Rashmik Mandanna ಮದುವೆಗೆ ಮುಹೂರ್ತ ನಿಗದಿ.. ರಾಜಸ್ಥಾನ ಪ್ಯಾಲೇಸ್ನಲ್ಲಿ ಮದುವೆ!

ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡರ ಮದುವೆ 2026 ಫೆಬ್ರವರಿ 26 ರಂದು ನಡೆಯಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ನಿಶ್ಚಿತಾರ್ಥ ಕಾರ್ಯಕ್ರಮದಂತೆ ವಿವಾಹ ಸಮಾರಂಭ ಕೂಡ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲೇ ನೆರವೇರಲಿದೆ.

ವರದಿಗಳ ಪ್ರಕಾರ, ವಿವಾಹ ಕಾರ್ಯಕ್ರಮವು ರಾಜಸ್ಥಾನದ ಉದಯ್ಪುರ ಪ್ಯಾಲೇಸ್ನಲ್ಲಿ ನಡೆಯಲಿದೆ. ಮದುವೆಯ ಬಳಿಕ ಜೋಡಿಯ ಆರತಕ್ಷತೆ ಕಾರ್ಯಕ್ರಮವನ್ನು ಹೈದರಾಬಾದ್ನಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರಿಗೆ ಆಹ್ವಾನ ನೀಡಲಿದ್ದಾರೆ.
ಇದನ್ನು ಓದಿ : ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

Rashmik Mandanna-Vijay Deverkonda ಜೋಡಿ 2025 ಅಕ್ಟೋಬರ್ 3 ರಂದು ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು, ಆದರೆ ಅವರ ಎಂಗೇಜ್ಮೆಂಟ್ ವಿಚಾರವನ್ನು ಇನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಇತ್ತೀಚೆಗೆ ಹಾಲಿವುಡ್ ವರದಿಗಾರನೊಬ್ಬ ರಶ್ಮಿಕಾ ಅವರನ್ನು ಸಂದರ್ಶನ ಮಾಡಿದಾಗ, ಮದುವೆಯ ವಿಷಯದಲ್ಲಿ “ನಾನು ಮದುವೆಯನ್ನು ದೃಢಪಡಿಸಲು ಅಥವಾ ನಿರಾಕರಿಸಲು ತಕ್ಷಣ ಹೇಳುವುದಿಲ್ಲ. ನಾವು ಯಾವಾಗ ಹೇಳಬೇಕು ಅಂತ ಹೇಳುತ್ತೇವೆ” ಎಂದು ತಿಳಿಸಿದ್ದಾರೆ.

ಇದನ್ನು ನೋಡಿ : ಬೆಂಗಳೂರು, ಮೈಸೂರಲ್ಲಿ ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡ್ತಾರೆ ಸುದೀಪ್

