ನಿಮ್ಮ ಜೊತೆ ಮಾತನಾಡಲು ಅವಕಾಶ ಕೊಡಿ ಎಂದು ರಾಹುಲ್ ಗಾಂಧಿಗೆ ಲೆಟರ್ ಬರೆದ Rajanna.

ಸಹಕಾರ ಸಚಿವರಾಗಿ ಕಾರ್ಯನಿರ್ಹಿಸುತ್ತಿದ್ದ ಕೆ.ಎನ್.ರಾಜಣ್ಣ ಹೈಕಮಾಂಡ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಸಚಿವ ರಾಜಣ್ಣರನ್ನು ಸಚಿವ ಸಂಪುಟದಿಂದ ಹೊರಹಾಕಲಾಗಿತ್ತು. ಹೈಕಮಾಂಡ್ ಆದೇಶ ಹೊರಡಿಸಿದ ಬೆನ್ನಲ್ಲೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಗಿತ್ತು.
ರಾಹುಲ್ ಗಾಂಧಿಗೆ ರಾಜಣ್ಣ ಪತ್ರ
ರಾಜಣ್ಣರ ವಜಾ ಖಂಡಿಸಿ ರಾಜ್ಯದೆಲ್ಲೆಡೆ ಸಮುದಾಯದ ಮುಖಂಡು, ಅಭಿಮಾನಿಗಳು ಆಕ್ರೋಶ ಹೊರಹಾಕಿ, ಪ್ರತಿಭಟನೆ ಯನ್ನು ನಡೆಸಿದ್ರು. ಇಷ್ಟೆಲ್ಲ ಬೆಳವಣಿಗೆಗಳಾದ ಮೇಲೆ ಇದೀಗ Rajanna ಮತ್ತೆ ಸಚಿವ ಸಂಪುಟ ಸೇರ್ತಾರ ಅನ್ನೋ ವಿಚಾರಕ್ಕೆ Twist ಸಿಕ್ಕಿದ್ದು, ಸ್ವತಃ ರಾಜಣ್ಣ ಅವ್ರೆ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನು ನೋಡಿ : ತಂದೆಯಿಂದಲೇ ಮಗಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಹಂತಕ ಪ್ಲಾನ್ ಏನಿತ್ತು?
ಚರ್ಚೆಗೆ ಗ್ರಾಸ
ಕಳೆದ ತಿಂಗಳ 17 ನೇ ತಾರೀಕಿನಂದು ಹೈಕಮಾಂಡ್ ನಾಯಕ ರಾಹುಲ್ ಗಾಂಧಿಗೆ ಪತ್ರವನ್ನು ಬರೆದಿದ್ದು, ಇದೀಗ ಎಲ್ಲೆಡೆ ಈ ವಿಚಾರವಾಗಿ Viral ಅಗುತ್ತಿದ್ದು, ಚರ್ಚೆಗೆ ಗ್ರಾಸವಾಗುತ್ತಿದೆ. ಇನ್ನು ಪತ್ರದಲ್ಲಿ ಅವರು ಬರೆದಿರುವಂತೆ. ನನ್ನ ಹೇಳಿಕೆಯ ಸ್ಪಷ್ಟೀಕರಣ ಕುರಿತು ಈ ಪತ್ರವನ್ನು ಬರೆದಿದ್ದೇನೆ. ಮಾಧ್ಯಮದವರ ಪ್ರಶ್ನೆ ಹಾಗು ನನ್ನ ಉತ್ತರ ಎರಡನ್ನು ಉಲ್ಲೇಖಿಸಿದ್ದೇನೆ. ನನ್ನ ಹೇಳಿಕೆಯ ಹಿಂದಿರುವ ಸತ್ಯ ಹಾಗೂ ಅದನ್ನು ತಿರುಚಿದ ಬಗ್ಗೆ ನಿಮ್ಮ ಮುಂದಿಟ್ಟಿದೇನೆ. ಹೇಳಿಕೆಯನ್ನು ತಪ್ಪಾಗಿ ನಿಮ್ಮ ಮುಂದೆ ತಂದವರ ಮೇಲೆ ಕ್ರಮ ಕೈಗೊಳ್ಳಿ.
ನಿಮ್ಮ ಜೊತೆ ನೇರವಾಗಿಯೇ ಮಾತನಾಡಬೇಕು
ಈ ಬಗ್ಗೆ ನಾನು ದೆಹಲಿಗೆ ಬಂದು ನಿಮ್ಮ ಜೊತೆ ನೇರವಾಗಿಯೇ ಮಾತನಾಡಬೇಕು. ನನಗೆ ಅವಕಾಶ ಮಾಡಿಕೊಡಿ. ಪತ್ರದಲ್ಲಿ ಕೆಪಿಸಿಸಿ ನೇಮಿಸಿದ ಬಿಎಲ್ಎಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿಲ್ಲ. ನಮ್ಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಲೋಪಗಳ ಬಗ್ಗೆ ಸರಿಯಾಗಿ ಗಮನ ಹರಿಸಿದ್ದರೆ, ಅವುಗಳನ್ನು ತಡೆಯಬಹುದಿತ್ತು ಎಂದಿದ್ದಾರೆ. ಇದೀಗ ರಾಜಕೀಯ ವಲಯದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ರಾಜಣ್ಣರಿಗೆ ಭೇಟಿ ಮಾಡಲು ರಾಹುಲ್ ಅವಕಾಶ ಕೊಡ್ತಾರಾ?
ಒಟ್ಟಿನಲ್ಲಿ ರಾಜಣ್ಣ ಈ ಪತ್ರದ ನಡೆಯು ಮಾಧ್ಯಮ ಮತ್ತು ರಾಜಕೀಯ ವಲಯದಲ್ಲಿ Full Viral ಆಗುತ್ತಿದ್ದು, ಸಂಚಲನವನ್ನೇ ಸೃಷ್ಠಿಸಿದೆ. ರಾಜಣ್ಣರಿಗೆ ಭೇಟಿ ಮಾಡಲು ರಾಹುಲ್ ಅವಕಾಶ ಕೊಡ್ತಾರಾ ಇಲ್ಲವಾ. ಒಂದು ವೇಳೆ ಹೋದ್ರೆ ಅವರು ಸ್ಪಷ್ಟನೆಗೆ ರಾಹುಲ್ ಸಮ್ಮತಿಯನ್ನು ಸೂಚಿಸುತ್ತಾರೆ. ಮತ್ತೆ ರಾಜಣ್ಣರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತಾ ಕಾದು ನೋಡಬೇಕಿದೆ.
ಇದನ್ನು ಓದಿ : 14 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ಗುಡ್ ಬೈ ಹೇಳಿದ ಕನ್ನಡಿಗ!




