BSNL ಕಚೇರಿಯ ಮುಂಭಾಗ ಸಿಪಿಐ ನಿಂದ Protest.

ಕೇಂದ್ರ ಸರ್ಕಾರವು ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ, ನರೇಗಾ ಹೆಸರನ್ನು ರಾಮ್ ಜಿ ಎಂದು ಮಾಡುತ್ತೇವೆ ಎಂದು ಹೊರಟಿರುವುದು ಒಳ್ಳೆಯದಲ್ಲ. ಈ ಕೂಡಲೇ ಕೇಂದ್ರ ಸರ್ಕಾರ ರಾಮ್ ಜಿ ಮಸೂದೆ 2025 ರನ್ನು ವಾಪಸ್ ಪಡೆಯಬೇಕು ಎಂದು CPI ಪಕ್ಷ ತುಮಕೂರು ವತಿಯಿಂದ BSNL ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಆಗ್ರಹಿಸಿದ್ರು.
ಬಡ ಉದ್ಯೋಗಿಗಳನ್ನ ಮೂಲೆಗುಂಪು
ಇನ್ನು ಈ ಬಗ್ಗೆ ಸಿಪಿಐ ಪಕ್ಷದ ಕಾರ್ಯಕರ್ತರು ಮಾತನಾಡಿ, ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ, ಯೋಜನೆ ನರೇಗಾ ಹೆಸರನ್ನ ಬದಲಾಯಿಸಿ, ರಾಮ್ ಜಿ ಮಸೂದೆನಾ ತರಲು ಹೊರಟಿರುವುದು ಖಂಡನೀಯ ವಿಷಯ. ಇದು 12 ಕೋಟಿ ಬಡ ಉದ್ಯೋಗಿಗಳನ್ನ ಮೂಲೆಗುಂಪು ಮಾಡುವ ಕೆಲಸ ಮಾಡುತ್ತದೆ.
ಇದನ್ನು ಓದಿ : ನಿಮ್ಮ ಅತ್ರ ಪೋನ್ ಇದ್ರೆ ಸಾಕು ಮನೆಯಲ್ಲಿ ಪಡೆಯಬಹುದು ಇ-ಖಾತಾ
ದ್ರೌಪದಿ ಮುರ್ಮು ಮಸೂದೆಗೆ ಸಹಿ ಮಾಡಿರುವುದು ತಪ್ಪು
ಇದರ ಬಗ್ಗೆ ತಿಳಿದುಕೊಳ್ಳದೆ ಒಂದೇ ದಿನದಲ್ಲಿ ಮಸೂದೆಗೆ ಅಂಗೀಕಾರ ಮಾಡಿರುವುದು ತಪ್ಪು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರು ಮಸೂದೆಗೆ ಸಹಿ ಮಾಡಿರುವುದು ತಪ್ಪು. ಈ ಕೂಡಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು, ರಾಮ್ ಜಿ ಮಸೂದೆಯನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ರು
ಇನ್ನು Protest ನಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು.
ಇದನ್ನು ನೋಡಿ : ತುಮಕೂರು ಜಿಲ್ಲಾಸ್ಪತ್ರೆಯ ಕರ್ಮಕಾಂಡ ಮುಗಿಯೋದೇ ಇಲ್ವಾ..?




