ಹಾಸನದ ಆಲೂರು ತಾಲೂಕು ಕಚೇರಿಗೆ Bomb Threat ಇ-ಮೇಲ್ ಸಂದೇಶ : ಸ್ಥಳಕ್ಕೆ ಪೊಲೀಸರು ದೌಡು.

ಹಾಸನ ಜಿಲ್ಲೆಯ ಆಲೂರು ತಾಲೂಕು ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಕಚೇರಿ ಸಿಬ್ಬಂದಿ ತಹಶೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಮಾಹಿತಿ ನೀಡಿದರು. ತಕ್ಷಣವೇ ತಹಶೀಲ್ದಾರ್ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನು ಓದಿ : ತುಂಗಾ ನದಿಯಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಸಾವು
ತೀವ್ರ ತಪಾಸಣೆ
ಇನ್ನು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕಚೇರಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಕ್ಕೆ ಕಳುಸಿ ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದು, ಯಾವುದೇ ಅಪಾಯವಿಲ್ಲದಂತೆ ಪರಿಶೀಲನೆ ಮಾಡಿದರು.
ಪೊಲೀಸರಿಂದ ಕ್ರಮ
ಇದೇ ತಿಂಗಳ ಡಿಸೆಂಬರ್ 15ರಂದು ಹಾಸನ ಜಿಲ್ಲಾಧಿಕಾರಿಗೆ ಸಹ Bomb Threat ಕರೆ ಬಂದಿದ್ದ ಹಿನ್ನಲೆ ಯಲ್ಲಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾರ್ವಜನಿಕರಲ್ಲಿ ಭಯ ಮೂಡಿಸುವ ಉದ್ದೇಶದಿಂದ ಇಂತಹ ಸುಳ್ಳು ಬೆದರಿಕೆ ಸಂದೇಶಗಳನ್ನ ಕಳುಹಿಸುತ್ತಿರುವವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದನ್ನು ನೋಡಿ : ಮನೆಗೆ ದಾರಿ ಬಿಡದೇ PDO ದಬ್ಬಾಳಿಕೆ ಆರೋಪ- ವಿಷ ಸೇವಿಸಿ ಆಸ್ಪತ್ರೆ ಸೇರಿದ ಅಜ್ಜಿ




