ಹುಟ್ಟು ಹಬ್ಬದ ಸಂಭ್ರಮದಲ್ಲಿ Sri Murali.

ಸ್ಯಾಂಡಲ್ವುಡ್ನ ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದುತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ನಾಗವಾರ ರಸ್ತೆಯ SNN ಅಪಾರ್ಟ್ಮೆಂಟ್ನಲ್ಲಿ ಇರುವ ಕ್ಲಬ್ನಲ್ಲಿ, ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಶ್ರೀ ಮುರುಳಿ ತಮ್ಮ ಬರ್ತ್ಡೇಯನ್ನು ಆಚರಿಸಿಕೊಳ್ಳುತ್ತಿದ್ದಾರೆ.
ನಟ Sri Murali ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ‘ಉಗ್ರಾಯುಧಮ್’ ರ ಮೂಷನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ವರ್ಷ, ಶ್ರೀಮುರಳಿ ‘ಪರಾಕ್’ ಮತ್ತು ‘ಉಗ್ರಾಯುಧಮ್’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನು ಓದಿ : ಹೊಸ ವರ್ಷ ಆಚರಣೆಗೆ ಪೊಲೀಸರಿಂದ ಗೈಡ್ಲೈನ್ಸ್..!

ಶ್ರೀಮುರಳಿ 2003ರಲ್ಲಿ ತೆರೆಕಂಡ ‘ಚಂದ್ರಚಕೋರಿ’ ಚಿತ್ರದಿಂದ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರುರೆ. 2014ರಲ್ಲಿ ತೆರೆಕಂಡ ‘ಉಗ್ರಂ’ ಸಿನಿಮಾ ಅವರ ಸಿನಿರಂಗಕ್ಕೆ ಶಕ್ತಿ ಹಾಗೂ ಗ್ರ್ಯಾಂಡ್ ಕಮ್ಬ್ಯಾಕ್ ತಂದುಕೊಟ್ಟಿತು. ಇತ್ತೀಚೆಗೆ ತೆರೆಕಂಡ ‘ಬಘೀರ’ ಸಿನಿಮಾ ಕೂಡ ಯಶಸ್ಸು ಗಳಿಸಿದೆ.
ಇನ್ನು ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರು ನಟ ಶ್ರೀಮುರಳಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.

ಇದನ್ನು ನೋಡಿ : ಪತ್ನಿ ಜೊತೆ ಸಹೋದರನ ಚಕ್ಕಂದ: ತಮ್ಮನನ್ನು ಅಣ್ಣನೇ ಕೊಂದ!




