ರೈತರಿಗೆ 1 ಲೀಟರ್ ಹಾಲಿಗೆ ಪ್ರೋತ್ಸಾಹಧನ 7 ರೂ.ಗೆ ಏರಿಕೆ: CM ಸಿದ್ದರಾಮಯ್ಯ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಹಾಲಿನ ಮೇಲಿನ ಸಹಾಯಧನವನ್ನು 7 ರೂಪಾಯಿಗೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಈ ಘೋಷಣೆಯನ್ನು ಅವರು ಇಂದು ಬೆಳಗಾವಿ ಅಧಿವೇಶನದಲ್ಲಿ ತಿಳಿಸಿದ್ದಾರೆ.
ಸಹಾಯ ಧನ ಹೆಚ್ಚಿಸ್ತಾರಂತೆ ಸಿಎಂ
CM ತಿಳಿಸಿದಂತೆ, ರೈತರಿಗೆ ಹಸುಗಳನ್ನು ಸಾಕಿ, ಮೇವು ನೀಡಲು ಸರ್ಕಾರ ಎಲ್ಲಾ ರೀತಿಯ ನೆರವಿನೊಂದಿಗೆ ಮುಂದಾಗಿದೆ. ಹಿಂದಿನಂತೆ ಪ್ರತಿಲೀಟರ್ ಹಾಲಿನ ಮೇಲೆ 5 ರೂಪಾಯಿ ಸಹಾಯಧನ ನೀಡುತ್ತಿದ್ದ ಸರ್ಕಾರ, ಈಗ ಅದನ್ನು 7 ರೂಪಾಯಿಗೆ ಹೆಚ್ಚಿಸುತ್ತಿದೆ.
ಇದನ್ನು ಓದಿ : ಟಾಕ್ಸಿಕ್ಗೆ ಸ್ಪರ್ಧೆ ಕೊಡಲು ಬರುತ್ತಿದೆ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ
ರೈತರು ಹೆಚ್ಚಿನ ಲಾಭವನ್ನು ಪಡೆಯಬೇಕು – CM
“ನಮ್ಮ ಅಧಿಕಾರಾವಧಿಯಲ್ಲಿ ಹಾಲು ಉತ್ಪಾದಕರ ಸಹಾಯಧನವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ರೈತರು ಹೆಚ್ಚಿನ ಲಾಭವನ್ನು ಪಡೆಯಬೇಕು ಎಂದು ನಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ” ಎಂದು ಸಿದ್ದು ಹೇಳಿದ್ದಾರೆ.
ಈ ನಿರ್ಧಾರವು ಹಾಲು ಉತ್ಪಾದಕರಿಗೆ ನೇರವಾಗಿ ಲಾಭ ನೀಡುವುದನ್ನು ಉದ್ದೇಶಿಸಿದೆ ಮತ್ತು ಹಾಲು ಉತ್ಪಾದನೆ ಪ್ರೋತ್ಸಾಹಿಸುವಲ್ಲಿ ಸಹಕಾರಿಯಾಗಲಿದೆ.
ಇದನ್ನು ನೋಡಿ : ದೆಹಲಿಯಲ್ಲಿ ದಟ್ಟ ಮಂಜು; 150 ಕ್ಕೂ ವಿಮಾನ ಸಂಚಾರದಲ್ಲಿ ವ್ಯತ್ಯಯ




