New Year ಹಿಂದಿನ ದಿನದಿಂದಲೇ ಭದ್ರತಾ ದೃಷ್ಟಿಯಿಂದ ನಗರದ ಒಳಭಾಗದ ಕೆಲ ರಸ್ತೆಗಳನ್ನು ಬಂದ್ ಮಾಡಲಾಗಿದೆ.

ಹೊಸ ವರ್ಷದ ಸ್ವಾಗತಕ್ಕೆ ಬೆಂಗಳೂರಿಗರು ಸಜ್ಜಾಗುತ್ತಿದ್ದು,ಇಂದು ರಾತ್ರಿ ಬೆಂಗಳೂರು ನಗರದಾದ್ಯಂತ ಸಂಭ್ರಮ ಮುಗಿಲು ಮುಟ್ಟುವ ನಿರೀಕ್ಷೆಯಿದೆ. ಯುವಜನರು ಪಬ್, ರೆಸ್ಟೋರೆಂಟ್ಗಳು, ಖಾಸಗಿ ಅಪಾರ್ಟ್ಮೆಂಟ್ಗಳಲ್ಲಿ ಪಾರ್ಟಿಗಳಿಗೆ ಜಮಾಯಿಸಲಿದ್ದು, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ.
ಮುನ್ನೆಚ್ಚರಿಕೆ ಕ್ರಮ
ಇನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ನಗರದ ಪ್ರಮುಖ ಭಾಗಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ರಾತ್ರಿ 10ರಿಂದ ಸಂಚಾರ ಬಂದ್
ಭದ್ರತಾ ದೃಷ್ಟಿಯಿಂದ New Year ಹಿಂದಿನ ದಿನದಿಂದಲೇ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ. ರಾತ್ರಿ 10ರಿಂದ ಮುಂಜಾನೆ 3 ಗಂಟೆವರೆಗೆ ಕೆಳಗಿನ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
- ಎಂಜಿ ರಸ್ತೆ
- ಬ್ರಿಗೇಡ್ ರಸ್ತೆ
- ಚರ್ಚ್ ಸ್ಟ್ರೀಟ್
- ರೆಸಿಡೆನ್ಸಿ ರಸ್ತೆ
- ಸೇಂಟ್ ಮಾರ್ಕ್ಸ್ ರಸ್ತೆ
- ಮ್ಯೂಸಿಯಂ ರಸ್ತೆ
ಇದನ್ನು ಓದಿ : Dina Bhavishya|ದಿನ ಭವಿಷ್ಯ 31 ಡಿಸೆಂಬರ್ 2025
ಸಂಜೆ 4ರಿಂದ ಪಾರ್ಕಿಂಗ್ ನಿಷೇಧ
ಸಂಜೆ 4 ಗಂಟೆಯಿಂದ ಬೆಳಗ್ಗೆ 3 ಗಂಟೆವರೆಗೆ ಮೇಲ್ಕಂಡ ರಸ್ತೆಗಳಲ್ಲೂ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.
ನಗರದ ಬಹುತೇಕ ಮಾಲ್ಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಕ್ಯಾಬ್ ಪಿಕ್ಅಪ್ ಹಾಗೂ ಡ್ರಾಪ್ ಪಾಯಿಂಟ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪೊಲೀಸರು ಗುರುತಿಸಿರುವ ಸ್ಥಳಗಳನ್ನೇ ಬಳಸುವಂತೆ ಸಂಚಾರಿ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

50 ಫ್ಲೈಓವರ್ಗಳು ಬಂದ್
ನಗರದ 50 ಪ್ರಮುಖ ಫ್ಲೈಓವರ್ಗಳನ್ನು ಡಿ.31ರ ರಾತ್ರಿ 11 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ಬಂದ್ ಮಾಡಲಾಗುತ್ತದೆ. ಏರ್ಪೋರ್ಟ್ ಫ್ಲೈಓವರ್ಗಳಲ್ಲಿ ಈ ಅವಧಿಯಲ್ಲಿ ಕಾರ್ಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ದ್ವಿಚಕ್ರ ವಾಹನ ಹಾಗೂ ಇತರೆ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಕುಡಿದು ವಾಹನ ಚಾಲನೆಗೆ ಕಡಿವಾಣ
ಇನ್ನು ಹೊಸ ವರ್ಷದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ನಿನ್ನೆ ರಾತ್ರಿ ನಗರದಾದ್ಯಂತ 166 ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆದಿದೆ.
ಒಟ್ಟು 3,000ಕ್ಕೂ ಹೆಚ್ಚು ವಾಹನಗಳನ್ನು ಪರಿಶೀಲಿಸಲಾಗಿದ್ದು, ಈ ಪೈಕಿ ಕುಡಿದು ವಾಹನ ಚಾಲನೆ ಮಾಡಿದ 450 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನು ನೋಡಿ : ಫೆಬ್ರವರಿ 1ರಂದು ಬಜೆಟ್ ಮಂಡನೆಯಾಗುವುದೇ?




