ಬಿಗ್ ಬಾಸ್ ಮನೆಯಲ್ಲಿ ರಜತ್ ಹಾಗೂ Gilli ಹಾವಳಿ ಜೋರಾಗಿದೆ.

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ರಜತ್ ಗಿಲ್ಲಿ (Rajath Gilli) ಅವರ ಆಟ ಹಾಗೂ ಮಾತುಗಳು ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುತ್ತಿವೆ. ಇತ್ತೀಚಿನ ಟಾಸ್ಕ್ ವೇಳೆ ರಜತ್ ಹಾಗೂ ಚೈತ್ರಾ ನಡುವೆ ಭಾರೀ ಗಲಾಟೆ ನಡೆದಿದ್ದು, ಜಗಳದ ಮಧ್ಯೆ ಫ್ಯಾಮಿಲಿ ಮ್ಯಾಟರ್ ಕೂಡ ಎಳೆದು ತಂದಿರುವುದು ಮನೆಮಂದಿಯನ್ನು ಅಚ್ಚರಿಗೊಳಿಸಿದೆ.
ಟಾಸ್ಕ್ ಮುಗಿದರೂ ನಿಲ್ಲದ ಜಗಳ
ಟಾಸ್ಕ್ ಮುಗಿದರೂ ಜಗಳ ನಿಲ್ಲದೇ, ಇದೀಗ ರಜತ್ ಅವರು ಗಿಲ್ಲಿಯನ್ನು ಮುಂದಿಟ್ಟು ಚೈತ್ರಾಗೆ ಉರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಚೈತ್ರಾ–ರಜತ್ ಜಗಳಕ್ಕೆ Gilli ಸೇತುವೆಯಾದಂತೆ ಕಾಣಿಸುತ್ತಿದ್ದಾರೆ.
ಇದನ್ನು ಓದಿ : 42ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ
‘ಕೀ ಕೊಟ್ಟರೆ ಸಾಕು ಚೈತ್ರಾ ಕೂಗೋದೇ!’ – Gilli
ಮೊದಲಿಗೆ ಗಿಲ್ಲಿ ಕೀ ಕೊಟ್ಟರೆ ಸಾಕು ಚೈತ್ರಾ ಕಿಟಾರ್ ಅಂತ ಕಿರುಚುತ್ತಾರೆ. ಹೋದ ಸೀಸನ್ ಬರೀ ಬಾಯಿ ಮಾತೇ ಒಂದು ಗೆದ್ದಿಲ್ಲ. ಏಳು ಸಲ ಕಳಪೆ ತಳ್ಳಿದ್ದು ಇದಕ್ಕೆ ಅಂತ ರಜತ್ ಅಂತಿದ್ದಾರೆ. ಶುಕ್ರವಾರ ಬಂದರೆ ಸಾಕು ಹುಷಾರ್ ತಪ್ತಾ ಇದ್ಯಂತೆ ಏಕೆ? ಅಂತ ಪ್ರಶ್ನೆ ಇಟ್ಟಿದ್ದಾರೆ ಗಿಲ್ಲಿ.
ನಾ ಕಂಡ ಚೈತ್ರಾ ಅಂತ ಬುಕ್ ಬರೀಲಾ ಅಂತ ಗಿಲ್ಲಿ ಸಖತ್ ಚೈತ್ರಾ ಬಗ್ಗೆ ಕಾಮಿಡಿ ಮಾಡಿದ್ದಾರೆ. ಚೈತ್ರಾ ಆಡಿಕೊಳ್ಳೋದು ಅಂದರೆ ಒಂಥರಾ ಖುಷಿ ಅಂದಿದ್ದಾರೆ ಗಿಲ್ಲಿ. ಇನ್ನು ಗಿಲ್ಲಿ ಕಾಮಿಡಿಗೆ ಮನೆಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.
ಇನ್ನು ಗಿಲ್ಲಿ ಮಾತಿಗೆ ಚೈತ್ರಾ ಕೂಡ ಕೌಂಟರ್ ಕೊಟ್ಟಿದ್ದಾರೆ. ಬಾಯಿಯಿಂದ ಬಂದಿದ್ದೀನಿ. ಬಾಯಿಯಿಂದಲೇ ಗೆಲ್ತೀನಿ ಅಂತ ಹೇಳಿದ್ದಾರೆ. ನಾನು ಹುಷಾರು ತಪ್ಪಿಸೋಕೆ ಬಂದಿದ್ದೀನಿ ಅಂತ ಕೂಗಾಡಿದ್ದಾರೆ.
ಇದನ್ನು ನೋಡಿ : ನೀವೇನೂ ಒಂದು ರೂಪಾಯಿ ಕೊಟ್ಟಿಲ್ಲ ಸುಮ್ನೆ ಕುತ್ಕೊಳ್ರೀ – BJP ಶಾಸಕರ ಮೇಲೆ ಸಿಡಿದೆದ್ದ ಬೈರತಿ ಸುರೇಶ್




