Tumkur : ಜಮೀನು ವಿಚಾರಕ್ಕೆ ವ್ಯಕ್ತಿಯೋರ್ವ ಮಹಿಳೆಯ ಬುರುಡೆಯನ್ನೇ ಬಿಚ್ಚಿರೋ ಭಯಾನಕ ಘಟನೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮೈದಾಳದಲ್ಲಿ ನಡೆದಿದೆ.

Tumkur : ಇತ್ತೀಚಿನ ದಿನಗಳಲ್ಲಿ ಮನುಷ್ಯತ್ವ ಅನ್ನೋದು ಮರೆಯಾಗುತ್ತಿದ್ದು, ಮಾತಲ್ಲಿ ಬಗೆಹರಿಯುವ ವಿಚಾರಗಳಿಗೂ ಹೊಡೆದಾಟಕ್ಕೆ ಇಳಿಯುತ್ತಿದ್ದಾರೆ. ಜಮೀನು ವಿಚಾರಕ್ಕೆ ಮನುಷ್ಯತ್ವವನ್ನೇ ಮರೆತು ಚಾಕು, ಚೂರಿಗಳಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರೋ ಪ್ರಕರಣಗಳು ಬೆಳಕಿಗೆ ಬರ್ತಾನೆ ಇವೆ.
ಜಮೀನು ವಿಚಾರಕ್ಕೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ
ಇದೀಗ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಹಿಳೆಯ ಬುರುಡೆಯನ್ನೇ ಬಿಚ್ಚಿರೋ ಭಯಾನಕ ಘಟನೆ ನಡೆದಿದೆ. ತುಮಕೂರು ಜಿಲ್ಲೆ ವೇಗವಾಗಿ ಬೆಳೆಯುತ್ತಿದ್ದು, ಇಂಚು ಜಾಗಕ್ಕೂ ಕೋಟಿ ಬೆಳೆ ಬಾಳುತ್ತಿದೆ. ಜಮೀನಿಗೆ ಕಂಬಗಳನ್ನ ನಿಲ್ಲಿಸಲು ಹೋಗಿದ್ದಕ್ಕೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ತುಮಕೂರು ಗ್ರಾಮಾಂತರದ ಮೈದಾಳದಲ್ಲಿ ನಡೆದಿದೆ.
ಮಹಿಳೆ ಅಂತಾನೂ ನೋಡದೇ ಅಶೋಕ್ ಹಾಗೂ ಚಿಕ್ಕ ಬುಡ್ಡೇಗೌಡ ಎಂಬುವರು ಗುದ್ದಲಿಯಿಂದ ಮಹಿಳೆಯ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಮೈದಾಳ ಗ್ರಾಮದ ಸರ್ವೇ ನಂಬರ್ 9/11 ರಲ್ಲಿ ನಾಲ್ಕು ಗುಂಟೆ ಜಮೀನು ಇದ್ದು, ಚಿಕ್ಕ ಬುಡ್ಡೆಗೌಡ ಹಾಗೂ ಬಾಬು ಪ್ರಸಾದ್ ಎಂಬುವವರಿಗೆ ಜಮೀನು ಸೇರಿರುತ್ತದೆ.
ಇದನ್ನೂ ಓದಿ : ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಎರಡು ಅಡಿ ಜಾಗಕ್ಕೆ ಸಂಬಂಧಿಕರಿಂದಲೇ ಹಲ್ಲೆ
ಇವರಿಬ್ಬರು ಸಂಬಂಧಿಕರಾಗಿದ್ದು, ಇತ್ತೀಚಿಗೆ ಬಾಬು ಪ್ರಸಾದ್ ಅವರು ತಮ್ಮ ಜಮೀನನ್ನು ಸರ್ವೇ ಮಾಡಿಸಿದ್ದು, ಚಿಕ್ಕ ಬುಡ್ಡೆಗೌಡ ಅವರ ಜಮೀನಿನಲ್ಲಿ ಎರಡು ಅಡಿಯಷ್ಟು ಜಾಗ ಇವರಿಗೆ ಸೇರಿದ್ದು, ಆ ಜಾಗಕ್ಕೆ ತಂತಿ ಬೇಲಿ ಹಾಕಲು ಹೋಗಿದ್ದು, ಕಾಮಗಾರಿ ಮಾಡಲು ಕೂಲಿಗಾರರು ಬಂದಿದ್ದಾರೆ ಎಂದು ಬಾಬು ಪ್ರಸಾದ್ ಅವರ ಪತ್ನಿ ಆಶಾ ಹಾಗೂ ಹರಿಣಿಯವರು ಜಮೀನಿಗೆ ತೆರಳಿದ್ದಾರೆ.
