Mantralaya Hundi Counting : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, ಕಳೆದ 34 ದಿನದಲ್ಲಿ ದಾಖಲೆಯ 5.41 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ 34 ದಿನಗಳಿಂದ ನಡೆಯುತ್ತಿದ್ದ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಭಕ್ತರಿಂದ ಒಟ್ಟು ₹5.41 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ಕಾರ್ತಿಕ ಮಾಸದ ಹಿನ್ನೆಲೆ ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಿ ಕಾಣಿಕೆ ಸಲ್ಲಿಸಿದ ಪರಿಣಾಮ ಈ ಬಾರಿ ಸಂಗ್ರಹ ದಾಖಲೆ ಮಟ್ಟದಲ್ಲಿದೆ.
ಇದನ್ನು ಓದಿ : ದಿನ ಭವಿಷ್ಯ 19 ನವೆಂಬರ್ 2025: ಕಾರ್ತಿಕ ಅಮಾವಾಸ್ಯೆಯಲ್ಲಿ ಯಾವ ರಾಶಿಗೆ ಲಕ್ಷ್ಮಿ ಕೃಪೆ?
ಕಾಣಿಕೆ ವಿವರ
- ಕರೆನ್ಸಿ ನೋಟುಗಳು: ₹5,26,89,128
- ನಾಣ್ಯಗಳು: ₹14,58,100
- ಚಿನ್ನ: 80 ಗ್ರಾಂ
- ಬೆಳ್ಳಿ: 1,610 ಗ್ರಾಂ
ನೂರಾರು ಮಂದಿಯಿಂದ ಹುಂಡಿ ಎಣಿಕೆ
ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು ಹಾಗೂ ಕರ ಸೇವಕರು ಭಾಗವಹಿಸಿ ಸತತವಾಗಿ ಕಾರ್ಯನಿರ್ವಹಿಸಿದರು.
ಮಠದ ಶ್ರೀ ರಾಘವೇಂದ್ರ ಸ್ವಾಮಿಗಳ ಬಗ್ಗೆ ಭಕ್ತರ ದಿಟ್ಟ ನಂಬಿಕೆಯೇ ಇಂತಹ ಭಾರೀ ಕಾಣಿಕೆಯಾಗಿ ಪರಿಣಮಿಸಿದೆ ಎಂದು ಮಠದ ವಕ್ತಾರರು ತಿಳಿಸಿದ್ದಾರೆ.
ಇದನ್ನು ನೋಡಿ : ಪೊಲೀಸ್ ವಾರ್ಷಿಕ ಕ್ರೀಡಾಕೂಟ ಆಟ ಆಡಿ ಪೊಲೀಸರು, ಪ್ರೆಸ್ ರಿಲಾಕ್ಸ್




