯ ಮಾರುಕಟ್ಟೆಯಲ್ಲಿ ‘ಧುರಂಧರ್’ ಸಿನಿಮಾ ಈಗಾಗಲೇ 712 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಪ್ರತಿದಿನವೂ ಬಹುಕೋಟಿ ಆದಾಯ ಗಳಿಸುತ್ತಿದೆ.
ಇದೇ ವೇಗ ಮುಂದುವರಿದರೆ ಕೆಲವೇ ದಿನಗಳಲ್ಲಿ 800 ಕೋಟಿ ರೂಪಾಯಿ ಗಡಿ ದಾಟುವ ನಿರೀಕ್ಷೆ ಇದೆ. ವಿದೇಶಿ ಮಾರುಕಟ್ಟೆಯ ಕಲೆಕ್ಷನ್ ಸೇರಿಸಿದರೆ ಈ ಸಿನಿಮಾ ಈಗಾಗಲೇ 1000 ಕೋಟಿ ರೂಪಾಯಿ ಕ್ಲಬ್ ಸೇರಿದೆ.
ಇತರ ಸಿನಿಮಾಗಳ ಸ್ಪರ್ಧೆಯೂ ಸೋಲು
‘ಧುರಂಧರ್’ ಬಿಡುಗಡೆ ಬಳಿಕ ‘ದಿ ಡೆವಿಲ್’, ‘ಅಖಂಡ 2’, ‘ಮಾರ್ಕ್’, ‘45’, ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’, ‘ಅವತಾರ್ 3’, ‘ಅನಾಕೊಂಡ’ ಸೇರಿದಂತೆ ಹಲವು ದೊಡ್ಡ ಸಿನಿಮಾಗಳು ಬಿಡುಗಡೆಯಾದರೂ, ಯಾವ ಚಿತ್ರವೂ ‘ಧುರಂಧರ್’ ಹಾವಳಿ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಎಲ್ಲಾ ರಾಜ್ಯಗಳಲ್ಲೂ ಈ ಸಿನಿಮಾ Super Sucess ಸಾಧಿಸಿದೆ.

ನಟರ ಅಭಿನಯಕ್ಕೆ ಭಾರಿ ಮೆಚ್ಚುಗೆ
ಇನ್ನು ಈ ಚಿತ್ರದಲ್ಲಿನ ಎಲ್ಲಾ ಕಲಾವಿದರಿಗೂ ಜನಪ್ರಿಯತೆ ಹೆಚ್ಚಾಗಿದೆ. ವಿಶೇಷವಾಗಿ ಅಕ್ಷಯ್ ಖನ್ನಾ ಅವರು ರೆಹಮಾನ್ ಡಕಾಯಿತ್ ಎಂಬ ವಿಲನ್ ಪಾತ್ರದಲ್ಲಿ ನಟಿಸಿ ಸೆನ್ಸೇಷನ್ ಸೃಷ್ಟಿಸಿದ್ದಾರೆ.
ಅರ್ಜುನ್ ರಾಮ್ಪಾಲ್, ಸಂಜಯ್ ದತ್ ಹಾಗೂ ಬಾಲನಟಿ ಸಾರಾ ಅರ್ಜುನ್ ಅವರ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದ ಮೂಲಕ ರಣವೀರ್ ಸಿಂಗ್ ಅವರ Fan Following ಮತ್ತಷ್ಟು ವೃದ್ಧಿಯಾಗಿದೆ.
ಒಟ್ಟಿನಲ್ಲಿ, ಯಾವುದೇ ಅತಿಯಾದ ಹೈಪ್ ಇಲ್ಲದೇ ಬಿಡುಗಡೆಯಾದ ‘ಧುರಂಧರ್’ ಸಿನಿಮಾ 2025ರ ಅತಿ ದೊಡ್ಡ ಸಿನಿಮಾ ಯಶಸ್ಸಾಗಿ ದಾಖಲಾಗುತ್ತಿದೆ.

ಇದನ್ನು ನೋಡಿ : GUBBI ACCEDENT | ಬೈಕ್ಗೆ ಗುದ್ದಿದ KSRTC ಬಸ್- ಯುವತಿ ಬಚಾವ್ ಆಗಿದ್ದೇ ರೋಚಕ




