Mantaralaya: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ನೆರವೇರಿದೆ. ಕಳೆದ 20 ದಿನದಲ್ಲಿ ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.

Mantaralaya: ಆಂಧ್ರಪ್ರದೇಶದ ಮಂತ್ರಾಲಯದಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ 20 ದಿನಗಳ ಅವಧಿಯಲ್ಲಿ ಭಕ್ತರಿಂದ ಒಟ್ಟು ₹3,73,66,587 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ
ಡಿಸೆಂಬರ್ ತಿಂಗಳಲ್ಲಿ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಭಕ್ತಿಭಾವದಿಂದ ಕೋಟ್ಯಂತರ ರೂಪಾಯಿ ಕಾಣಿಕೆಯನ್ನು ಸಮರ್ಪಿಸಿದ್ದಾರೆ. ಸಂಗ್ರಹವಾದ ಕಾಣಿಕೆಯಲ್ಲಿ ₹3,62,69,247 ರೂಪಾಯಿ ಕರೆನ್ಸಿ ನೋಟುಗಳು ಹಾಗೂ ₹10,97,340 ರೂಪಾಯಿ ನಾಣ್ಯಗಳ ರೂಪದಲ್ಲಿ ಲಭಿಸಿದೆ.
ಇದನ್ನೂ ಓದಿ : ಮಂತ್ರಾಲಯ ಹುಂಡಿ ಎಣಿಕೆ – 34 ದಿನದಲ್ಲಿ 5.41 ಕೋಟಿ ಕಾಣಿಕೆ ಸಂಗ್ರಹ

ಡಿಸೆಂಬರ್ ತಿಂಗಳಲ್ಲಿ ಮಠಕ್ಕೆ ಲಕ್ಷಾಂತರ ಭಕ್ತರ ಭೇಟಿ,
ಇದಲ್ಲದೆ ಭಕ್ತರು 87 ಗ್ರಾಂ ಚಿನ್ನ ಮತ್ತು 910 ಗ್ರಾಂ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು ಹಾಗೂ ಕರಸೇವಕರು ಭಾಗವಹಿಸಿ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸಿದರು. ಭಕ್ತರ ಅಪಾರ ನಂಬಿಕೆ ಹಾಗೂ ಭಕ್ತಿಭಾವದಿಂದ ಮಠಕ್ಕೆ ಹೆಚ್ಚಿನ ಕಾಣಿಕೆ ಲಭಿಸಿರುವುದು ಮಠದ ಆಡಳಿತ ವರ್ಗದವರ ಗಮನ ಸೆಳೆದಿದೆ.
MUST WATCH: ವಿದ್ಯಾರ್ಥಿಗಳ ಮೇಲೆ ಯುವಕರಿಂದ ಹಲ್ಲೆ ಓಡಾಡಲು ಭಯಪಡುತ್ತಿರೋ ಸ್ಟೂಡೆಂಟ್ಸ್




