ಕಾಂಗ್ರೆಸ್ ಸರ್ಕಾರದ ವಿರುದ್ಧ Vijayendra ವಾಗ್ದಾಳಿ.

ತುಮಕೂರಿನ ನಗರದ ಜಯನಗರದ 31 ನೇ ವಾರ್ಡಿನ BJP ಸಮಿತಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಿ, ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದ್ರು.
ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ
ಈ ವೇಳೆ ಮಾತನಾಡಿದ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ, ಕುರ್ಚಿ ಕಿತ್ತಾಟದಲ್ಲಿ ನಿರತರಾಗಿರುವ ಕಾಂಗ್ರೆಸ್ ನಾಯಕರು, ಸರ್ಕಾರದ ಹುಳುಗಳು, ಆಡಳಿತ ಲೋಪ ಮುಚ್ಚಿಕೊಳ್ಳಲು, ಸರ್ಕಾರದ ವಿರುದ್ಧ ಯಾರೂ ಧ್ವನಿ ಮಾಡಬಾರದು ಎಂದು ಅಂತಹ ಧ್ವನಿ ಅಡಗಿಸಲು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಪ್ರತಿಬಂಧಕ ವಿಧೇಯಕವನ್ನು ಸರ್ಕಾರ ಅನುಷ್ಠಾನಕ್ಕೆ ತರಲು ಹೊರಟಿದೆ.
ಹಿಂದೆ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು, ಅದೇ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ರೀತಿಯ ಕರಾಳದಿನಕ್ಕೆ ರಾಜ್ಯವನ್ನು ದೂಡುತ್ತಿದೆ ಎಂದು ಟೀಕಿಸಿದರು.
ಇದನ್ನು ಓದಿ : 14,000 ರೂ ಗಡಿ ದಾಟಿದ ಚಿನ್ನದ ಬೆಲೆ

ಹೊಳಲು ಬೆಳಕಿನ ಪಂದ್ಯಾವಳಿ ಉದ್ಘಾಟನೆ
ನಂತರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜ್ಯಮಟ್ಟದ ಹೊಳಲು ಬೆಳಕಿನ ಪಂದ್ಯಾವಳಿಯನ್ನು Vijayendra ಉದ್ಘಾಟಿಸಿದರು , ಕೈಯಲ್ಲಿ ಬ್ಯಾಟ್ ಹಿಡಿದು, ಕ್ರಿಕೆಟ್ ಆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.
ಒಟ್ಟಾರೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ವಿಜಯೇಂದ್ರ ಗೆ ಸ್ಥಳೀಯ ಶಾಸಕರು , ಯುವ ಮೋರ್ಚಾ ಕಾರ್ಯಕರ್ತರು, ಸ್ಥಳೀಯ ಮುಖಂಡರು ಸಾಥ್ ನೀಡಿದ್ರು.

ಇದನ್ನು ನೋಡಿ : CHITRADURGA BUS – LORRY ACCIDENT – ಮೃತಪಟ್ಟವರ ರೋಚಕ ಕಹಾನಿ




