ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ನಂತರ ಕಾರಿನಲ್ಲಿ ಹೊತ್ತೊಯ್ದು ಮನಬಂದಂತೆ ಥಳಿಸಿರುವ ಘಟನೆ Gubbi ಯಲ್ಲಿ ನಡೆದಿದೆ.

ಎಂ.ಹೆಚ್ ಪಟ್ಟಣ ಬಳಿಯ ಜಿ.ಎನ್. ಬಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಊಟಕ್ಕೆ ತೆರಳಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಮಾಲೀಕ ಹರೀಶ್ ಮತ್ತು ಸಹಚರ ನವೀನ್ ಎಂಬುವರಿಂದ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ನಂತರ ಕಾರಿನಲ್ಲಿ ಹೊತ್ತೊಯ್ದು ಮನಬಂದಂತೆ ಥಳಿಸಿರುವ ಘಟನೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ.
ಮನ ಬಂದಂತೆ ಹಲ್ಲೆ
ಹಲ್ಲೆಗೊಳಗಾದ ವ್ಯಕ್ತಿ ಗುಬ್ಬಿ ಪಟ್ಟಣದ ಹಳೆ ಏಕೆ ಕಾಲೋನಿಯ ಸುಮಾರು 25 ವರ್ಷದ ಯಶವಂತ ಬಿನ್ ರಾಜಣ್ಣ ಎನ್ನಲಾಗಿದ್ದು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಮ್ಮಪ್ಪ MLA ಕ್ಯಾಂಡಿಡೇಟ್ ನೀವು ಏನು ಮಾಡಿಕೊಳ್ಳುತ್ತಿರ ಎಂದು ಮನ ಬಂದಂತೆ ಹಲ್ಲೆ ಮಾಡಿ, ಕಾರಿನಲ್ಲಿ ಹೊತ್ತೋಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿನಿಂದನೆ ಮಾಡಿದರು ಎಂದು ಯುವಕ ತನ್ನ ಅಳಲು ತೋಡಿಕೊಂಡಿದ್ದಾನೆ.
ಇದನ್ನು ಓದಿ : ಕಾಮಗಾರಿ ವೇಳೆ ಮಣ್ಣಿನಡಿ ಸಿಲುಕಿ ಕಾರ್ಮಿಕ ಸಾವು
ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ
ಇನ್ನು ದಲಿತ ಸೇನೆ ರಾಮ ವಿಲಾಸ ಸಂಘಟನೆಯ ತಾಲೂಕು ಅಧ್ಯಕ್ಷ ಶಿವರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗುಬ್ಬಿ ತಾಲೂಕಿನಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ಈಗೆ ಮುಂದುವರೆದರೆ ಮುಂದೆ ದಲಿತರ ಪಾಡೇನು. ಕೂಡಲೇ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ಅಟ್ರಾಸಿಟಿ ಕೇಸ್ ದಾಖಲು
ಈಗಾಗಲೇ ಗುಬ್ಬಿ ಪೊಲೀಸರು Gubbi ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಹಲ್ಲೆಗೊಳಗಾದ ವ್ಯಕ್ತಿಯಿಂದ ಹೇಳಿಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ. ಅದೇನೇ ಇರಲಿ ಗುಬ್ಬಿ ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ನಿರಂತರವಾಗಿ ಹಲ್ಲೆ ಸೇರಿದಂತೆ ದೌರ್ಜನ್ಯಗಳು ನಡೆಯುತ್ತಿದ್ದು, ಗುಬ್ಬಿ ಪೊಲೀಸ್ ಠಾಣೆ ಒಂದರಲ್ಲಿಯೇ 15 ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದು, ಮುಂದಿನ ದಿನಗಳಲ್ಲಾದರೂ ದಲಿತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಬೀಳಲಿದೆಯ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನು ನೋಡಿ : ಮಾಲೆ ಧರಿಸಿ ಸ್ಕೂಲ್ ಗೆ ಹೋಗಿದ್ರು ಮಕ್ಕಳು – ಮುಖ್ಯ ಶಿಕ್ಷಕಿ ಮಕ್ಕಳನ್ನ ತಳ್ಳಿ, ಹೊಡೆದೆ ಬಿಟ್ರಂತೆ…?!




