Sira : ಶಿರಾ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರು ರಾಷ್ಟ್ರೀಯ ಹೆದ್ದಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

Sira : ಭವಿಷ್ಯದಲ್ಲಿ ಗ್ರೇಟರ್ ಶಿರಾ ನಗರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿರಾ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಪಡಿಸಲು ಶಾಸಕ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯ್ತು.
ಶಿರಾದ ರಾಷ್ಟ್ರೀಯ ಹೆದ್ದಾರಿ–48ನ್ನು ಎಮ್ಮೇರಹಳ್ಳಿಯಿಂದ ದರ್ಗಾ ವೃತ್ತ, ಐಬಿ ವೃತ್ತ, ಕೆಎಸ್ಆರ್ಟಿಸಿ ಡಿಪೋವರೆಗೆ ಸರ್ವಿಸ್ ರಸ್ತೆ ಸಹಿತ ನಾಲ್ಕು ಪಥಗಳ ರಸ್ತೆಯಾಗಿ ಅಭಿವೃದ್ಧಿಪಡಿಸಲು 96.37 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು,NH–48 ಶಿರಾ ಬೈಪಾಸ್ನ 3.23 ಕಿಲೋಮೀಟರ್ ಉದ್ದದ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಹಂತದಲ್ಲಿದೆ.
ಇದನ್ನೂ ಓದಿ : ನಿಮ್ಮ ಅತ್ರ ಪೋನ್ ಇದ್ರೆ ಸಾಕು ಮನೆಯಲ್ಲಿ ಪಡೆಯಬಹುದು ಇ-ಖಾತಾ
ಹುಳಿಯಾರ್–ಶಿರಾ NH–234 ರಸ್ತೆಯ ಬಾಕಿ ಕಾಮಗಾರಿ ಹಾಗೂ ಶಿರಾ–ಬಡವನಹಳ್ಳಿ ನಾಲ್ಕು ಪಥ ರಸ್ತೆ ಅಭಿವೃದ್ಧಿಗೆ ಈಗಾಗಲೇ ಅನುಮತಿ ಪಡೆದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಇನ್ನು ದೆಹಲಿ ವಿಶೇಷ ಪ್ರತಿನಿಧಿ TB ಜಯಚಂದ್ರ ಅವರು ಮಾತನಾಡಿ, ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು.
ಜೊತೆಗೆ ಶಿರಾ–ಬಡವನಹಳ್ಳಿ ನಾಲ್ಕು ಪಥದ ಮಹತ್ವಾಕಾಂಕ್ಷಿ ರಸ್ತೆ ಯೋಜನೆಯನ್ನು ಕೂಡಲೇ ಆರಂಭಿಸಿ ಸಾರ್ವಜನಿಕರ ಸೇವೆಗೆ ಶೀಘ್ರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ಎಂ.ಆರ್. ರಾಜೇಶ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಜಯಶ್ರೀ ಸಾಹೂ, ವಿಶೇಷ ಭೂಸ್ವಾಧೀನ ಅಧಿಕಾರಿ ಧರಣ್ ಪಾಲ್ ಎಸ್, ತುಮಕೂರು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ನರೇಂದ್ರ ಎಚ್.ಸಿ, ತಾಂತ್ರಿಕ ಅಧಿಕಾರಿ ರವಿತೇಜ್ ಲಕಿನಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

MUST WATCH : TB JAYACHANDRA ವಿರುದ್ಧ ಗಂಭೀರ ಆರೋಪ? – ಕೋರ್ಟ್ ನಿಂದ ಇಂಜಿನಿಯರ್ ಅರ್ಜಿ ವಜಾ