ಈ ವೇಳೆ ಜಮೀನಿನ ಬಳಿ ಬಂದ ಅಶೋಕ್, ಚಿಕ್ಕ ಬುಡ್ಡೇಗೌಡ ಹಾಗೂ ಭಾರತಿ ಎಂಬುವರು ಕೇವಲ ಎರಡು ಅಡಿ ಜಾಗಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಮ್ಮ ಜಮೀನಿನಲ್ಲಿ ಕಂಬ ಹಾಕಿಸಲು ಬಂದಿದ್ದೀರಾ ಎಂದು ಏಕಾಏಕಿ ಅಲ್ಲೇ ಇದ್ದ ಗುದ್ದಲಿಯಿಂದ ಆಶಾ ಎಂಬುವವರ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡಿ ಕಾಲಿನಿಂದ ಒದ್ದು, ಎಳೆದಾಡಿ ದಬ್ಬಾಳಿಕೆ
ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಆಶಾ ಅವರು ಕುಸಿದು ಬಿದ್ದಿದ್ರು, ಕೂಡ ಬಿಡದೇ ಭಾರತಿ ಹಾಗೂ ಚಿಕ್ಕಬುಡ್ಡೇಗೌಡ ಅವರು ಆಶಾ ಅವರನ್ನು ಎಳೆದಾಡಿ, ಕೈ ಕಾಲುಗಳಿಂದ ಒದ್ದು ದರ್ಪ ಮೆರೆದಿದ್ದಾರೆ. ಇನ್ನು ಹಲ್ಲೆಯಿಂದಾಗಿ ತೀವ್ರ ರಕ್ತಸ್ರಾವವಾಗಿ ಬಿದ್ದ ಆಶಾ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅವರ ತಲೆಗೆ ಎಂಟು ಹೊಲಿಗೆ ಹಾಕಲಾಗಿದ್ಯಂತೆ.
ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸದ್ಯ ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಸಂಬಂಧಿಕರಾದ ಚೇತನ್ ಎಂಬುವವರು ದೂರು ನೀಡಿದ್ದಾರೆ. ಭಾರತಿ, ಚಿಕ್ಕಬುಡ್ಡೇಗೌಡ ಹಾಗೂ ಅಶೋಕ್ ಎಂಬುವವರ ಮೇಲೆ ದೂರು ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ರೆ̤
ಒಟ್ನಲ್ಲಿ ಅದೇನೆ ಆಗಲಿ, ಕೇವಲ ಎರಡೇ ಎರಡು ಅಡಿ ಜಾಗಕ್ಕಾಗಿ ಅಣ್ಣ- ತಮ್ಮಂದಿರ ರೀತಿ ಇದ್ದವರು ಮಹಿಳೆ ಅಂತಾನೂ ನೋಡದೇ ಬುರುಡೆ ಬಿಚ್ಚಿ ದಬ್ಬಾಳಿಕೆ ನಡೆಸಿದ್ದು ಮಾತ್ರ ದುರಂತವೇ ಸರಿ.
MUST WATCH : ಜಮೀನು ವಿಚಾರಕ್ಕೆ ಸಂಬಂಧಿಕರ ನಡುವೆ ಮಾರಾಮಾರಿ – ಗುದ್ದಲಿಯಿಂದ ಹೊಡೆದು, ರಕ್ತ ಸುರಿಸಿದ್ರು




