Tumakuru : ಕಚೇರಿ ಅಲೆದಾಟಕ್ಕೆ ಬ್ರೇಕ್, ಇನ್ಮುಂದೆ ಮನೆಯಲ್ಲೇ ಸಿಗುತ್ತೆ ʼಇ-ಖಾತಾ’.

Tumakuru : ನಗರ ಪ್ರದೇಶದಲ್ಲಿ ಸೈಟ್ ಅಥವಾ ಮನೆ ಹೊಂದಿರುವವರಿಗೆ ಇದೊಂದು ಬಹುದೊಡ್ಡ ಸಿಹಿಸುದ್ದಿ. ಇ-ಖಾತಾ ಮಾಡಿಸಲು ಮಧ್ಯವರ್ತಿಗಳಿಗೆ ಹಣ ಕೊಟ್ಟು, ಪಾಲಿಕೆ ಕಚೇರಿಗಳ ಮುಂದೆ ಕ್ಯೂ ನಿಲ್ಲುವ ತಾಪತ್ರಯಕ್ಕೆ ಸರ್ಕಾರ ಶಾಶ್ವತ ಬ್ರೇಕ್ ಹಾಕಲು ಮುಂದಾಗಿದೆ. ‘ನಮ್ಮ ಸ್ವತ್ತು’ ಯೋಜನೆಯಡಿ ಆನ್ಲೈನ್ ಮೂಲಕ ಇ-ಖಾತಾ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಇನ್ಮುಂದೆ ಮನೆಯಲ್ಲೆ ಸಿಗುತ್ತೆ ನಿಮ್ಗೆ ಇ-ಖಾತಾ
ಏನಿದು ಹೊಸ ಬದಲಾವಣೆ ಅಂದ್ರೆ ಇಷ್ಟು ದಿನ ಇ-ಖಾತಾ ಪಡೆಯಲು ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಈಗ ಪೌರಾಡಳಿತ ಇಲಾಖೆಯು www.eaasthi.karnataka.gov.in ಎಂಬ ಹೊಸ ವೆಬ್ಸೈಟ್ ಅಭಿವೃದ್ಧಿಪಡಿಸಿದೆ.
ಇದನ್ನು ಓದಿ : ಆಲೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ
ಇದರಲ್ಲಿ ರಾಜ್ಯದ ನಗರ ವ್ಯಾಪ್ತಿಯ 45 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಕರಡು ದಾಖಲೆಗಳನ್ನು ಅಪ್ಲೋಡ್ ಮಾಡಲಾಗಿದೆ. ನಿಮ್ಮ ಆಸ್ತಿ ವಿವರ ಸರಿಯಾಗಿದ್ದರೆ, ಆನ್ಲೈನ್ನಲ್ಲೇ ಶುಲ್ಕ ಕಟ್ಟಿ ಒರಿಜಿನಲ್ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಇ-ಖಾತಾ ನೋಂದಣಿ ಸಮಸ್ಯೆಗೆ ಪರಿಹಾರ – Tumakuru
ಇನ್ನು ಇ-ಖಾತಾ ನೋಂದಣಿಯಲ್ಲಿ ಆಗುತ್ತಿದ್ದ ಸಮಸ್ಯೆಗಳಿಗೆ ಕೊನೆಗೂ ಪರಿಹಾರ ಕಂಡುಕೊಳ್ಳಲಾಗಿದೆ.ಆನ್ಲೈನ್ ಇ-ಖಾತಾ ಮಾಡಿದೆ.
ಈ ಹೊಸ ವ್ಯವಸ್ಥೆಯಿಂದಾಗಿ ಅಂತಿಮ ಇ-ಖಾತಾ ಅಥವಾ ಹೊಸ ಖಾತಾ ಅನುಮೋದಿಸಲು ಎಆರ್ಒ ಅಥವಾ ಕೇಸ್ ವರ್ಕರ್ ಆಸ್ತಿ ದಾಖಲೆಗಳನ್ನ ಮಾತ್ರ ಪರಿಶೀಲಿಸಬೇಕು. ಒಟ್ಟಾರೆ ಈ ಆನ್ಲೈನ್ ಸೇವೆ ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂದು ಕಾದು ನೋಡಬೇಕಿದೆ.
ಇದನ್ನು ನೋಡಿ : STREET FIGHT | ರೋಡ್ನಲ್ಲೇ 2 ಗ್ಯಾಂಗ್ ಮಧ್ಯೆ ಗಲಾಟೆ- ದೊಣ್ಣೆಯಿಂದ ಹೊಡೆದು ರಕ್ತ ಸುರಿಸಿದ್ರು




