Sira ಬಸ್ ನಿಲ್ದಾಣದಲ್ಲಿ ರಸ್ತೆಯಲ್ಲೇ ಭೂಪನೊಬ್ಬ ಮಲಗಿ ಅವಾಂತರ ಸೃಷ್ಟಿಸಿದ್ದಾನೆ.

Sira ಖಾಸಗಿ ಬಸ್ ನಿಲ್ದಾಣದಲ್ಲಿ ರಸ್ತೆಯಲ್ಲೇ ಭೂಪನೊಬ್ಬ ಮಲಗಿ ಅವಾಂತರ ಸೃಷ್ಟಿಸಿದ್ದಾನೆ. ಬಸ್ ನಿಲ್ದಾಣ ಅಂದ್ರೆ ಜನಜಂಗುಳಿ ಹೆಚ್ಚಾಗಿಯೇ ಇರುತ್ತೆ, ಅಲ್ದೇ ಬಸ್ಗಳು ಕೂಡ ಬಂದು ಹೋಗ್ತಾ ಇರ್ತಾವೆ. ಅಷ್ಟು ಜನಜಂಗುಳಿ ಮಧ್ಯೆ ಕುಡಕನೋರ್ವ ಮಟ ಮಟ ಮಧ್ಯಾಹ್ನವೇ ರಸ್ತೆಯಲ್ಲೇ ಮಲಗಿ ಅವಾಂತರ ಸೃಷ್ಟಿಸಿದ್ದಾನೆ.
ಇದನ್ನು ಓದಿ : ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ನಿಧನ
ಕೆಲ ಕಾಲ ಅಡಚಣೆ
ಬಿಳಿ ಶರ್ಟ್ ಹಾಗೂ ಲುಂಗಿ ಧರಿಸಿಕೊಂಡಿದ್ದ ವ್ಯಕ್ತಿ ಬಸ್ಸು ನಿಲ್ದಾಣದ ರಸ್ತೆಯಲ್ಲಿ ಉತ್ತರ ದಿಕ್ಕಿ ತಲೆ ಇಟ್ಟು ಮಲಗಿದ್ದನು. ಕುಡುಕನ ಅವಾಂತರಕ್ಕೆ ವಾಹನ ಸಂಚಾರಕ್ಕೂ ಕೆಲ ಕಾಲ ಅಡಚಣೆಯಾಗಿತ್ತು.
ಮೊಬೈಲ್ನಲ್ಲಿ ಸೆರೆ
ಇದನ್ನ ಗಮನಿಸಿದ ಸ್ಥಳೀಯರು ಕುಡುಕನನ್ನು ಪುಟ್ ಪಾತ್ ಗೆ ಕರೆತಂದು ಹೊತ್ತು ಮಲಗಿಸಿದರು. ಕುಡಕನ ಅವಾಂತರದ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದ್ದಾರೆ.
ಇದನ್ನು ನೋಡಿ : ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್




