10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲಿಟ್ – Devil ಚಿತ್ರತಂಡ ಅಧಿಕೃತ ಪೋಸ್ಟ್.

ಡಿಸೆಂಬರ್ 11ರಂದು ಬಿಡುಗಡೆಯಾದ ‘ಡೆವಿಲ್’ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಬಿಡುಗಡೆಯಾದ ನಂತರ ನಿರೀಕ್ಷಿತ ಮಟ್ಟದ ಗಳಿಕೆ ಆಗುತ್ತಿಲ್ಲ ಎನ್ನಲಾಗುತ್ತಿರುವ ನಡುವೆಯೇ, ಚಿತ್ರದ ನಿರ್ಮಾಣ ಸಂಸ್ಥೆಯಿಂದ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಒಂದಲ್ಲ, ಎರಡಲ್ಲ Devil ಸಿನಿಮಾದ 10,500ಕ್ಕೂ ಹೆಚ್ಚು ಪೈರಸಿ ಲಿಂಕ್ಗಳನ್ನು ಈಗಾಗಲೇ ಡಿಲೀಟ್ ಮಾಡಲಾಗಿದೆ ಎಂಬುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಪೈರಸಿ ಕಾಟಕ್ಕೆ ಬಲಿ
ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಥಿಯೇಟರ್ಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ ಎಂಬ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ, ಪೈರಸಿ ದೊಡ್ಡ ಮಾರಕವಾಗುತ್ತಿದೆ.
ಚಿತ್ರಗಳು ಥಿಯೇಟರ್ನಲ್ಲಿ ಪ್ರದರ್ಶನವಾಗುತ್ತಿರುವಾಗಲೇ ಅಕ್ರಮವಾಗಿ ರೆಕಾರ್ಡ್ ಮಾಡಿ ಪೈರಸಿ ರೂಪದಲ್ಲಿ ಹರಿಬಿಡಲಾ ಗುತ್ತಿದೆ. ‘ಡೆವಿಲ್’ ಸಿನಿಮಾವೂ ಇದೇ ಪೈರಸಿ ಕಾಟಕ್ಕೆ ಬಲಿಯಾಗಿದೆ.
ಇದನ್ನು ಓದಿ : ಅಭಿಮಾನಿಗಳ ವರ್ತನೆಗೆ ನಟಿ ಸಮಂತಾ ಕಸಿವಿಸಿ

HD ಪ್ರಿಂಟ್ ಲೀಕ್
‘ಡೆವಿಲ್’ ಸಿನಿಮಾ ಬಿಡುಗಡೆಯಾದ ಮರುದಿನವೇ HD Print Leack ಆಗಿರುವುದು ಚಿತ್ರತಂಡಕ್ಕೆ ಭಾರೀ ಚಿಂತೆ ತಂದಿದೆ. ಅದಾದ ಬಳಿಕ ನಿರಂತರವಾಗಿ ಪೈರಸಿ ಲಿಂಕ್ಗಳನ್ನು ತೆಗೆಸುವ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ.
ಪೈರಸಿ ಅನ್ನೋದು ವೈರಸ್
ಚಿತ್ರತಂಡ ತನ್ನ ಹೇಳಿಕೆಯಲ್ಲಿ, “ಪೈರಸಿ ಅನ್ನೋದು ವೈರಸ್. ಇದು ಸಿನಿಮಾನ ಕೊಲ್ಲುತ್ತದೆ. ನಾವು ಇನ್ನೂ ಯುದ್ಧ ಮಾಡುತ್ತಲೇ ಇದ್ದೇವೆ. ಈವರೆಗೂ 10,500ಕ್ಕೂ ಹೆಚ್ಚು ಪೈರಸಿ ಲಿಂಕ್ಗಳನ್ನು ಡಿಲೀಟ್ ಮಾಡಲಾಗಿದೆ. ದಯವಿಟ್ಟು ಪೈರಸಿ ಮಾಡಬೇಡಿ. ಸಿನಿಮಾ ಥಿಯೇಟರ್ನಲ್ಲಿ ನೋಡಿ” ಎಂದು ಮನವಿ ಮಾಡಿದೆ.

ಶಾಕಿಂಗ್ ವಿಚಾರ ಚಿತ್ರತಂಡ ಬಹಿರಂಗ
ಒಂದು ಸಿನಿಮಾಗೆ ಇಷ್ಟೊಂದು ಪ್ರಮಾಣದಲ್ಲಿ ಪೈರಸಿ ಲಿಂಕ್ಗಳು ಸೃಷ್ಟಿಯಾಗಿರುವುದು ವಿಶ್ವ ಮಟ್ಟದಲ್ಲಿ ಇದೇ ಮೊದಲ ಬಾರಿ ಎನ್ನುವ ಶಾಕಿಂಗ್ ವಿಚಾರವನ್ನೂ ಚಿತ್ರತಂಡ ಬಹಿರಂಗಪಡಿಸಿದೆ. ಈ ಘಟನೆ ಪೈರಸಿಯ ಗಂಭೀರತೆಯತ್ತ ಮತ್ತೊಮ್ಮೆ ಗಮನ ಸೆಳೆಯುವಂತೆ ಮಾಡಿದೆ.
ಇದನ್ನು ನೋಡಿ : ತೋಟಕ್ಕೆ ಹೋದ ಮಹಿಳೆಯನ್ನು ಚಿರತೆ ಕೊಂದ ಘಟನೆ SHOCKING | TURUVEKERE NEWS




