ಶಿರಾ-ಅಮರಾಪುರ ರಸ್ತೆಯಲ್ಲಿ ಡೆಡ್ಲಿ Accident.

ಶಿರಾ ತಾಲೂಕಿನ ಶಿರಾ ಅಮರಾಪುರ ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಪಲ್ಟಿಯಾಗಿ ತಡರಾತ್ರಿ ಭೀಕರ ರಸ್ತೆ Accident ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕಿನ ಮುದ್ದರಂಗನಹಳ್ಳಿ ಸಮೀಪದ ಅರಣ್ಯ ಪ್ರದೇಶದ ಬಳಿ ನಡೆದಿದೆ.

ಮುದ್ದರಂಗನಹಳ್ಳಿ ಗೇಟ್ ಸಮೀಪದಲ್ಲಿ ಘಟನೆ
ಶಿರಾ ತಾಲೂಕಿನ ಮುದ್ದರಂಗನಹಳ್ಳಿ ಗೇಟ್ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಮೊದಲು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಪಕ್ಕದಲ್ಲಿದ್ದ ಹಳ್ಳಕ್ಕೆ ಬಿದ್ದಿದೆ. ಡಿಕ್ಕಿಯ ರಭಸಕ್ಕೆ ಕಾರಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ನೋಡ ನೋಡತ್ತಿದ್ದಂತೆಯೇ ಇಡೀ ಕಾರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ಭಸ್ಮವಾಗಿದೆ. ಪರಿಣಾಮ ಕಾರಿನ ಎರಡನೇ ಸೀಟ್ ನಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ದೇಹ ಪತ್ತೆಯಾಗಿದ್ದು, ಮೃತರು ದಾವಣಗೆರೆ ಜಿಲ್ಲೆ ಮೂಲದವರು ಎನ್ನಲಾಗಿದೆ.
ಇದನ್ನು ಓದಿ : ‘ಡೆವಿಲ್’ಗೆ ಅಸಲಿ ಚಾಲೆಂಜ್ ಈಗ ಶುರು; ಬಜೆಟ್ ಎಷ್ಟು? ಗಳಿಕೆ ಎಷ್ಟು?

ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ
ಸದ್ಯ ಪಟ್ಟನಾಯಕನಹಳ್ಳಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಅಪಘಾತಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಾಗಳಿಂದಲೂ ತನಿಖೆ ಮುಂದುವರೆಸಿದ್ದು, ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಇದನ್ನು ನೋಡಿ : ಅಧಿಕಾರಿಗಳಿಗೆ PRADEEP ESHWAR ಖಡಕ್ ಸೂಚನೆ ರೈತರಿಗೆ ಅನುಕೂಲ ಮಾಡಿ ಕೊಡಲು ಸಲಹೆ




