Anekal : ಕಾಮಗಾರಿಗಳ ಸಂದರ್ಭದಲ್ಲಿ ಮಣ್ಣಿನಡಿ ಸಿಲುಕಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

Anekal ತಾಲೂಕಿನ ದೊಮ್ಮಸಂದ್ರ ಸಮೀಪ ವರ್ತೂರು ರಸ್ತೆಯಲ್ಲಿರುವ ಮನಸ್ಕಂದ ಬಹುಮಹಡಿ ಅಪಾರ್ಟ್ಮೆಂಟ್ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ತಡರಾತ್ರಿ ಭೀಕರ ದುರ್ಘಟನೆ ಸಂಭವಿಸಿದ್ದು, ಮಣ್ಣು ಕುಸಿದ ಪರಿಣಾಮ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಣ್ಣು ಕುಸಿದು ಸಾವು
ಮೃತರನ್ನು ಚಿದಂಬರಂ (45) ಎಂದು ಗುರುತಿಸಲಾಗಿದೆ. ಚಿದಂಬರಂ ಅವರು ತಮಿಳುನಾಡಿನ ಧರ್ಮಪುರಿ ಜಿಲ್ಲೆ, ಮಣಿಯತಹಳ್ಳಿಯ ನಲ್ಲಂಪಲ್ಲಿ ಗ್ರಾಮದ ನಿವಾಸಿಯಾಗಿದ್ದರು. ಅಪಾರ್ಟ್ಮೆಂಟ್ನ ಒಳಚರಂಡಿ ಕಾಮಗಾರಿ ವೇಳೆ, ಮಣ್ಣು ತೆಗೆಯುವಾಗ ಏಕಾಏಕಿ ಮಣ್ಣು ಕುಸಿದು ಚಿದಂಬರಂ ಅವರ ಮೇಲೆ ಬಿದ್ದಿದ್ದು ಅವರು ಮೃತಪಟ್ಟಿದ್ದಾರೆ.
ಇದನ್ನು ಓದಿ : ಚೈತ್ರಾಗೆ ಉರಿಸೋದು ಅಂದ್ರೆ ಗಿಲ್ಲಿಗೆ ಒಂಥರಾ ಖುಷಿ ಅಂತೆ!
ಮೃತದೇಹ ಆಸ್ಪತ್ರೆಗೆ ರವಾನೆ
ಇನ್ನು ಘಟನಾ ಸ್ಥಳಕ್ಕೆ ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕನ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು.
ಪ್ರಕರಣ ದಾಖಲು
ಈ ಘಟನೆಯ ಬಳಿಕ ಮನಸ್ಕಂದ ಅಪಾರ್ಟ್ಮೆಂಟ್ನ ಅಧಿಕಾರಿಗಳು ಈವರೆಗೂ ಸ್ಥಳಕ್ಕೆ ಬಂದಿಲ್ಲ. ಕಾರ್ಮಿಕರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಮೃತರ ಸಹೋದರ ಮುನಿಯಪ್ಪ ಆರೋಪಿಸಿದ್ದಾರೆ. ಇನ್ನು ಈ ಪ್ರಕರಣ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಪರಿಶೀಲನೆ ನಡೆಯುತ್ತಿದೆ.
ಇದನ್ನು ನೋಡಿ : ಮಹಿಳೆ ಅಂತಾ ಈ ರೀತಿ ಮಾತಾಡ್ತೀರ – ಬಿಜೆಪಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಗರಂ




